Railway Jobs: 10ನೇ ತರಗತಿ ಪಾಸಾದರೂ ಕೇಂದ್ರ ಸರ್ಕಾರಿ ಉದ್ಯೋಗ, ನೇಮಕಾತಿ ವಿವರ
ನವದೆಹಲಿ, ಏಪ್ರಿಲ್ 11: ಆಗ್ನೇಯ ಮಧ್ಯ ರೈಲ್ವೆ (SEC Railway) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ಪ್ರಯುಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಅದರಲ್ಲೂ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಈ ಅವಕಾಶ ಸದುಪಯೋಗ ಮಾಡಿಕೊಳ್ಳಬೇಕಿದೆ.
ಆಗ್ನೇಯ ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿ ಒಟ್ಟು 733 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳು ಖಾಲಿ ಇವೆ. ಆಸಕ್ತರು ಈ ಕೂಡಲೇ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಮೊದಲು ಅಧಿಸೂಚನೆ ಓದಿಕೊಂಡು, ದಾಲಾತಿಗಳ ಬಗ್ಗೆ ತಿಳಿದುಕೊಂಡು ಸಲ್ಲಿಸಬೇಕು ಎಂದರು.

ಅರ್ಜಿ ಸಲ್ಲಿಕೆ ಮೊದಲು ಹುದ್ದೆಗಳ ವಿವರ, ವಯೋಮಿತಿ, ಶೈಕ್ಷಣಿಕ ಅರ್ಹತೆ ಸೇರಿದಂತೆ ನೇಮಕಾತಿ ಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
ನೇಮಕಾತಿ ಪ್ರಕ್ರಿಯೆ ವಿವರ
ಸಂಸ್ಥೆ ಹೆಸರು: ಆಗ್ನೇಯ ಮಧ್ಯ ರೈಲ್ವೆ (SEC Railway)
ಹುದ್ದೆ ಹೆಸರು: ಟ್ರೇಡ್ ಅಪ್ರೆಂಟಿಸ್
ಖಾಲಿ ಹುದ್ದೆಗಳ ಸಂಖ್ಯೆ: ಒಟ್ಟು 733
ಪೋಸ್ಟಿಂಗ್ ಎಲ್ಲಿ?: ಛತ್ತೀಸ್ಗಢ
ಅರ್ಜಿ ಸಲ್ಲಿಕೆ ಕೊನೆ ದಿನ: ನಾಳೆ ಏಪ್ರಿಲ್ 12
ಯಾವೆಲ್ಲ ಹುದ್ದೆಗಳು ಖಾಲಿ ಇವೆ?
ಛತ್ತೀಸ್ಗಢ ರೈಲ್ವೆ ವಲಯದಲ್ಲಿ ಕಾರ್ಪೆಂಟರ್ ಹುದ್ದೆಗಳು 38, COPA ಹುದ್ದೆ 100, ಡ್ರಾಫ್ಟ್ಸ್ಮ್ಯಾನ್ 10, ಎಲೆಕ್ಟ್ರಿಷಿಯನ್ ಹುದ್ದೆ 137, ಎಲೆಕ್ಟ್ರಿಷಿಯನ್ (ಮೆಕ್ಯಾನಿಕ್) ಹುದ್ದೆಗಳು 5, ಫಿಟ್ಟರ್ ಹುದ್ದೆ 187, ಮೆಷಿನಿಸ್ಟ್ ಹುದ್ದೆ 4, ಪೈಂಟರ್ 42,
ಪ್ಲಂಬರ್ 25, ಮೆಕ್ಯಾನಿಕ್ ಹುದ್ದೆ 15, ಸ್ಟೆನೊ(ಇಂಗ್ಲಿಷ್) ಹುದ್ದೆ 27, SMW- 4, ಸ್ಟೆನೊ (ಇಂಗ್ಲಿಷ್) ಹುದ್ದೆ 27,
ಸ್ಟೆನೊ (ಹಿಂದಿ) ಹುದ್ದೆ 19, ವೈರ್ಮ್ಯಾನ್ 80, ಡೀಸೆಲ್ ಮೆಕ್ಯಾನಿಕ್ ಹುದ್ದೆ 12, ಕಾಮಿಕಲ್ ಲ್ಯಾಬೊರೇಟರಿ ಅಸಿಸ್ಟೆಂಟ್ 4 ಹಾಗೂ ಡಿಜಿಟಲ್ ಫೋಟೋಗ್ರಾಫರ್ ಹುದ್ದೆ 2 ಟರ್ನರ್ ಹುದ್ದೆ 4, ವೆಲ್ಡರ್ 4 ಹುದ್ದೆ ಸೇರಿ ಒಟ್ಟು 733 ಹುದ್ದೆಗಳು ಖಾಲಿ ಇವೆ ಎಂದು ಅಧಿಸೂಚನೆ ತಿಳಿಸಿದೆ.

ವಿದ್ಯಾರ್ಹತೆ ಏನು?
ಇಷ್ಟು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಷ್ಟಪಡುವ ಆಸಕ್ತ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, ಐಟಿಐ ಮಾಡಿರಬೇಕು ಎಂದು ಆಗ್ನೇಯ ಮಧ್ಯ ರೈಲ್ವೆ ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.
ವಯಸ್ಸಿನ ಮಿತಿ ಮಾಹಿತಿ
ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳ ವಯಸ್ಸು ಇದೇ ತಿಂಗಳ ಏಪ್ರಿಲ್ 12ಕ್ಕೆ ಕನಿಷ್ಠ 15 ವರ್ಷ ಮತ್ತು ಗರಿಷ್ಠ 24 ವರ್ಷ ಇರಬೇಕು. ಮೀಸಲಾತಿ ಅನುಗುಣವಾಗಿ ಆಯಾ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ ಎಂದು ಆಗ್ನೇಯ ಮಧ್ಯ ರೈಲ್ವೆ ನೇಮಕಾತಿ ಅಧಿಸೂಚನೆ ಹೇಳಿದೆ.
ಆಯ್ಕೆ ವಿಧಾನ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಅವರ ಅಂಕದ ಆಧಾರದಲ್ಲಿ ಮೊದಲು ಶಾರ್ಟ್ ಲಿಸ್ಟ್ ಮಾಡಲಾಗುವುದು. ನಂತರ ಅವರಿಗೆ ಲಿಖಿತ ಪರೀಕ್ಷೆ ನಡೆಸಿ, ಅಲ್ಲಿ ಆಯ್ಕೆ ಆಗುವವರ ದಾಖಲಾತಿ ಪರಿಶೀಲನೆ ಮಾಡಲಾಗುವುದು. ಬಳಿಕ ವೈಯಕ್ತಿಕ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ವೇತನ ಮಾಹಿತಿ: ಶುಲ್ಕ ಇಲ್ಲ
ವೇತನ ನಿಗದಿಪಡಿಸಿಲ್ಲ, ನಿಯಮಗಳನುಸಾರ ವೇತನ ನೀಡಲಾಗುತ್ತದೆ. ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಛತ್ತೀಸ್ಗಢದ ಬಿಲಸ್ಪುರ ನಲ್ಲಿ ಪೋಸ್ಟಿಂಗ್ ನೀಡಲಾಗುವುದು. ಇನ್ನೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ನಿಗದಿ ಮಾಡಿಲ್ಲ ಎಂದು ತಿಳಿಸಲಾಗಿದೆ.
ಆಸಕ್ತು ಅಭ್ಯರ್ಥಿಗಳು ಈಕೂಡಲೇ ಆನ್‌ಲೈನ್ ಮೂಲಕ (https://www.apprenticeshipindia.gov.in/) ಸಲ್ಲಿಸಬೇಕು ಎಂದು ರೈಲ್ವೆ ವಲಯ ತಿಳಿಸಿದೆ.












Click it and Unblock the Notifications