Arecanut Price: ಬರದ ನಡುವೆಯೂ ಕುಸಿದ ಅಡಿಕೆ ಬೆಲೆ
ರಾಜ್ಯದಲ್ಲಿ ಬರದ ನಡುವೆ ಅಡಿಕೆ ಧಾರಣೆ ಅಲ್ಪ ಕುಸಿತ ಕಂಡಿದ್ದು, ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಹೆಚ್ಚುತ್ತಿರುವ ತಾಪಮಾನ, ಭೀಕರ ಬರದಿಂದ ಅಡಿಕೆ ಬೆಳೆ ಕಾಪಾಡಿಕೊಳ್ಳುವುದೇ ಸವಾಲಾಗಿದೆ. ಇಂತಹ ಸಂದರ್ಭದಲ್ಲೂ ಅಡಿಕೆ ಧಾರಣೆ ಏರಿಕೆ ಕಾಣುವುದಿರಲಿ, ಬೆಲೆ ಕುಸಿತವಾಗುತ್ತಿರುವುದು ಬೆಳೆಗಾರರ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಗರಿಷ್ಠ ₹49,000 ಸಾವಿರ ತಲುಪಿದ್ದ ಅಡಿಕೆ ಧಾರಣೆ ₹1,000 ದವರೆಗೆ ಕುಸಿತ ಕಂಡಿದೆ. ಸೋಮವಾರ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಕೆಂಪಡಕೆ ಧಾರಣೆ ಅಲ್ಪ ಕುಸಿತ ಕಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಚಿತ್ರದುರ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕ್ವಿಂಟಲ್‌ಗೆ ಕನಿಷ್ಠ ₹48,129 ಇದ್ದರೆ ಗರಿಷ್ಠ ₹48,569 ಆಗಿತ್ತು.

ರಾಜ್ಯದ ಪ್ರಮುಖ ಅಡಿಕೆ ಮಾರುಟಕಟ್ಟೆ ಶಿವಮೊಗ್ಗದಲ್ಲಿ ರಾಶಿ ಕೆಂಪಡಿಕೆ ಧಾರಣೆ ಕನಿಷ್ಠ ₹32,279 ಗರಿಷ್ಠ ₹48,858 ಆಗಿತ್ತು, ಸರಕು ಅಡಿಕೆ ಧಾರಣೆ ₹53,010 ಇತ್ತು. ಬೆಟ್ಟೆ ಅಡಿಕೆ ಧಾರಣೆ ಕನಿಷ್ಠ ₹41,509 ಗರಿಷ್ಠ ₹47,899 ಆಗಿತ್ತು. ಸಿದ್ಧಾಪುರ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ ₹42,089 ಇದ್ದರೆ ಗರಿಷ್ಠ ₹46,499 ಇತ್ತು.
ಸಾಗರ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ ₹31,399 ಇದ್ದರೆ ಗರಿಷ್ಠ ₹48,209 ಇತ್ತು. ಚಾಲಿ ಅಡಿಕೆ ಧಾರಣೆ ಕನಿಷ್ಠ ₹26,599 ಗರಿಷ್ಠ ₹33,209 ಆಗಿತ್ತು.
ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ (ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಬಂಟ್ವಾಳ | ಕೋಕಾ | ₹18,000 | ₹28,500 | ₹23,500 |
| 2 | ಚಿತ್ರದುರ್ಗ | ಅಪಿ | ₹48,639 | ₹49,099 | ₹48,889 |
| 3 | ಚಿತ್ರದುರ್ಗ | ರಾಶಿ | ₹48,129 | ₹48,569 | ₹48,379 |
| 4 | ಕುಮಟಾ | ಕೋಕಾ | ₹16,019 | ₹23,509 | ₹19,369 |
| 5 | ಕುಮಟಾ | ಫ್ಯಾಕ್ಟರಿ | ₹11,019 | ₹21,429 | ₹19,832 |
| 6 | ಸಾಗರ | ಸಿಪ್ಪೆಗೋಟು | ₹15,899 | ₹17,869 | ₹16,205 |
| 7 | ಸಾಗರ | ಕೆಂಪು ಗೋಟು | ₹10,199 | ₹31,199 | ₹30,299 |
| 8 | ಸಾಗರ | ರಾಶಿ | ₹31,399 | ₹48,209 | ₹47,699 |
| 9 | ಸಾಗರ | ಚಾಲಿ | ₹26,599 | ₹33,209 | ₹32,700 |
| 10 | ಶಿವಮೊಗ್ಗ | ಬೆಟ್ಟೆ | ₹41,509 | ₹47,899 | ₹47,069 |
| 11 | ಶಿವಮೊಗ್ಗ | ರಾಶಿ | ₹32,279 | ₹48,858 | ₹48,299 |
| 12 | ಸಿದ್ದಾಪುರ | ಬಿಳೆ ಗೊಟು | ₹25,899 | ₹29,099 | ₹26,699 |
| 13 | ಸಿದ್ದಾಪುರ | ಕೆಂಪು ಗೋಟು | ₹29,099 | ₹31,399 | ₹30,689 |
| 14 | ಸಿದ್ದಾಪುರ | ರಾಶಿ | ₹42,089 | ₹46,499 | ₹46,209 |
| 15 | ಶಿರಸಿ | ರಾಶಿ | ₹42,298 | ₹46,999 | ₹44,949 |
| 16 | ಶಿರಸಿ | ಚಾಲಿ | ₹32,098 | ₹35,702 | ₹34,176 |
| 17 | ಯಲ್ಲಾಪುರ | ಅಪಿ | ₹55,059 | ₹60,169 | ₹60,169 |
| 18 | ಯಲ್ಲಾಪುರ | ರಾಶಿ | ₹43,009 | ₹52,269 | ₹48,399 |
| 19 | ಯಲ್ಲಾಪುರ | ತಟ್ಟಿ ಬೆಟ್ಟೆ | ₹35,666 | ₹42,900 | ₹40,870 |
ಕೊಬ್ಬರಿ ದರ ಹೇಗಿದೆ?
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಧಾರಣೆ ಸ್ಥಿರತೆ ಕಾಯ್ದುಕೊಂಡಿದೆ. ಅರಸೀಕೆರೆ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ಕನಿಷ್ಠ ₹7,500 ಇದ್ದರೆ ಗರಿಷ್ಠ ₹9,450 ಆಗಿತ್ತು. ಪುತ್ತೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ ₹5,500 ಆಗಿದ್ದರೆ ಗರಿಷ್ಠ ₹8,200 ಆಗಿತ್ತು.
ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆ ತಿಪಟೂರಿನಲ್ಲಿ ಕನಿಷ್ಠ ₹8,000 ಆಗಿದ್ದರೆ ಗರಿಷ್ಠ ₹9,800 ಆಗಿತ್ತು.
ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಅರಸೀಕೆರೆ | ಕೊಬ್ಬರಿ | ₹7,500 | ₹9,450 | ₹8,370 |
| 2 | ಪುತ್ತೂರು | ಬೇರೆ | ₹5,500 | ₹8,200 | ₹6,850 |
| 3 | ಅರಸೀಕೆರೆ | ಕೊಬ್ಬರಿ | ₹7,500 | ₹9,500 | ₹8,712 |
| 4 | ನಾಗಮಂಗಲ | ಮಧ್ಯಮ | ₹6,250 | ₹8,500 | ₹7,700 |
| 5 | ತಿಪಟೂರು | ಕೊಬ್ಬರಿ | ₹8,000 | ₹9,800 | ₹9,350 |












Click it and Unblock the Notifications