Get Updates
Get notified of breaking news, exclusive insights, and must-see stories!

ಸತ್ಯಂ ರಾಜು ಅವರ ಚಂದಮಾಮ ಕಥೆ

Ramalinga Raju
ಇದು ಹಳ್ಳಿಯಿಂದ ಬಂದ ಮಹತ್ವಾಕಾಂಕ್ಷಿ ರೈತ ಕುಟುಂಬದ ಯುವಕನೊಬ್ಬ, ಸಾಫ್ಟ್ ವೇರ್ ಬಗ್ಗೆ ಅಆಇಈ ಗೊತ್ತಿಲ್ಲದ ಹೈದನೊಬ್ಬ ಸಾಫ್ಟ್ ವೇರ್ ಸಾಮ್ರಾಜ್ಯ ಕಟ್ಟಿ ಕೋಟ್ಯಾಧಿಪತಿಯಾಗಿ ಮೆರೆದು, ಉರಿದುಬಿದ್ದ ಕಥೆ. ಹೆಚ್ಚೆಚ್ಚು ಜಮೀನು ಕೊಳ್ಳುವ ಹುಚ್ಚು ಧಾವಂತದಲ್ಲಿ ತನ್ನ ಸುತ್ತಲಿನವರಿಗೆ, ಶೇರುದಾರರ ಕಣ್ಣಿಗೆ ಮಣ್ಣೆರಚಿ, ಕೊನೆಗೆ ತನ್ನ ಕಾಲ್ಕೆಳಗೇ ಕಂಪನವಾಗಿ ಪಾತಾಳ ಸೇರಿದ 'ಮಣ್ಣಿನ ಮಗ'ನ ರೋಚಕ ಕಥಾನಕ. ಕಾರ್ಪೊರೇಟ್ ಜಗತ್ತನ್ನು ಅಲ್ಲೋಲಕಲ್ಲೋಲ ಮಾಡಿದ 'ಸತ್ಯ' ಕಥೆ.

ಕಥಾನಕದ ನಾಯಕ ಮತ್ತಾರೂ ಅಲ್ಲ. ಐದು ಖಂಡಗಳಲ್ಲಿ, ಅರುವತ್ತಾರು ರಾಷ್ಟ್ರಗಳಲ್ಲಿ ತನ್ನ ಸತ್ಯಂ ಕಂಪ್ಯುಟರ್ಸ್ ಎಂಬ ಸಾಫ್ಟ್ ವೇರ್ ಸಾಮ್ರಾಜ್ಯವನ್ನು ವಿಸ್ತರಿಸಿ, ಸುಳ್ಳು ಲೆಕ್ಕ ತೋರಿಸಿ ಏಳು ಸಾವಿರ ಕೋಟಿ ರು. ಗುಳುಂ ಮಾಡಿ ತನ್ನ ಕಾಲ ಮೇಲೇ ಚಪ್ಪಡಿ ಕಲ್ಲು ಎಳೆದುಕೊಂಡು ಜೈಲಿನ ಕಂಬಿ ಎಣಿಸುತ್ತಿರುವ ಧೂಮಕೇತು ಬಿ.ರಾಮಲಿಂಗ ರಾಜು. ಈಗ ತಾನೇ ಕಟ್ಟಿದ ಗಾಳಿಗೋಪುರ ಬಿರುಗಾಳಿಗೆ ಸಿಲುಕಿ ನೆಲಸಮವಾದದ್ದನ್ನು ನೋಡುತ್ತಲಿರುವ ದಯನೀಯ ಸ್ಥಿತಿ ತಂದುಕೊಂಡಿದ್ದಾರೆ. ಕಡಿಮೆ ಹಂತದಲ್ಲಿ 2 ಬಿಲಿಯನ್ ಡಾಲರ್ ಬಾಳುವ ಕಂಪನಿ ಕಟ್ಟಿ ಈಗ ಪೈಸೆಗೆ ಪೈಸೆ ಪರದಾಡುವಂಥ ಹಂತ ತಲುಪಿದ್ದಾರೆ. ಹಣ ಮಾಡುವ ದುರಾಸೆ ರಾಮಲಿಂಗರಾಜುವನ್ನು ನಾಶ ಮಾಡಿದೆ, ಅವರನ್ನು ನಂಬಿದ್ದ ಶೇರುದಾರರನ್ನು ಸರ್ವನಾಶ ಮಾಡಿ ಬೀದಿಗೆ ತಳ್ಳಿದೆ. ಅಂದಹಾಗೆ, ಕಳೆದ ಭಾನುವಾರ ಜನವರಿ 10 ಸತ್ಯಂ ಜೈಲು ಸೇರಿದ ವಾರ್ಷಿಕೋತ್ಸವ ಕೂಡ.

ಇದು ಹೆರಾಲ್ಡ್ ರಾಬಿನ್ಸ್ ನ ಕಾದಂಬರಿ ವಸ್ತು. ರಾಮಲಿಂಗ ರಾಜು ಅವರ rags to riches and back to rags ರೋಚಕ ಕಥಾನಕವನ್ನು ತಿಳಿಯಬೇಕೆಂದವರು ಟೈಮ್ಸ್ ಆಫ್ ಇಂಡಿಯಾದ ಹೈದರಾಬಾದ್ ಸ್ಥಾನಿಕ ಸಂಪಾದಕರಾಗಿರುವ ಕಿಂಗ್ಶುಕ್ ನಾಗ್ ಅವರು ಬರೆದಿರುವ ಪುಸ್ತಕವನ್ನು ಮುದ್ದಾಂ ಓದಲೇಬೇಕು. ರಾಮಲಿಂಗ ರಾಜುವಿನ ಜೀವನದ ಪ್ರತಿಹೆಜ್ಜೆಗಳನ್ನು, ಚಾಣಕ್ಯ ನಡೆಗಳನ್ನು, ಶಕುನಿ ತಂತ್ರಗಳನ್ನು ಅತ್ಯಂತ ಸಮರ್ಥವಾಗಿ ನಾಗ್ ದಾಖಲಿಸಿದ್ದಾರೆ.

ರಾಮಲಿಂಗ ರಾಜು ಅಷ್ಟೊಂದು ಕಡಿಮೆ ಸಮಯದಲ್ಲಿ ಅಷ್ಟೊಂದು ಐಶ್ವರ್ಯದ ಒಡೆಯನಾಗಿದ್ದರೂ ಹೇಗೆ? ಸತ್ಯಂ ಮತ್ತು ಮೇಟಾಸ್ ಕಂಪನಿಗಳೆರಡರಿಂದಲೂ ಸುಳ್ಳು ಲೆಕ್ಕಪತ್ರ ತೋರಿಸಿ ಸತತ ಎಂಟು ವರ್ಷಗಳ ಕಾಲ ಹಣ ದೋಚಿದ ಪರಿಯಾದರೂ ಎಂಥದು? ಕಾನೂನು, ಶೇರುದಾರರು ಮತ್ತು ತನ್ನ ಉದ್ಯೋಗಿಗಳಿಗೇ ಪಂಗನಾಮ ಹಾಕಿದ ಗೈರತ್ತು ಯಾವ ರೀತಿಯದು ಎಂಬುದನ್ನು ತಿಳಿಯಬೇಕಿದ್ದರೆ ಆಧುನಿಕ ಭಾರತದ ಈ ಚಂದಾಮಾಮ ಪುಸ್ತಕ ನಿಮ್ಮ ಕಪಾಟಿನಲ್ಲಿರಬೇಕು.

ದೊಡ್ಡ ಸಾಫ್ಟ್ ವೇರ್ ಕಂಪನಿಯ ಮಾಲಿಕನಾಗಿ, ತಾನೇ ಕಟ್ಟಿದ ಕಂಪನಿಗೆ ಮೋಸ ಮಾಡಿದ ವಂಚಕನಾಗಿ ಏಕಕಾಲದಲ್ಲೇ ಎರಡೆರಡು ಮುಖವಾಡ ಹೊತ್ತು ಮೆರೆದ ರಾಮಲಿಂಗ ರಾಜು ಅವರು ಬದುಕಿನ ಕರಾಳ ಕಥೆ The Double Life Of Ramalinga Raju ಶೇ.25ರ ರಿಯಾಯಿತಿ ದರದಲ್ಲಿ ದೊರೆಯುತ್ತಿದೆ. ತ್ವರೆ ಮಾಡಿರಿ, ಇಂದೇ ಕೊಳ್ಳಿರಿ.

Buy The Double Life Of Ramalinga Raju @ 25% discount

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+