TCS Recruitment: 10,000 ಹೊಸ ಉದ್ಯೋಗಿ ನೇಮಿಸಿಕೊಂಡ ಟಿಸಿಎಸ್: ವರದಿ
ಬೆಂಗಳೂರು, ಏಪ್ರಿಲ್ 11: ಬೃಹತ್ ಕಂಪನಿಗಳು ಉದ್ಯೋಗ ಕಡಿತ ಮುಂದುವರೆಸಿರುವ ಮಧ್ಯೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ತನ್ನ ನೇಮಕಾತಿ ಪ್ರಕ್ರಿಯೆಯಲ್ಲಿ 10,000 ಕ್ಕೂ ಹೆಚ್ಚು ಫ್ರೆಶರ್‌ಗಳನ್ನು ನೇಮಿಸಿಕೊಂಡಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
ಹೊಸ ನೇಮಕಾತಿ ಮೂಲಕ ಟಿಸಿಎಸ್ ಐಟಿ ಕಂಪನಿಯು ಉದ್ಯೋಗಿಗಳ ಗಾತ್ರ ಹೆಚ್ಚಿಸಿಕೊಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಬೇಡಿಕೆಗೆ ಅನುಗುಣವಾಗಿ ಮಾರ್ಚ್‌ನಲ್ಲಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NQT) ಮೂಲಕ ಹೊಸ ನೇಮಕಾತಿ ಆರಂಭಿಸಿದೆ. ಏಪ್ರಿಲ್ 10 ವರೆಗೆ ಅರ್ಜಿ ಸ್ವೀಕರಿಸಿದೆ.

ಇತ್ತೀಚೆಗೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಏಪ್ರಿಲ್ 26 ರಂದು ಪರೀಕ್ಷೆಗಳನ್ನು ನಡೆಸುವುದಾಗಿ ಘೋಷಿಸಿತ್ತು. ಮೂರು ವಿಭಾಗಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ ಎಂದು ಹೇಳಿದೆ. ವಿವಿಧ ಹುದ್ದೆಗಳ ನೇಮಕಕ್ಕೆ ವಾರ್ಷಿಕವಾಗಿ ₹3.36 ಲಕ್ಷ ಪ್ಯಾಕೇಜ್ ₹9-11.5 ಲಕ್ಷ ಪ್ಯಾಕೇಜ್ ಅವರೆಗೆ ಮಾತನಾಡಿ ನೇಮಕ ಮಾಡಿಕೊಂಡಿದೆ ಎನ್ನಲಾಗಿದೆ.
ಟಿಸಿಎಸ್ ಭಾಗವಾದ ವಿದ್ಯಾರ್ಥಿಗಳು
ಟಿಸಿಎಸ್ ನಲ್ಲಿ ಡಿಜಿಟಲ್ ಮತ್ತು ಪ್ರೈಮ್ ಪ್ರೊಫೈಲ್‌ಗಳನ್ನು ಸ್ವೀಕರಿಸುವ ವಿದ್ಯಾರ್ಥಿಗಳನ್ನು ಅಭಿವೃದ್ಧಿ ಭಾಗವಾಗಿ ನಿಯೋಜಿಸಲಾಗುವುದು. ವಿವಿಧ ಎಲ್ಲಾ ಕಾಲೇಜುಗಳ ಅತ್ಯುತ್ತಮ ಪ್ರತಿಭಾನ್ವಿತ ವಿದ್ಯಾರ್ಥಿಗಳು TCS ನಲ್ಲಿ ಉದ್ಯೋಗ ಪಡೆಯುತ್ತಾರೆ.
ಬೃಹತ್ ಕಂಪನಿಯ ಭಾಗವಾಗಿ ವಿದ್ಯಾರ್ಥಿಗಳು ಕೆಲಸ ಮಾಡಲಿದ್ದಾರೆ ಎಂದು ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವೃತ್ತಿ ಅಭಿವೃದ್ಧಿ ಕೇಂದ್ರದ ನಿರ್ದೇಶಕ ವಿ ಸ್ಯಾಮ್ಯುಯೆಲ್ ರಾಜ್‌ಕುಮಾರ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
963 ವಿದ್ಯಾರ್ಥಿಗಳು ಆಪರ್ ಲೆಟರ್
ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಒಟ್ಟು 963 ವಿದ್ಯಾರ್ಥಿಗಳು ಟಿಸಿಎಸ್‌ನಿಂದ ಆಫರ್ ಲೆಟರ್‌ಗಳನ್ನು ಸ್ವೀಕರಿಸಿದ್ದಾರೆ. ಶಾಸ್ತ್ರ ವಿಶ್ವವಿದ್ಯಾಲಯದ ಉಪಕುಲಪತಿ ಎಸ್ ವೈದ್ಯಸುಬ್ರಮಣ್ಯಂ, ಕಾಲೇಜಿನಲ್ಲಿ 1,300 ವಿದ್ಯಾರ್ಥಿಗಳಿಗೆ 2,000 ಆಫರ್ ಲೆಟರ್‌ಗಳನ್ನು ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಟಿಸಿಎಸ್ ಕಂಪನಿಯು ಪ್ರಸಕ್ತ ಹಣಕಾಸು ವರ್ಷದಲ್ಲಿ 40,000 ಹೊಸಬರನ್ನು (ಫ್ರೆಶರ್) ನೇಮಕ ಮಾಡಿಕೊಳ್ಳಲು ಯೋಜಿಸಿದೆ. ಇದೇ ರೀತಿ ಕಳೆದ ವರ್ಷ (2023) ರಲ್ಲಿ ಕಂಪನಿಯು 22,600 ಉದ್ಯೋಗಿಗಳನ್ನು ಸೇರ್ಪಡೆ ಮಾಡಿಕೊಂಡಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.












Click it and Unblock the Notifications