ಮಹೀಂದ್ರಾ ಸತ್ಯಂ ಸಿಬ್ಬಂದಿಗಳಿಗೆ ಸಿಹಿ ಸುದ್ದಿ
ನವದೆಹಲಿ,
ಜೂ.18: ಮಾಹಿತಿ ತಂತ್ರಜ್ಞಾನ ಕಂಪೆನಿ ಮಹೀಂದ್ರಾ ಸತ್ಯಂ ಮುಂದಿನ ಜುಲೈ ಒಂದರಿಂದ ತನ್ನ ಎಲ್ಲಾ ಸಿಬ್ಬಂದಿಗಳಿಗೂ ಸಂಬಳ ಹೆಚ್ಚಳ ಮಾಡಲಿದೆ. ಮೂಲಗಳ ಪ್ರಕಾರ ಸಂಬಳ ಹೆಚ್ಚಿಸುವ ಪ್ರಕ್ರಿಯೆ ಏಪ್ರಿಲ್ ನಿಂದ ಪ್ರಾರಂಭಗೊಂಡಿದ್ದು ಜೂನ್ ನಲ್ಲಿ ಮುಕ್ತಾಯಗೊಳ್ಳಲಿದೆ. id="toptextpromo">ಕಂಪೆನಿಯ
25,000 ನೌಕರರಿಗೂ ಈ ಕುರಿತು ಜೂನ್ 21ರಂದು ಮಾಹಿತಿ ನೀಡಲಾಗುವುದು ಎಂದು ಹೇಳಲಾಗಿದೆ. ಹೆಚ್ಚುತ್ತಿರುವ ವಹಿವಾಟಿಗನುಗುಣವಾಗಿ ಕಂಪೆನಿ 1,000 ರಿಂದ 1,500 ನೌಕರರ ನೇಮಕಾತಿ ಮಾಡಿಕೊಳ್ಳಲಿದೆ ಎನ್ನಲಾಗಿದೆ. ಕಂಪೆನಿ ಈಗಾಗಲೇ 3,000 ಹೊಸಬರನ್ನು ಕಂಪೆನಿಗೆ ನೇಮಕ ಮಾಡಿಕೊಂಡಿದೆ. id='are-slot-1' class='oiad oi-axt oiadv'> id='top-searched-articles'>ಕಂಪೆನಿ
ಹೊಸ ಹೊಸ ಗುತ್ತಿಗೆಗಳನ್ನು ಪಡೆಯುತ್ತಿದ್ದು ಜಪಾನ್ ನ ಆಟೋಮೊಬೈಲ್ ಕಂಪೆನಿಯ ಗುತ್ತಿಗೆ, ಸಿಂಗಪುರ ಸರ್ಕಾರದ ಗುತ್ತಿಗೆ, ಆಸ್ಟ್ರೇಲಿಯಾದ ಪಾನೀಯ ಕಂಪೆನಿಯ ಗುತ್ತಿಗೆ, ಪೂರ್ವ ಏಷ್ಯಾದಲ್ಲಿ ದಕ್ಷಿಣ ಆಫ್ರಿಕಾ ಕಂಪೆನಿಯ ವಿದ್ಯುತ್ ಮತ್ತು ನೀರು ನಿರ್ವಹಣೆ ಕಂಪೆನಿಯ ಗುತ್ತಿಗೆ ಜತೆಗೆ ಯೂರೋಪ್ ನಲ್ಲಿ ಬ್ಯಾಂಕಿಂಗ್ ಉದ್ಯಮದ ಗುತ್ತಿಗೆ ಪಡೆದಿದೆ. ಇದಲ್ಲದೆ ಅಮೇರಿಕಾದ ಕಂಪೆನಿಗಳಿಂದ ದೊಡ್ಡ ಪ್ರಮಾಣದ ಗುತ್ತಿಗೆಯನ್ನೂ ಪಡೆದಿದ್ದು ಶೀಘ್ರ ಬೆಳವಣಿಗೆ ದಾಖಲಿಸುತ್ತಿದೆ ಎನ್ನಲಾಗಿದೆ.











Click it and Unblock the Notifications