ರಾಜುಗೆ ಏಪ್ರಿಲ್ ನಲ್ಲಿ ಶಿಕ್ಷೆ,ಮೇ ತಿಂಗಳಲ್ಲಿ ಜಾಮೀನು
ಹೈದರಾಬಾದ್, ಮೇ.12: ದೇಶದ ಅತಿದೊಡ್ಡ ಕಾರ್ಪೊರೇಟ್ ವಂಚನೆ ಪ್ರಕರಣ ಸತ್ಯಂ ಕಂಪ್ಯೂಟರ್ಸ್ ಹಗರಣದಲ್ಲಿ ರಾಮಲಿಂಗರಾಜುಗೆ ಶಿಕ್ಷೆಯಾದ ಒಂದು ತಿಂಗಳಲ್ಲೇ ಜಾಮೀನು ಮಂಜೂರಾಗಿದೆ.
ಸತ್ಯಂ ಕಂಪನಿಯ ಸಂಸ್ಥಾಪಕ ರಾಮಲಿಂಗ ರಾಜು ಹಾಗೂ ಇತರೆ 9 ಮಂದಿ ಆರೋಪಿಗಳಿಗೆ ಇಲ್ಲಿನ ನಾಂಪಲ್ಲಿ ಸಿಬಿಐ ಕೋರ್ಟ್ ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಸತ್ಯಂ ಸಂಸ್ಥೆ ಸ್ಥಾಪಕ ರಾಮಲಿಂಗ ರಾಜು ಸೇರಿ 10 ಜನ ಆರೋಪಿಗಳನ್ನು ಅಪರಾಧಿಗಳು ಎಂದು ನಾಂಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಏ.9ರಂದು ಶಿಕ್ಷೆ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.[2009ರಿಂದ 2015 ರ ತನಕ ಟೈಮ್ ಲೈನ್]
ರಾಮಲಿಂಗ ರಾಜು ಮತ್ತು ಅವರ ಸಹೋದರ ರಾಜು ಅವರಿಗೆ ವೈಯಕ್ತಿಕ ರು. 1 ಲಕ್ಷ ಬಾಂಡ್ ಮತ್ತು ಇತರೆ 8 ಜನ ಆರೋಪಿಗಳಿಗೆ ತಲಾ ರು. 50,000 ಬಾಂಡ್ ವಿಧಿಸಿ ಷರತ್ತುಬದ್ಧ ಜಾಮೀನು ನೀಡಲಾಗಿದೆ.
ಈ ಮುಂಚೆ ಪ್ರಮುಖ ಆರೋಪಿ ರಾಮಲಿಂಗ ರಾಜು ಹಾಗೂ ಇತರೆ 9 ಆರೋಪಿಗಳಿಗೆ ತಲಾ 7 ವರ್ಷ ಜೈಲು ಶಿಕ್ಷೆ, ಎಲ್ಲರಿಗೂ 25 ಲಕ್ಷ ರು ದಂಡ ವಿಧಿಸಲಾಗಿತ್ತು. [ಸತ್ಯಂ ಹಗರಣ: ರಾಮಲಿಂಗ ರಾಜುಗೆ 7 ವರ್ಷ ಜೈಲು ಶಿಕ್ಷೆ]
ಸಲ್ಮಾನ್ ಖಾನ್, ಜಯಲಲಿತಾ ಪ್ರಕರಣದಲ್ಲಿ ತ್ವರಿತವಾಗಿ ತೀರ್ಪು ಹೊರ ಬಂದ ಬೆನ್ನಲ್ಲೇ ರಾಜು ಅವರಿಗೆ ಜಾಮೀನು ಸಿಕ್ಕಿರುವುದಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಸಾರ್ವಜನಿಕರಿಂದ ತೀವ್ರ ಆಕ್ಷೇಪ, ಆಕ್ರೋಶ ವ್ಯಕ್ತವಾಗಿದೆ.

ಇನ್ನೂ 52 ತಿಂಗಳುಗಳ ಕಾಲ ಸೆರೆವಾಸ ಬಾಕಿ
ಜನವರಿ 7, 2009ರಂದು ಒಂದು ಇಮೇಲ್ ಸೋರಿಕೆ ಮೂಲಕ ಬಹಿರಂಗಗೊಂಡ ಈ ಪ್ರಕರಣ ದೇಶದ ಐಟಿ ಕ್ಷೇತ್ರ, ಷೇರು ಮಾರುಕಟ್ಟೆಯನ್ನು ತಲ್ಲಣಗೊಳಿಸಿತ್ತು. ಸುಮಾರು 32 ತಿಂಗಳುಗಳ ಕಾಲ ರಾಮಲಿಂಗ ರಾಜು ಜೈಲುವಾಸ ಅನುಭವಿಸಿದ್ದಾರೆ. ಇನ್ನೂ 52 ತಿಂಗಳುಗಳ ಕಾಲ ಸೆರೆವಾಸ ಬಾಕಿ ಇತ್ತು.
|
ರಮೇಶ್ ಅವರಿಂದ ಎಂದಿನಂತೆ ಪನ್ ಟ್ವೀಟ್
ರಮೇಶ್ ಅವರು ಎಂದಿನಂತೆ ಪನ್ ಟ್ವೀಟ್ ಮಾಡಿ ಜಯಲಲಿತಾ ಹಾಗೂ ರಾಜು ತೀರ್ಪು ಒಟ್ಟಿಗೆ ಸೇರಿಸಿದ್ದಾರೆ.
|
ರಾಜುಗೆ ಬೇಲ್ ಅಸಾರಾಮ್ ಸಾಧ್ವಿಗೂ ಕೊಡಿ
ಸಲ್ಮಾನ್, ಜಯಾ, ರಾಜುಗೆ ಜಾಮೀನು ಸಿಗಬಹುದಾದರೆ ಕೇವಲ ಆರೋಪಿಗಳಾಗಿರುವ ಅಸರಾಮ್ ಬಾಪು, ಸಾಧ್ವಿ, ಪುರೋಹಿತ್ ಅವರಿಗೆ ಶಿಕ್ಷೆ ಏಕೆ?
|
ರಾಜುಗೆ ಜಾಮೀನು ಸಿಕ್ಕಿದ ಸುದ್ದಿ ಟ್ವೀಟ್
ರಾಜುಗೆ ಜಾಮೀನು ಸಿಕ್ಕಿದ ಸುದ್ದಿ ಟ್ವೀಟ್ ಗಳು ಸೋಮವಾರ ಸಂಜೆಯಿಂದ ಮುಂದುವರೆದಿದೆ.
|
ನ್ಯಾಯದೇವತೆಯ ಕಣ್ಣುಪಟ್ಟಿಗೂ ಅಣಕ
ನ್ಯಾಯದೇವತೆಯ ಕಣ್ಣುಪಟ್ಟಿಗೂ ಅಣಕ ಮಾಡುವ ಸಾರ್ವಜನಿಕರು ಹೇಳಿದ್ದು ಹೀಗೆ
|
ಗಾಂಧಿ ಕಂಡ ಕನಸು ನನಸಾಗಿದೆ
ನ್ಯಾಯಾಂಗ ವ್ಯವಸ್ಥೆ ಸುಧಾರಣೆಯಾಗಿದೆ. ಗಾಂಧಿಜೀ ಕಂಡ ಕನಸು ನನಸಾಗಿದೆ.












Click it and Unblock the Notifications