Tesla Layoffs: EV ಕಾರು ಬೇಡಿಕೆ ಕುಸಿತ: ಬೃಹತ್ ಉದ್ಯೋಗಿಗಳ ವಜಾ ನಿರ್ಧಾರ
ಬೆಂಗಳೂರು, ಏಪ್ರಿಲ್ 15: ವೆಚ್ಚ ನಿರ್ವಹಣೆ, ಯೋಜನೆ ಸ್ಥಗಿತದಂತಹ ಕಾರಣ ಹೇಳಿಗೆ ಐಟಿ ದಿಗ್ಗಜ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾಗೊಳಿಸಿದ್ದರು. ಇದೀಗ ಈ ಸಾಲಿಗೆ ಪ್ರತಿಷ್ಠಿತ ಕಾರು ಕಂಪನಿಯಾದ ಟೆಸ್ಲಾ (Tesla) ಸಹ ತನ್ನ ಉದ್ಯೋಗಿಗಳನ್ನು ಕಡಿತಗೊಳಿಸಲಿದೆ ಎಂದು ವರದಿ ಆಗಿದೆ.
ಟೆಸ್ಲಾ ಕಂಪನಿಯು ಎಲೆಕ್ಟ್ರಿಕ್ ವಾಹನ ತಯಾರಕ ವಿಭಾಗದಲ್ಲಿನ ಹೆಚ್ಚಿನ ಸಂಖ್ಯೆ ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸಿದೆ ಎಂಬ ವರದಿ ಬಿತ್ತರವಾಗಿದೆ. ಇದರ ಬೆನ್ನಲ್ಲೆ ಉದ್ಯೋಗಿಗಳಲ್ಲಿ ಆತಂಕ ಹೆಚ್ಚಾಗಿದೆ. ಟೆಸ್ಲಾ ಕಂಪನಿಯು ಮಾರಾಟದಲ್ಲಿನ ಲೋಪದೋಷ ಸರಿಪಡಿಸಿಕೊಳ್ಳಲು, ಅದರ ಮೇಲೆ ಹಿಡಿತ ಸಾಧಿಸಲು ದೊಡ್ಡ ಮಟ್ಟದಲ್ಲಿ ನೌಕರರ ವಜಾಗೆ ನಿರ್ಧರಿಸಿದೆ ಎಂದು ಸುದ್ದಿ ಸಂಸ್ಥೆಗಳಾದ 'ಬಿಸಿನೆಸ್ ಇನ್ಸೈಡರ್' ಮತ್ತು 'ಎಲೆಕ್ಟ್ರೆಕ್' ಎರಡು ಪ್ರತ್ಯೇಕ ವರದಿ ಮಾಡಿವೆ.

ಶೇಕಡಾ 20 ರಷ್ಟು ವಜಾ?
ಈ ಎರಡೂ ವರದಿಗಳು ಟೆಸ್ಲಾ ಕಚೇರಿಗಳ ಸುತ್ತಲಿನ ವಿಚಾರಗಳಿಗೆ ಸಂಬಂಧ ವದಂತಿಗಳು ಹರಡುತ್ತಿವೆಯೇ ಎಂದು ಭಾಸವಾಗುತ್ತಿದೆ. ಟೆಕ್ಸಾಸ್ ಗಿಗಾಫ್ಯಾಕ್ಟರಿ EV ತಯಾರಕರ ವಜಾಗೊಳಿಸುವುದನ್ನು ಈ ವಾರದೊಳಗೆ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸಂಬಂಧ ಫ್ರೀಮಾಂಟ್ ಕಾರ್ಖಾನೆಯಲ್ಲಿ ಕಾರ್ಯನಿರತ ಕಾರ್ಮಿಕರು ಕಳವಳ ವ್ಯಕ್ತಪಡಿಸಿದ್ದಾರೆ.
ಎಲೆಕ್ಟ್ರೆಕ್ ವರದಿಯು ವಜಾಗೊಳಿಸುವಿಕೆ ಶೇಕಡಾ 20 ನಷ್ಟಿರಬಹುದು ಎಂದು ತಿಳಿಸಲಾಗಿದೆ. ಆದರೆ ಬ್ಯುಸಿನೆಸ್ ಇನ್ಸೈಡರ್ ಟೆಸ್ಲಾ ಈಗಾಗಲೇ ಸೈಬರ್‌ಟ್ರಕ್‌ಗಾಗಿ ಉತ್ಪಾದನಾ ಬದಲಾವಣೆ ಕಡಿಮೆ ಮಾಡುವ ಸಂಭವವಿದೆ ಎಂದು ವರದಿ ಮಾಡಿದೆ.
ಟೆಸ್ಲಾ ಕಾರು ಮಾರಾಟ ಈ ತ್ರೈಮಾಸಿಕದಲ್ಲಿ ಕುಸಿತ
ಟೆಸ್ಲಾ ಕಂಪನಿಯ ಜಾಗತಿಕವಾಗಿ ಅತ್ಯಂತ ಬೆಲೆಬಾಳುವ ವಾಹನ ತಯಾರಕಾ ಕಂಪನಿಯಾಗಿದ್ದು, ಇದು ಈ ವರ್ಷದ ಮೊದಲ ತ್ರೈಮಾಸಿಕ ಮಾರಾಟದಲ್ಲಿ ತೀವ್ರ ಕುಸಿತ ಕಂಡು ನಷ್ಟ ಅನುಭವಿಸಿದೆ ಎನ್ನಲಾಗಿದೆ. ಟೆಸ್ಲಾ ಮಾರುಕಟ್ಟೆಯ ಪೈಕಿ ದೊಡ್ಡ ಮಾರುಕಟ್ಟೆಯಾದ ಚೀನಾದಲ್ಲಿ ಬೇಡಿಕೆ ತೀವ್ರ ಇಳಿಕೆ ಮುಖವಾಗಿದೆ. ಕಾರು ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಇದೆ. ಈ ಎಲ್ಲ ಕಾರಣಗಳಿಂದ ಆರ್ಥಿಕ ನಷ್ಟ ಸರಿದೂಗಿಸಲು ಟೆಸ್ಲಾ ಮುಂದಾಗಿದೆ.

EV ವಾಹನಗಳ ಬೇಡಿಕೆ ಕಡಿಮೆ: ಹೈಬ್ರೀಡ್‌ಗೆ ಬೇಡಿಕೆ
ಟೆಸ್ಲಾ ಕಂಪನಿಯ ಆರ್ಥಿಕ ಸ್ಥಿತಿಗತಿಗಳು ಹದಗೆಡುತ್ತಿರುವ ಕಾರಣಕ್ಕೆ ಗ್ರಾಹಕರು ದೊಡ್ಡ ಖರೀದಿಗೆ ಮುಂದಾಗಿಲ್ಲ. ಕ್ರಮೇಣ ಜಾಗತಿಕವಾಗಿ ಮೊದಲ ತ್ರೈಮಾಸಿಕದಲ್ಲಿ EV ವಾಹನಗಳ ಬೇಡಿಕೆ ಕಡಿಮೆ ಆಗಿದೆ. ಕಳೆದ ವರ್ಷದಲ್ಲಿ ಹೈಬ್ರಿಡ್ ಮಾದರಿಗಳ ಉತ್ಪಾದನೆ ತೀವ್ರಗತಿಯಲ್ಲಿ ಹೆಚ್ಚಾಗಿದೆ. ಹೀಗಾಗಿ ಏಕ ಮಾದರಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಕುಸಿತವಾಗಿದೆ.
ಅಲ್ಲದೇ ಕಂಪನಿ ಸೂಕ್ತ ನಿರ್ವಹಣೆ, ಆರ್ಥಿಕ ಸುಸ್ಥಿತಿಗೆ ಒತ್ತು ನೀಡುವಂತೆ ಟೆಸ್ಲಾ ಈ ವರ್ಷದ ಆರಂಭದಲ್ಲಿ ವ್ಯವಸ್ಥಾಪಕರಿಗೆ ಸೂಚಿಸಿದ್ದನ್ನು ಈಗ ನೆನಪಿಸಿಕೊಳ್ಳಬಹುದು. ಎಲೆಕ್ಟ್ರಿಕ್ ಕಾರು ತಯಾರಕರು ಕೆಲವು ಕಾರ್ಯಕ್ಷಮತೆ ವಿಮರ್ಶೆಗಳನ್ನು ವಿಳಂಬಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ವರ್ಷದಲ್ಲಿ ಚೀನಾ ಸೇರಿದಂತೆ ವಿವಿಧ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಟೆಸ್ಲಾ ಕಂಪನಿಯು ವಾಹನಗಳ ಬೆಲೆಯು ಬೇಡಿಕೆ ಹೆಚ್ಚಳ ಕಾರಣವಾಗಿತ್ತು. ಕಾರುಗಳ ಬೆಲೆ ಎಷ್ಟಿತ್ತೆಂದರೆ ಇದು ಕಾರು ಮಾರಾಟಕ್ಕೆ ಉತ್ತೇಜನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿತು. ಆದರೆ ಬೇಡಿಕೆ ನಿರಂತರವಾಗಿ ಹಿಡಿದುಟ್ಟುಕೊಳ್ಳುವಲ್ಲಿ ವಿಫಲವಾಯಿತು.
ಎಲೋನ್ ಮಸ್ಕ್ ಅಸಮಾಧಾನ
EV ತಯಾರಕವು 2024 ಕ್ಕೆ ದುರ್ಬಲ ಉತ್ಪಾದನಾ ಗುರಿ ಹೊಂದಿವೆ. ಅಂದರೆ ಕಡಿಮೆ ವೆಚ್ಚದ ಇವಿ ತಯಾರಿಕೆಗಾಗಿ ಕೆಲವು ಯೋಜನೆ ರದ್ದುಗೊಳಿಸುತ್ತಿವೆ. ಆದರೆ ಟೆಸ್ಲಾ ಕಂಪನಿಯು ಈ ಕುಸಿತವನ್ನು ಸರಿದೂಗಿಸಲು ಸ್ವಯಂ-ಚಾಲನೆ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗ್ಗೆ ಆದ್ಯತೆ ನೀಡಿದೆ.
ಇವಿ ತಯಾರಕರ ಮೊದಲ ರೋಬೋಟ್ಯಾಕ್ಸಿಯನ್ನು ಈ ವರ್ಷದ ಆಗಸ್ಟ್‌ನಲ್ಲಿ ಅನಾವರಣಗೊಳಿಸಲಾಗುವುದು ಎಂದು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಇತ್ತೀಚೆಗೆ ಮಾಹಿತಿ ನೀಡಿದ್ದರು. ಹೆಚ್ಚು ಬಡ್ಡಿ, ದುರ್ಬಲ ಜಾಗತಿಕ ಆರ್ಥಿಕತೆ ಮಧ್ಯೆ ಮಾರಾಟದಲ್ಲಿನ ಕುಸಿತದ ಬಗ್ಗೆ ಎಲೋನ್ ಮಸ್ಕ್ ಅಸಮಾಧಾನ ಹೊರ ಹಾಕಿದ್ದರು.












Click it and Unblock the Notifications