Get Updates
Get notified of breaking news, exclusive insights, and must-see stories!

ದಾವಣಗೆರೆ: ಭದ್ರಾ ಕಾಲುವೆಗಳಲ್ಲಿ ಅಗತ್ಯ ಪ್ರಮಾಣದಷ್ಟು ನೀರು ಹರಿಸುವಂತೆ ಒತ್ತಾಯ

ದಾವಣಗೆರೆ, ಮಾರ್ಚ್‌, 30: ಭದ್ರಾ ಕಾಲುವೆಗಳಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಅಗತ್ಯ ಪ್ರಮಾಣದಷ್ಟು ನೀರು ಹರಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಗೆ ಭಾರತ ರೈತ ಒಕ್ಕೂಟವು ಮನವಿ ಸಲ್ಲಿಸಿದೆ.

ಜಿಲ್ಲಾಡಳಿತ ಅಕ್ರಮ ಪಂಪ್ ಸೆಟ್ ತೆರವು ಕಾರ್ಯಾಚರಣೆ ನಡೆಸುತ್ತಿದ್ದರೂ, ಕೊನೆ ಭಾಗಕ್ಕೆ ಭದ್ರಾ ನೀರು ತಲುಪಿಸಲು ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ. ಅಕ್ರಮ ಪಂಪ್ ಸೆಟ್ ತೆರವು ಕಾರ್ಯಾಚರಣೆ ಕೇವಲ ನೆಪ ಮಾತ್ರಕ್ಕೆ ಆಗಬಾರದು. ಕುಂದುವಾಡದ ಬಳಿ ಕಾಲುವೆಗಳಲ್ಲಿ ಕೇವಲ 1 ಅಡಿ ನೀರು ಹರಿಯುತ್ತಿದೆ. ಹರಿಯುವ ಪೂರ್ತಿ ನೀರನ್ನು ಕುಡಿಯುವ ನೀರಿಗಾಗಿ ಕುಂದುವಾಡದ ಕೆರೆಗೆ ತುಂಬಿಸಿ ಕೊಳ್ಳಲಾಗುತ್ತಿದೆ. ಇದರಿಂದ ಹತ್ತಿಪ್ಪತ್ತು ವರ್ಷಗಳಿಂದ ಬೆಳೆಸಿಕೊಂಡ ರೈತರ ತೋಟಗಳಿಗೆ ನೀರು ಹರಿಸಲಾಗುತ್ತಿಲ್ಲ ಎಂದು ಆರೋಪಿಸಲಾಗಿದೆ.

Bhadra dam Farmers Union Demands to release Water to Bhadra canals in Davangere district

ಭದ್ರಾ ನೀರು ಹರಿಸಲು ಪ್ರಾರಂಭಿಸಿ 10 ದಿನಗಳಾದರೂ ಕೊನೇ ಭಾಗಕ್ಕೆ ನೀರು ತಲುಪಿಸಲು ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ. ಆದ್ದರಿಂದ ನೀರು ಹರಿಸುವ ಅವಧಿಯನ್ನು ಕನಿಷ್ಠ 5 ದಿನ ವಿಸ್ತರಣೆ ಮಾಡಬೇಕು. ಇದುವರೆಗೂ ರೈತರ ತೋಟಗಳಿಗೆ ನೀರು ಹರಿಸಲಾಗುತ್ತಿಲ್ಲ. ತೋಟಗಳು ಒಣಗಿ ಹೋಗಿವೆ. ಒಣಗುತ್ತಿರುವ ತೋಟಗಳ ರೈತರ ಗೋಳು ಕೇಳುವವರಿಲ್ಲ. ಆದ್ದರಿಂದ ಅಧಿಕ ಪ್ರಮಾಣದಲ್ಲಿ ನೀರು ತಂದು ಒಣಗುತ್ತಿರುವ ತೋಟಗಳಿಗೆ ನೀರು ಒದಗಿಸಬೇಕು ಎಂದು ಆಗ್ರಹಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ.ಸತೀಶ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷ ಹೆಚ್‌.ಜಿ.ಗಣೇಶಪ್ಪ, ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹೆಚ್.ಎನ್.ಗುರುನಾಥ್, ಬಿಜೆಪಿ ಮುಖಂಡ ಕೆ.ಜಿ.ಕಲ್ಲಪ್ಪ, ರೈತ ಮುಖಂಡರಾದ ಕುಂದುವಾಡದ ಜಿಮ್ಮಿ ಹನುಮಂತಪ್ಪ, ಬಿ.ಮಹೇಶಪ್ಪ, ಹೆಚ್.ಜಿ.ಗೋಪಾಲಪ್ಪ, ಗದಿಗೇಶ ಹಂಚಿನಮನೆ, ತಿಪ್ಪಣ್ಣ ಹರಿಹರ, ಕ್ಯಾಂಪ್ ನಾಗೇಶ್ವರರಾವ್ ಸೇರಿದಂತೆ ಮುಂತಾದವರು ಹಾಜರಿದ್ದರು.

ಅನಧಿಕೃತ ಪಂಪ್‌ಸೆಟ್‌ಗಳ ತೆರವಿಗೆ ಕ್ರಮ: ಪ್ರಸಕ್ತ ವರ್ಷದ ಮುಂಗಾರು ಹಾಗೂ ಹಿಂಗಾರು ವೈಫಲ್ಯದಿಂದ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದರಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಹಾಗೂ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಆದ್ದರಿಂದ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಹಾಗಾದರೆ ಕ್ರಮಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಇದರಿಂದ ಸರದಿಯನ್ವಯ ನೀರು ಬಿಡಲು ಭದ್ರಾ ಕಾಡಾ ಮಂಡಳಿ ನಿರ್ಧಾರದಂತೆ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ನೀರು ಕೊಡಲು ಕಾಲುವೆಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಪಂಪ್‌ಸೆಟ್‌ಗಳ ತೆರವಿಗಾಗಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಅವರು ಅಧಿಕಾರಿಗಳ ತಂಡ ರಚಿಸಿ ಆದೇಶಿಸಿದ್ದಾರೆ.

ವಿದ್ಯುತ್ ಸಂಪರ್ಕ ಕಲ್ಪಿಸಿದ್ದಲ್ಲಿ ಇದನ್ನು ಕಡಿತಗೊಳಿಸುವುದು ಮತ್ತು ಡೀಸೆಲ್ ಜನರೇಟರ್ ಅಳವಡಿಸಿದ್ದಲ್ಲಿ ಅದನ್ನು ಕಡಿತ ಮಾಡುವುದು ಮತ್ತು ನಾಲೆಯಲ್ಲಿ ನೀರೆತ್ತಲು ಅಳವಡಿಸಿದ ಎಲ್ಲಾ ಪೈಪ್‌ಗಳನ್ನು ತೆರವು ಮಾಡಲು, ಒಂದು ವೇಳೆ ತೆರವು ಮಾಡದಿದ್ದಲ್ಲಿ ವಶಕ್ಕೆ ಪಡೆಯಲು ಕಂದಾಯ, ಪಾಲಿಕೆ, ಪೊಲೀಸ್, ನೀರಾವರಿ ಇಲಾಖೆ ಹಾಗೂ ಬೆಸ್ಕಾಂ ಇಂಜಿನಿಯರ್‌ಗಳ ತಂಡವನ್ನು ರಚಿಸಲಾಗಿದೆ.

ದಾವಣಗೆರೆ ತಾಲೂಕು ತಹಶೀಲ್ದಾರರು, ಉಪ ತಹಶೀಲ್ದಾರರು, ಪಾಲಿಕೆ ಸಿಬ್ಬಂದಿ, ವೃತ್ತ ನಿರೀಕ್ಷಕರು, ಮಾಯಕೊಂಡ, ಗ್ರಾಮಾಂತರ, ಹದಡಿ, ಮಾಯಕೊಂಡ, ಕಾರ್ಯಪಾಲಕ ಇಂಜಿನಿಯರ್, ನೀರಾವರಿ ನಿಗಮ, ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಹರಿಹರ ತಾಲೂಕು ತಹಶೀಲ್ದಾರ್, ಉಪ ತಹಶೀಲ್ದಾರ್ ಹಾಗೂ ರಾಜಸ್ವ ನಿರೀಕ್ಷಕರು, ಗ್ರಾಮಲೆಕ್ಕಿಗರು, ಹರಿಹರ, ಮಲೆಬೆನ್ನೂರು ಹರಿಹರ ಗ್ರಾಮಾಂತರ ವೃತ್ತ ನಿರೀಕ್ಷಕರು, ಉಪ ನಿರೀಕ್ಷಕರು, ಭದ್ರಾ ನಾಲಾ ವಿಭಾಗದ ಇಂಜಿನಿಯರ್, ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಂಗಳನ್ನು ರಚನೆ ಮಾಡಲಾಗಿದೆ.

ಚನ್ನಗಿರಿ ತಾಲೂಕ ತಹಶೀಲ್ದಾರರು, ಉಪ ತಹಶೀಲ್ದಾರರು, ರಾಜಸ್ವ ನಿರೀಕ್ಷಕರು, ಗ್ರಾಮಲೆಕ್ಕಿಗರು, ಸಂತೇಬೆನ್ನೂರು, ಚನ್ನಗಿರಿ, ಬಸವಾಪಟ್ಟಣ ಠಾಣಾ ವೃತ್ತ ನಿರೀಕ್ಷಕರು, ಉಪ ನಿರೀಕ್ಷಕರು, ಭದ್ರಾ ನಾಲಾ ವಿಭಾಗದ ಇಂಜಿನಿಯರ್, ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳ ತಂಡಗಳನ್ನು ರಚನೆ ಮಾಡಿ ತಕ್ಷಣದಿಂದಲೇ ಕಾರ್ಯಾಚರಣೆ ಮಾಡಲು ಆದೇಶಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+