ಆರೋಗ್ಯ ಇಲಾಖೆ ನೇಮಕಾತಿ; ಸಿಹಿಸುದ್ದಿ ನೀಡಿದ ಸಚಿವರು
ಬೆಂಗಳೂರು, ಡಿಸೆಂಬರ್ 20; ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಬಗ್ಗೆ ಸಚಿವ ಡಾ. ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ. ಒಂದು ವರ್ಷದ ಅವಧಿಗೆ ಹೊರಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಫಾರ್ಮಸಿ ಅಧಿಕಾರಿ ಮತ್ತು ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕೂಡಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಲ್ಪಾವಧಿ ಟೆಂಡರ್ ಕರೆದು ನಿಯಮಾನುಸಾರ ಹುದ್ದೆ ಭರ್ತಿ ಮಾಡಲು ಸೂಚನೆ ನೀಡಲಾಗಿದೆ.
400 ಫಾರ್ಮಸಿ ಅಧಿಕಾರಿಗಳು ಹಾಗೂ 150 ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಚಿವ ಡಾ. ಕೆ. ಸುಧಾಕರ್ ಮಂಗಳವಾರ ಮಾಹಿತಿ ಕೊಟ್ಟಿದ್ದಾರೆ. ಯಾವ ಜಿಲ್ಲೆಗೆ ಎಷ್ಟು ಹುದ್ದೆಗಳು ಮಂಜೂರಾಗಿವೆ ಎಂದು ಸಹ ಸಚಿವರ ಮಾಹಿತಿ ನೀಡಿದ್ದಾರೆ.
ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುವ ಬಗ್ಗೆ ಅನುದಾನವನ್ನು ಖಾಲಿ ಇರುವ ರಾಜ್ಯ ಮತ್ತು ಜಿಲ್ಲಾ ವಲಯದ ಸಂಸ್ಥೆಗಳಲ್ಲಿ ಯಾವ ಲೆಕ್ಕ ಶೀರ್ಷಿಕೆಗಳಡಿ ಮಂಜೂರಾಗಿರುತ್ತದೆಯೋ ಅದೇ ಲೆಕ್ಕ ಶೀರ್ಷಿಕೆಯ ಉಪ ಶೀರ್ಷಿಕೆ 034ರಡಿ ಭರಿಸುವಂತೆ ಹಾಗೂ ಕ್ರಮವಹಿಸಿದ ವರದಿಯನ್ನು ಆಯುಕ್ತಾಲಯಕ್ಕೆ ಸಲ್ಲಿಸಲು ಸೂಚಿಸಲಾಗಿದೆ.

ಫಾರ್ಮಸಿ ಅಧಿಕಾರಿ ಹುದ್ದೆ
ಫಾರ್ಮಸಿ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್. ಎಸ್. ಎಲ್. ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಡಿಪ್ಲೊಮಾ ಇನ್ ಫಾರ್ಮಸಿ ಹೊಂದಿರಬೇಕು ಹಾಗೂ ಕರ್ನಾಟಕ ಫಾರ್ಮಸಿ ಕೌನ್ಸಿಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿರಬೇಕು.
ಚಿತ್ರದುರ್ಗ 21, ಕೋಲಾರ 7, ಚಿಕ್ಕಬಳ್ಳಾಪುರ 6, ದಾವಣಗೆರೆ 16, ಶಿವಮೊಗ್ಗ 22, ತುಮಕೂರು 17, ಮೈಸೂರು 31, ಮಂಡ್ಯ 23, ಚಿಕ್ಕಮಗಳೂರು 28, ಚಾಮರಾಜನಗರ 22, ಹಾಸನ 46, ಕೊಡಗು 15, ದಕ್ಷಿಣ ಕನ್ನಡ 25 ಮತ್ತು ಉಡುಪಿಯಲ್ಲಿ 15 ಫಾರ್ಮಸಿ ಅಧಿಕಾರಿ ಹುದ್ದೆ ಭರ್ತಿ ಮಾಡಲಾಗುತ್ತಿದೆ.

ಕಿರಿಯ ವೈದ್ಯಕೀಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ
ಅರ್ಜಿಗಳನ್ನು ಸಲ್ಲಿಕೆ ಮಾಡುವವರು ಎಸ್. ಎಸ್. ಎಲ್. ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ 2 ವರ್ಷದ ಕರ್ನಾಟಕ ವೊಕೇಷನಲ್, ಶೈಕ್ಷಣಿಕ ಬೋರ್ಡ್‌ನಿಂದ ಡಿಪ್ಲೊಮಾ
ಅಥವಾ ಪಿ.ಯು.ಸಿ (ವಿಜ್ಞಾನ), ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ಅರೆ-ವೈದ್ಯಕೀಯ ಮಂಡಳಿಯು ನಡೆಸುವ 2 ವರ್ಷದ ಪ್ರಯೋಗಶಾಲಾ ತಂತ್ರಜ್ಞರ ತರಬೇತಿ ಹೊಂದಿರಬೇಕು.
ಎಸ್. ಎಸ್. ಎಲ್. ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ಅರೆ ವೈದ್ಯಕೀಯ ಮಂಡಳಿಯು ನಡೆಸುವ 3 ವರ್ಷದ ವೈದ್ಯಕೀಯ ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ ಡಿಪ್ಲೊಮಾ ಹೊಂದಿರಬೇಕು.

ಖಾಲಿ ಇರುವ ಹುದ್ದೆಗಳ ವಿವರಗಳು
ಫಾರ್ಮಸಿ ಅಧಿಕಾರಿ ಹುದ್ದೆಗಳು ಬೆಳಗಾವಿಯಲ್ಲಿ 8, ಬಾಗಲಕೋಟೆ 2, ವಿಜಯಪುರ 3, ಗದಗ 2, ಹಾವೇರಿ 13, ಉತ್ತರ ಕನ್ನಡ 25, ಕಲಬುರಗಿ 25, ಯಾದಗಿರಿ 8, ಕೊಪ್ಪಳ 3, ಬೀದರ್ 5, ರಾಯಚೂರು 6, ಬಳ್ಳಾರಿ 6 ಸೇರಿದಂತೆ ಒಟ್ಟು 400 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಸಚಿವ ಡಾ. ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.
ಕಿರಿಯ ವೈದ್ಯಕೀಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಬೆಂಗಳೂರು ನಗರ 2, ಬೆಂಗಳೂರು ಗ್ರಾಮಾಂತರ 1, ರಾಮನಗರ 4, ಕೋಲಾರ 4, ಚಿಕ್ಕಬಳ್ಳಾಪುರ 9, ದಾವಣಗೆರೆ 1, ಶಿವಮೊಗ್ಗ 7 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಹುದ್ದೆಗಳು ಖಾಲಿ ಇರುವ ಜಿಲ್ಲೆಗಳು
ತುಮಕೂರು 9, ಮೈಸೂರು 10, ಮಂಡ್ಯ 10, ಚಿಕ್ಕಮಗಳೂರು 6, ಚಾಮರಾಜನಗರ 11, ಹಾಸನ 8, ಕೊಡಗು 6, ದಕ್ಷಿಣ ಕನ್ನಡ 8, ಉಡುಪಿ 2, ಬೆಳಗಾವಿ 4, ಬಾಗಲಕೋಟೆ 2, ವಿಜಯಪುರ 1, ಗದಗ 2, ಹಾವೇರಿ 7, ಉತ್ತರ ಕನ್ನಡ 11, ಕಲಬುರಗಿ 2, ಯಾದಗಿರಿ 4, ಕೊಪ್ಪಳ 4, ಬೀದರ್ 2, ರಾಯಚೂರು 6, ಬಳ್ಳಾರಿ 7 ಸೇರಿದಂತೆ ಒಟ್ಟು 150 ಕಿರಿಯ ವೈದ್ಯಕೀಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.












Click it and Unblock the Notifications