ಮಹೀಂದ್ರಾ ಸತ್ಯಂ-ಟೆಕ್ ಮಹೀಂದ್ರಾ ವಿಲೀನ, ಸಂಚಲನ?

ಎಂ ಅಂಡ್ ಎಂ ಸಮೂಹದ ಸಾಫ್ಟ್ ವೇರ್ ಕಂಪನಿ ಸದ್ಯಕ್ಕೆ ಟಿಸಿಎಸ್, ಇನ್ಫೋಸಿಸ್, ಕಾಂಗ್ನಿಜೆಂಟ್, ವಿಪ್ರೋ ಹಾಗೂ ಎಚ್ ಸಿಎಲ್ ಟೆಕ್ನಾಲಜೀಸ್ ನಂತರದ ಸ್ಥಾನದಲ್ಲಿದೆ.
ಎಕಾನಾಮಿಕ್ ಟೈಮ್ಸ್ ವರದಿಯ ಪ್ರಕಾರ ಅಕೌಂಟೆಂಟ್ ಗಳು ಹಾಗೂ ಮರ್ಚೆಂಟ್ ಬ್ಯಾಂಕರ್ ಗಳು ಕಂಪನಿಗಳ ಡೀಲ್ ಮೌಲ್ಯದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ಬಿಎಸ್ ಇ ಹಾಗೂ ಎನ್ ಎಸ್ ಇನಲ್ಲಿ ಎರಡು ಕಂಪನಿಗಳ ಷೇರು ಮೌಲ್ಯ ಗಣನೆ ಬರಲಿದ್ದು, ಷೇರು ಪೇಟೆಯಲ್ಲಿ ಮಂಗಳವಾರ ಶುಭಕರವಾಗಿ ಪರಿಣಮಿಸಿದೆ. ವಿಲೀನ ಪ್ರಕ್ರಿಯೆ ಸುದ್ದಿ ಹರಡುತ್ತಿದ್ದಂತೆ ಎರಡು ಕಂಪನಿ ಷೇರುಗಳು ಏರಿಕೆ ಕಂಡಿದೆ.
ಆದರೆ, ಕಂಪನಿಗಳ ವಿಲೀನ ಅಷ್ಟು ಸುಲಭವಾಗಿಲ್ಲ. ಮಾಜಿ ಸಿಇಒ ರಾಮಲಿಂಗ ರಾಜು ಕೃಪಾಕಟಾಕ್ಷದಿಂದ ಸುಮಾರು 2,500 ಕೋಟಿ ರು ಆದಾಯ ತೆರಿಗೆ ಭಾರವನ್ನು ಮಹೀಂದ್ರ ಸತ್ಯಂ ಹೊತ್ತುಕೊಂಡಿದೆ.












Click it and Unblock the Notifications