ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗದಗ ಜಿಲ್ಲಾ ಪಂಚಾಯಿತಿ ನೇಮಕಾತಿ; 17 ಹುದ್ದೆಗಳು

|
Google Oneindia Kannada News

ಗದಗ, ಡಿಸೆಂಬರ್ 23; ಗದಗ ಜಿಲ್ಲಾ ಪಂಚಾಯಿತಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಲು 27/12/2022 ಕೊನೆಯ ದಿನ.

ಗದಗ ಜಿಲ್ಲೆಗೆ ಮಂಜೂರಾಗಿರುವ ತಾಂತ್ರಿಕ ಸಹಾಯಕ ಕೃಷಿ, ತಾಂತ್ರಿಕ ಸಹಾಯಕ ತೋಟಗಾರಿಕೆ, ತಾಂತ್ರಿಕ ಸಹಾಯಕ ಅರಣ್ಯ, ಹುದ್ದೆಗಳು ಸೇರಿ 17 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಹುದ್ದೆ, ಸರ್ಕಾರದ ಉತ್ತರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಹುದ್ದೆ, ಸರ್ಕಾರದ ಉತ್ತರ

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು gadag.nic.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ 9916289100 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಮೈಸೂರು ಜಿಲ್ಲಾ ಪಂಚಾಯಿತಿ ನೇಮಕಾತಿ; ವಿವಿಧ ಹುದ್ದೆಗಳು ಮೈಸೂರು ಜಿಲ್ಲಾ ಪಂಚಾಯಿತಿ ನೇಮಕಾತಿ; ವಿವಿಧ ಹುದ್ದೆಗಳು

Gadag Zilla Recruitment Apply Till December 27Th

ಹುದ್ದೆಗಳ ವಿವರ; ತಾಂತ್ರಿಕ ಸಹಾಯಕರು ಕೃಷಿ (6). ಬಿಎಸ್‌ಸಿ ಅಗ್ರಿ ಕಲ್ಚರ್, ಎಂಎಸ್‌ಸಿ ಅಗ್ರಿಕಲ್ಚರ್ ಪದವೀಧರರಿಗೆ ಆದ್ಯತೆ. ಸಂಬಂಧಿಸಿದ ಕಾರ್ಯ ಕ್ಷೇತ್ರದಲ್ಲಿ ಕನಿಷ್ಠ 36 ತಿಂಗಳ ಅನುಭವ ಹೊಂದಿರಬೇಕು.

ಆರೋಗ್ಯ ಇಲಾಖೆ ನೇಮಕಾತಿ; ಸಿಹಿಸುದ್ದಿ ನೀಡಿದ ಸಚಿವರುಆರೋಗ್ಯ ಇಲಾಖೆ ನೇಮಕಾತಿ; ಸಿಹಿಸುದ್ದಿ ನೀಡಿದ ಸಚಿವರು

ತಾಂತ್ರಿಕ ಸಹಾಯಕರು ತೋಟಗಾರಿಕೆ (5) ಬಿಎಸ್‌ಸಿ ಹಾರ್ಟಿಕಲ್ಚರ್, ಎಂಎಸ್‌ಸಿ ಹಾರ್ಟಿಕಲ್ಚರ್‌ ಪದವೀಧರರಿಗೆ ಆದ್ಯತೆ ನೀಡಲಾಗುತ್ತದೆ. ಸಂಬಂಧಿಸಿದ ಕಾರ್ಯ ಕ್ಷೇತ್ರದಲ್ಲಿ ಕನಿಷ್ಠ 36 ತಿಂಗಳ ಅನುಭವ ಹೊಂದಿರಬೇಕು.

ತಾಂತ್ರಿಕ ಸಹಾಯಕರು ಅರಣ್ಯ (5). ಬಿಎಸ್‌ಸಿ ಫಾರೆಸ್ಟರಿ ಎಂಎಸ್‌ಸಿ ಫಾರೆಸ್ಟರಿ ಹೊಂದಿರುವವರಿಗೆ ಆದ್ಯತೆ. 36 ತಿಂಗಳುಗಳ ಅನುಭವ.

ತಾಂತ್ರಿಕ ಸಹಾಯಕರು ರೇಷ್ಮೆ (1) ಬಿಎಸ್‌ಸಿ ಸೆರಿಕಲ್ಚರ್. ಎಂಎಸ್‌ಸಿ ಸೆರಿಕಲ್ಚರ್ ಪಡೆದವರಿಗೆ ಆದ್ಯತೆ. ಸುಮಾರು 36 ತಿಂಗಳುಗಳ ಅನುಭವ ಹೊಂದಿರಬೇಕು.

ಎಲ್ಲಾ ಹುದ್ದೆಗಳಿಗೆ 21 ರಿಂದ 40 ವರ್ಷಗಳ ವಯೋಮಿತಿ ನಿಗದಿ ಮಾಡಲಾಗಿದೆ. ಎಲ್ಲಾ ಹುದ್ದೆಗಳಿಗೆ ರೂ. 24,000 ಹಾಗೂ ಪ್ರಯಾಣ ಭತ್ಯೆ ಕಿ. ಮೀ. ಗೆ ರೂ. 5ರಂತೆ ಗರಿಷ್ಠ 200 ರೂ.ಗಳನ್ನು ನೀಡಲಾಗುತ್ತದೆ.

English summary
Gadag zilla panchayat invited applications for 17 technical assistant vacancies under MGNREGA. Candidates can apply December 27th, 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X