ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಿ ಆಹಾರ, ಹಾಲು, ಮಾಂಸ ಉತ್ಪನ್ನ ರಫ್ತು, FSSAI ನೋಂದಣಿ ಕಡ್ಡಾಯ

|
Google Oneindia Kannada News

ನವದೆಹಲಿ, ಅಕ್ಟೋಬರ್ 11: ವಿದೇಶಿ ಆಹಾರ, ಹಾಲು, ಮಾಂಸ ಉತ್ಪನ್ನ ತಯಾರಕರು ತಮ್ಮ ಉತ್ಪನ್ನಗಳನ್ನು ಭಾರತಕ್ಕೆ ರಫ್ತು ಮಾಡುವ ಮುನ್ನ ತನ್ನಲ್ಲಿ ನೋಂದಣಿ ಮಾಡಿಕೊಳ್ಳಿ ಎಂದು ಆಹಾರ ನಿಯಂತ್ರಕ ಸಂಸ್ಥೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ತಿಳಿಸಿದೆ.

ಪ್ರಾಧಿಕಾರದಲ್ಲಿ ರಫ್ತಿಗೂ ಮುನ್ನ ನೋಂದಣಿಯನ್ನು ಕಡ್ಡಾಯಗೊಳಿಸಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅದನ್ನು ಮುಂದಿನ ವರ್ಷ 2023ರ ಫೆ.1 ರಿಂದ ಜಾರಿಗೊಳಿಸುವುದಾಗಿ ಸೋಮವಾರ ಆದೇಶ ಹೊರಡಿಸಿದೆ.

Krishi Mela-2022 : ಬೆಂಗಳೂರು ಕೃಷಿ ವಿವಿಯಲ್ಲಿ ನವೆಂಬರ್ 3ರಿಂದ 6ರವರೆಗೆ 4 ದಿನ 'ಕೃಷಿ ಮೇಳ-2022'Krishi Mela-2022 : ಬೆಂಗಳೂರು ಕೃಷಿ ವಿವಿಯಲ್ಲಿ ನವೆಂಬರ್ 3ರಿಂದ 6ರವರೆಗೆ 4 ದಿನ 'ಕೃಷಿ ಮೇಳ-2022'

ಈ ಆದೇಶದಲ್ಲಿ, ಉತ್ಪನ್ನ ಸೌಲಭ್ಯಗಳನ್ನು ರಫ್ತು ಮಾಡಲು ಉದ್ದೇಶಿಸಿರುವ ಐದು ಆಹಾರ ವಿಭಾಗಗಳ ಅಡಿಯಲ್ಲಿ ಬರುವ ವಿದೇಶಿ ಆಹಾರ ಉತ್ಪಾದನಾ ಸೌಲಭ್ಯಗಳ ನೋಂದಣಿ ಕಡ್ಡಾಯ ಮಾಡಿರುವುದಾಗಿ ಪ್ರಾಧಿಕಾರ ತಿಳಿಸಿದೆ.

Foreign food manufacturers need FSSAI registration for exporting milk, meat products

ಐದು ಆಹಾರ ಪ್ರಕಾರಗಳೆಂದರೆ ಹಾಲು ಮತ್ತು ಹಾಲಿನ ಉತ್ಪನ್ನಗಳು, ಕೋಳಿ, ಮೀನು ಮತ್ತು ಅವುಗಳ ಉತ್ಪನ್ನಗಳು ಸೇರಿದಂತೆ ಮಾಂಸ ಮತ್ತು ಮಾಂಸ ಉತ್ಪನ್ನಗಳು, ಮೊಟ್ಟೆಯ ಪುಡಿ, ಶಿಶು ಆಹಾರ ಮತ್ತು ನ್ಯೂಟ್ರಾಸ್ಯುಟಿಕಲ್ಸ್. ಇವುಗಳನ್ನು ಭಾರತಕ್ಕೆ ರಫ್ತು ಮಾಡುವಾಗ ನೋಂದಣಿ ಇಲ್ಲದೇ ರಫ್ತು ಮಾಡುವಂತಿಲ್ಲ ಎಂದಿದೆ.

ಈಗಾಗಲೇ ಭಾರತಕ್ಕೆ ರಫ್ತು ಮಾಡುತ್ತಿರುವವರ ಪೈಕಿ ಅಸ್ತಿತ್ವದಲ್ಲಿರುವ ವಿದೇಶಿ ತಯಾರಕರು ಮತ್ತು ಈ ಆಹಾರ ಉತ್ಪನ್ನಗಳನ್ನು ಭಾರತಕ್ಕೆ ರಫ್ತು ಮಾಡಲು ಉದ್ದೇಶಿಸಿರುವವರ ಪಟ್ಟಿಯನ್ನು ಒದಗಿಸುವಂತೆ ಆಯಾ ದೇಶಗಳಿಗೆ ಪ್ರಾಧಿಕಾರ ಆದೇಶ ಮೂಲಕ ಮನವಿ ಮಾಡಿದೆ. ವಿದೇಶಿ ಆಹಾರ ತಯಾರಕರು ಒದಗಿಸುವ ಮಾಹಿತಿಯ ಆಧಾರದ ಮೇರೆಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ರಫ್ತು, ಆಹಾರದ ವಿವರ, ಗುಣಮಟ್ಟ ಹಾಗೂ ಇನ್ನಿತರ ಮಾಹಿತಿಯನ್ನು ಪೋರ್ಟಲ್‌ನಲ್ಲಿ ನೋಂದಾಯಿಸಲಾಗುವುದು ಎಂದು ತಿಳಿಸಲಾಗಿದೆ.

FSSAI ಕೆಲಸವೇನು?

ಆಹಾರ ಸುರಕ್ಷತೆ ಮತ್ತು ಗುಣಮಟ್ಟ (2006) ಕಾಯ್ದೆಯಡಿ ಆಹಾರ ಪದಾರ್ಥ ತಯಾರಕರ ಉದ್ದಿಮೆದಾರರನ್ನು ಒಂದೇ ಸೂರಿನಡಿಯಲ್ಲಿ ನಿಬಂಧನೆ ಹಾಗೂ ಪರಿವೀಕ್ಷಣೆಗೆ ಒಳಪಡಿಸುವುದು ಆಗಿದೆ. ಆಹಾರದ ಜತೆಗೆ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಉಪಯೋಗಿಸುವ ವಿವಿಧ ಪದಾರ್ಥಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳುವುದು. ಆಹಾರ ಸೇವನೆಗೆ ಯೋಗ್ಯವಾದ ಆಹಾರವನ್ನು ಸರಬರಾಜು ಮಾಡುವುದು ಕಾಯ್ದೆಯ ಉದ್ದೇಶವಾಗಿದೆ. ಹೋಟೆಲ್, ಬಾರ್‌ ಆಂಡ್ ರೆಸ್ಟೋರೆಂಟ್, ಬೇಕರಿ, ರೆಸಾರ್ಟ್, ತರಕಾರಿ, ಮಾಂಸ ಇನ್ನಿತರ ಆಹಾರ ತಯಾರಕರು ಕಾಯ್ದೆ ವ್ಯಾಪ್ತಿಗೆ ಬರಲಿದ್ದು, ಈ ವ್ಯಾಪಾರಸ್ಥರಿಗೆ ಪ್ರಾಧಿಕಾರ ಕಾಯ್ದೆಯಡಿ ನೋಂದಣಿ ಮತ್ತು ಪರವಾನಗಿ ನೀಡುತ್ತದೆ.

English summary
Registration is mandatory for Foreign food manufacturers for exporting milk, meat products, Food Safety and Standards Authority of India (FSSAI) said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X