TCS Employees: ಎಲ್ಲ ಉದ್ಯೋಗಿಗಳಿಗೆ ಗುಡ್ ನ್ಯೂಸ್ ಕೊಟ್ಟ ಐಟಿ ಕಂಪನಿ
ಬೆಂಗಳೂರು, ಏಪ್ರಿಲ್ 14: ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾಗಿ ಸೇವೆ ನೀಡುತ್ತಿರುವ 'ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್' (TCS) ಸಾವಿರಾರು ಫ್ರೆಶೆರ್ಸಸ್ ಸೇರಿದಂತೆ ಎಲ್ಲ ಉದ್ಯೋಗಿಗಳಿಗೆ ವೇತನ ಹೆಚ್ಚಳದ ಸಿಹಿ ಸುದ್ದಿಯನ್ನು ಘೋಷಣೆ ಮಾಡಿದೆ.
ಹೌದು, ಉದ್ಯೋಗಿಗಳ ವಜಾ (IT Layoffs) ಮುಂದುವರಿದ ಇಂದಿನ ಸನ್ನಿವೇಶದಲ್ಲಿ ಟಿಸಿಎಸ್ ವೇತನ ಹೆಚ್ಚಳದ ನಿರ್ಧಾರ ಮಾಡಿದೆ. ಕಂಪನಿಯು ತನ್ನ ಉದ್ಯೋಗಿಗಳಿಗೆ ವಾರ್ಷಿಕ ವೇತನ ಹೆಚ್ಚಿಸುವುದಾಗಿ ಘೋಷಿಸಿದೆ.

ಕಂಪನಿ ಕಾರ್ಯನಿರ್ವಹಣೆಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ತೋರಿದ ಉದ್ಯೋಗಿಗಳಿಗೆ ಎರಡಂಕಿ ವೇತನ ಹೆಚ್ಚಳ ಮಾಡುವುದಾಗಿ 'ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್' (TCS) ಎಚ್‌ಆರ್ ಮುಖ್ಯಸ್ಥರಾದ ಮಿಲಿಂದ್ ಲಕ್ಕದ್ ಮಾಹಿತಿ ನೀಡಿದ್ದಾರೆ ಎಂದು ವರದಿ ಆಗಿದೆ.
ಎಷ್ಟು ಹೆಚ್ಚಾಗಲಿದೆ ವೇತನ?
ಯಾರೆಲ್ಲ ಉದ್ಯೋಗಿಗಳು ಉತ್ತಮ ಕಾರ್ಯಕ್ಷಮತೆ ಪ್ರದರ್ಶಿಸಿದ್ದಾರೆ ಅವರಿಗೆ ಶೇಕಡಾ. 4.5ರಷ್ಟು ವೇತನ ಹೆಚ್ಚಳ ಮಾಡಲಾಗುವುದು. ಇದರೊಂದಿಗೆ ಇತ್ತಿಚೆಗೆ ನೇಮಕಗೊಂಡಿರುವ 40000 ಫ್ರೆಶೆರ್ಸಸ್‌ಗಳಿಗೂ ಸಂಬಳ ಹೆಚ್ಚಳ ಮಾಡಲು ಚಿಂತಿಸಿದ್ದೇವೆ ಎಂದು ಮಿಲಿಂದ್ ಲಕ್ಕದ್ ಹೇಳಿದ್ದಾರೆ.
ಕೋವಿಡ್ ವೇಳೆ ಇತರ ಕಂಪನಿಗಳಂತೆ ಟಿಸಿಎಸ್ ಸಹ ಉದ್ಯೋಗಿಗಳ ವಜಾ ಮಾಡಿತ್ತು. ನಂತರದ ದಿನಗಳಲ್ಲಿ ಅಂದರೆ ಇತ್ತೀಚೆಗಷ್ಟೇ ಟಿಸಿಎಸ್ ಕಂಪನಿಯು ತನ್ನ 10000 ಹೊಸ ಉದ್ಯೋಗಿಗಳನ್ನು (ಫ್ರೆಶೆರ್ಸಸ್) ನೇಮಕ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.

ಈ ಕಾಲೇಜಿನ 900ಕ್ಕೂ ಅಧಿಕ ಜನರಿಗೆ ಕೆಲಸ
ವಾರ್ಷಿಕ ನೇಮಕಾತಿ ಡ್ರೈವ್‌ನ ಭಾಗವಾಗಿ ಇಷ್ಟು ಹೊಸ ಉದ್ಯೋಗಿಗಳಿಗೆ ಕೆಲಸ ನೀಡಿರುವ ಟಿಸಿಎಸ್ ಪ್ರಮುಖ ಕಾಲೇಜುಗಳಿಂದ ಕ್ಯಾಂಪಸ್ ಆಯ್ಕೆ ಸಹ ಮಾಡಿಕೊಂಡಿದೆ. ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿಐಟಿ) ಸುಮಾರು 900ಕ್ಕೂ ಅಧಿಕ ವಿದ್ಯಾರ್ಥಿಗಳು ಟಿಸಿಎಸ್‌ನಿಂದ ಆಫರ್ ಲೆಟರ್ ಸ್ವೀಕರಿಸಿದ್ದಾರೆ.












Click it and Unblock the Notifications