ಸತ್ಯಂ ರಾಜುಗೆ 'ಬೇಲ್' ಕೊಟ್ಟ ಸುಪ್ರೀಂ ಕೋರ್ಟ್

Ramalinga Raju gets bail
ನವದೆಹಲಿ, ನ.4: ಸತ್ಯಂ ಐಟಿ ಸಂಸ್ಥೆಯ ಬಹುಕೋಟಿ ರುಪಾಯಿಗಳ ಹಗರಣಕ್ಕೆ ಸಂಬಂಧಿಸಿದಂತೆ ಸತ್ಯಂ ಕಂಪ್ಯೂಟರ್ಸ್‌ನ ಸ್ಥಾಪಕ ಅಧ್ಯಕ್ಷ ಬಿ ರಾಮಲಿಂಗರಾಜು ಅವರಿಗೆ ಸುಪ್ರೀಂಕೋರ್ಟ್ ಶುಕ್ರವಾರ (ನ.4) ಜಾಮೀನು ನೀಡಿದೆ.

ಸುಮಾರು 14,000 ಕೋಟಿ ರು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ರಾಮಲಿಂಗ ರಾಜು ಹಾಗೂ ಇನ್ನಿತರ ಸಹ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಸಿಬಿಐ ವಾದಿಸಿತ್ತು.

ಸತ್ಯಂ ರಾಜು ಜೊತೆಗೆ ಸೋದರ ರಾಮರಾಜು, ಮಾಜಿ ಆಂತರಿಕ ಆಡಿಟರ್ ವಿಎಸ್ ಪ್ರಭಾಕರ್ ಗುಪ್ತಾ, ಅಧಿಕಾರಿಗಳಾದ ಜಿ ರಾಮಕೃಷ್ಣ, ಡಿ ವೆಂಕಟಪತಿ ರಾಜು ಹಾಗೂ ಶ್ರೀಶೈಲಂ ಅವರಿಗೂ ಜಾಮೀನು ಸಿಕ್ಕಿದೆ.

PriceWaterhouseCoopers (PwC)ನ ಆಡಿಟರ್ ಸುಬ್ರಮಣಿ ಗೋಪಾಲಕೃಷ್ಣನ್ ಅಲ್ಲದೆ ಸತ್ಯಂನ ಮಾಜಿ ಸಿಎಫ್ ಒ ಶ್ರೀನಿವಾಸ್ ವದ್ಲಾಮಣಿಗೂ ಬೇಲ್ ನೀಡಲಾಗಿದೆ.

ವಂಚನೆ ಪ್ರಕರಣದಲ್ಲಿ ಏಳುವರ್ಷದ ಶಿಕ್ಷೆಯಲ್ಲಿ ಸುಮಾರು 2ವರ್ಷ, 8 ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿರುವ ರಾಜು ಅವರ ವಕೀಲರ ವಾದವನ್ನು ಸುಪ್ರೀಂಕೋರ್ಟ್ ಪುಷ್ಟಿಕರಿಸಿ, ಜಾಮೀನು ಮಂಜೂರು ಮಾಡಿದೆ.

ಚಂಚಲಗುಡ ಜೈಲಿನಲ್ಲಿ ಎ ದರ್ಜೆ ಖೈದಿಯಾಗಿದ್ದ ರಾಜುಗೆ ಪ್ರತಿ ಸ್ಪರ್ಧಿಯಾಗಿದ್ದ ಗಾಲಿ ರೆಡ್ಡಿಗೆ ರಾಜು ಬಿಡುಗಡೆಯಿಂದ ಸಹಜವಾಗಿ ಸಂತೋಷವಾಗಲಿದೆ. ರಾಜುಗೆ ಸಿಕ್ಕ ವಿವಿಐಪಿ ಖೈದಿ ಸ್ಥಾನಮಾನ ಸಿಗುವ ಚಾನ್ಸ್ ಹೆಚ್ಚಿದೆ ಎಂದು ಗಾಲಿ ರೆಡ್ಡಿ ನಗಾಡುತ್ತಿದ್ದಾರಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+