Google Lay Offs: ಗೂಗಲ್ ಕಂಪನಿಯಿಂದ ಉದ್ಯೋಗಿಗಳ ವಜಾ

ಕ್ಯಾಲಿಫೋರ್ನಿಯಾ, ಏಪ್ರಿಲ್ 18: ತಂತ್ರಜ್ಞಾನ ವಲಯದ ಉದ್ಯಮದಲ್ಲಿ ಉದ್ಯೋಗಿಗಳ ವಜಾ ಪ್ರಕ್ರಿಯೆ ಮುಂದುವರಿದಿದೆ. ಈ ಮಾತಿಗೆ ಪೂರಕವಾಗಿ 'ಆಲ್ಫಾಬೆಟ್' ಒಡೆತನದ 'ಗೂಗಲ್' ಅನಿರ್ದಿಷ್ಟ ಸಂಖ್ಯೆಯಲ್ಲಿ ತನ್ನ ನೌಕರರನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದೆ ಎಂದು ಕಂಪನಿಯ ವಕ್ತಾರರು ಬುಧವಾರ ಮಾಹಿತಿ ನೀಡಿದ್ದಾರೆ.

ಇಡೀ ಕಂಪನಿಯಾದ್ಯಂತ ನೌಕರರನ್ನು ವಜಾಗೊಳಿಸುತ್ತಿಲ್ಲ. ನಿರ್ಧಿಷ್ಟ ವಿಭಾಗದ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗುತ್ತಿದೆ. ಆದರೆ ಎಷ್ಟು ಮಂದಿ ಉದ್ಯೋಗಿಗಳು, ಯಾವೆಲ್ಲ ವಿಭಾಗದಿಂದ ಕೆಲಸ ಕಳೆದುಕೊಳ್ಳಲಿದ್ದರೆ ಎಂಬ ಮಾಹಿತಿಯನ್ನು ವಕ್ತಾರರು ತಿಳಿಸಿಲ್ಲ ಎಂದು ಬ್ಯುಸಿನೆಸ್ ಇನ್‌ಸೈಡರ್ ವರದಿ ಮಾಡಿದೆ.

Google Has Decided to Lay Offs Employees in The Wake of The Economic Downturn

ಈ ದೇಶಗಳಲ್ಲಿ ಉದ್ಯೋಗ ವಜಾ

ಈ ಗೂಗಲ್‌ನ ವಜಾ ಪ್ರಕ್ರಿಯೆಯ ಪ್ರಭಾವವು ಶೇಕಡಾವಾರು ಭಾರತ, ಚಿಕಾಗೋ, ಅಟ್ಲಾಂಟಾ ಮತ್ತು ಡಬ್ಲಿನ್ ಸೇರಿದಂತೆ ಹೂಡಿಕೆ ಮಾಡುತ್ತಿರುವ ಕೇಂದ್ರಗಳ ಮೇಲೆ ಉಂಟಾಗಲಿದೆ. ಈಗಾಗಲೇ ಅನೇಕ ಐಟಿ ಕಂಪನಿಗಳು, ಇವಿ ಆಟೋಮೊಬೈಲ್ ವಲಯದಲ್ಲಿ ಉದ್ಯೋಗಿಗಳ ವಜಾ ಘೋಷಣೆ ಮಾಡಿದೆ.

ಈ ವರ್ಷ ಗೂಗಲ್ ಕಂಪನಿಗಳು ಆರ್ಥಿಕ ಸದೃಢತೆಗಾಗಿ ತನ್ನ ವಲಯದ ಉದ್ಯೋಗಿಗಳ ಕಡಿತದ ನಿರ್ಧಾರ ಮಾಡಿದೆ. 2023 ರ ದ್ವಿತೀಯಾರ್ಧದಿಂದ 2024ರ ಅಂತ್ಯದವರೆಗೆ ನೌಕರರ ತಂಡಗಳು ಹೆಚ್ಚು ಪರಿಣಾಮಕಾರಿಯಾಗಲು, ಉತ್ತಮ ಕಾರ್ಯ ನಿರ್ವಹಣೆಗೆ ಬದಲಾವಣೆ ಮಾಡಲು ಮುಂದಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಗೂಗಲ್ ವಜಾ ಪರಿಣಾಮ ಯಾರ ಮೇಲೆ

ವರದಿಯ ಪ್ರಕಾರ, ಗೂಗಲ್‌ ರಿಯಲ್ ಎಸ್ಟೇಟ್ ಮತ್ತು ಹಣಕಾಸು ಇಲಾಖೆಗಳಲ್ಲಿನ ವಿವಿಧ ತಂಡಗಳಲ್ಲಿರುವ ಉದ್ಯೋಗಿಗಳು ಮೇಲೆ ಪರಿಣಾಮ ಬೀರಲಿದೆ. ಈ ಹಣಕಾಸು ವಿಭಾಗದಲ್ಲಿ ಗೂಗಲ್ ಖಜಾನೆ, ವ್ಯಾಪಾರ ಸೇವೆಗಳು ಮತ್ತು ಆದಾಯ ನಗದು ಕಾರ್ಯಾಚರಣೆಯ ತಂಡಗಳು ಸಹ ಈ ಪ್ರಕ್ರಿಯೆಯಲ್ಲಿ ಸೇರಿಕೊಂಡಿದೆ.

Google Has Decided to Lay Offs Employees in The Wake of The Economic Downturn

ಬ್ಯುಸಿನೆಸ್ ಇನ್‌ಸೈಡರ್ ವರದಿಯ ಪ್ರಕಾರ, ಬೆಂಗಳೂರು, ಮೆಕ್ಸಿಕೋ ಸಿಟಿ ಮತ್ತು ಡಬ್ಲಿನ್‌ಗೆ ವಿಸ್ತರಿಸುವ ಬೆಳವಣಿಗೆಯನ್ನು ಪುನರ್ರಚನೆಯು ಒಳಗೊಂಡಿದೆ ಎಂದು ಗೂಗಲ್‌ನ ಹಣಕಾಸು ಮುಖ್ಯಸ್ಥ ರೂತ್ ಪೊರಾಟ್ ಸಿಬ್ಬಂದಿಗೆ ಇಮೇಲ್ ಕಳುಹಿಸಿದ್ದಾರೆ.

ಮೊದಲೇ ಉದ್ಯೋಗಿಗಳ ವಜಾ ನಿರೀಕ್ಷೆ

ಕಂಪನಿಯು ಹೂಡಿಕೆ ಹೆಚ್ಚಿಸಲು ನಿರ್ಧರಿಸಿದೆ. ಕೃತಕ ಬುದ್ಧಿಮತ್ತೆಯ ಕೊಡುಗೆಗಳನ್ನು ನಿರ್ಮಿಸಲು ಗೂಗಲ್ ತನ್ನ ಎಂಜಿನಿಯರಿಂಗ್, ಹಾರ್ಡ್‌ವೇರ್ ಮತ್ತು ಸಹಾಯಕ ತಂಡಗಳ ಸದಸ್ಯರನ್ನು ಕೆಲಸದಿಂದ ಕೈ ಬಿಟ್ಟಿತು. ಈ ಪ್ರಕ್ರಿಯೆಯು ಕಳೆದ ಜನವರಿಯಲ್ಲಿ ನಡೆದಿದ್ದು, ಈ ವೇಳೆ ನೂರಾರು ಕೆಲಸಗಾರರು ಉದ್ಯೋಗ ಕಳೆದುಕೊಂಡರು.

ಗೂಗಲ್ ಕಂಪನಿಯ ಸಿಇಒ ಸುಂದರ್ ಪಿಚೈ ಅವರು ಈ ಉದ್ಯೋಗ ವಜಾ ಕುರಿತು ಈ ಹಿಂದೆಯೆ ಒಮ್ಮೆ ಉದ್ಯೋಗಿಗಳಿಗೆ ತಿಳಿಸಿದ್ದರು. ಕಂಪನಿಯಲ್ಲಿ ಉದ್ಯೋಗ ವಜಾ ನಿರೀಕ್ಷಿಸಿ ಎಂದು ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+