Arecanut Price: ₹52,000 ದಾಟಿದ ಅಡಿಕೆ ಬೆಲೆ; ಕೊಬ್ಬರಿ ಧಾರಣೆ ಹೇಗಿದೆ ನೋಡಿ
ಅಂತೂ ಇಂತೂ ಅಡಿಕೆ ಬೆಲೆ ಏರಿಕೆಯ ಹಾದಿಗೆ ಮರಳಿದೆ. ಹಲವು ತಿಂಗಳಿಂದ ₹50,000 ದಾಟಲೂ ಕಷ್ಟಪಡುತ್ತಿದ್ದ ರಾಶಿ ಅಡಿಕೆ ಬೆಲೆ, ಕಳೆದ ವಾರದಿಂದ ನಿರಂತರವಾಗಿ ಏರಿಕೆಯಾಗುತ್ತಿದೆ. ₹50,000 ಗಡಿ ದಾಟಿರುವ ಅಡಿಕೆ ಬೆಲೆ ಸದ್ಯ ₹52,000 ಆಸುಪಾಸಿಗೆ ಬಂದು ನಿಂತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಶನಿವಾರ ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಗರಿಷ್ಠ ₹51,999 ತಲುಪಿತ್ತು. ಚಿತ್ರದುರ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ ₹50,139 ಇದ್ದರೆ ಗರಿಷ್ಠ ₹50,569 ಆಗಿತ್ತು.

ಸಿದ್ದಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕನಿಷ್ಠ ₹46,699 ಗರಿಷ್ಠ ₹48,929 ಮಾರಾಟವಾಗಿದೆ. ಸೊರಬ ಮಾರುಕಟ್ಟೆಯಲ್ಲಿ ಕನಿಷ್ಠ ₹29,500 ಇದ್ದರೆ ಗರಿಷ್ಠ ₹50,599 ಆಗಿತ್ತು. ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ಸರಕು ಅಡಿಕೆ ಧಾರಣೆ ಕನಿಷ್ಠ ₹51,899 ಇದ್ದರೆ ಗರಿಷ್ಠ ₹84,300 ಆಗಿತ್ತು. ಇನ್ನು ರಾಶಿ ಅಡಿಕೆ ಧಾರಣೆ ಕನಿಷ್ಠ ₹30,669 ಇದ್ದರೆ ಗರಿಷ್ಠ ₹52,299 ಕ್ಕೆ ಮಾರಾಟವಾಗಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ (ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಬಂಟ್ವಾಳ | ಕೋಕಾ | ₹18,000 | ₹28,500 | ₹23,500 |
| 2 | ಚನ್ನಗಿರಿ | ರಾಶಿ | ₹47,599 | ₹51,999 | ₹50,400 |
| 3 | ಚಿತ್ರದುರ್ಗ | ಅಪಿ | ₹50,619 | ₹51,059 | ₹50,849 |
| 4 | ಚಿತ್ರದುರ್ಗ | ಬೆಟ್ಟೆ | ₹35,629 | ₹36,099 | ₹35,879 |
| 5 | ಚಿತ್ರದುರ್ಗ | ಕೆಂಪು ಗೋಟು | ₹30,609 | ₹31,010 | ₹30,800 |
| 6 | ಮಡಿಕೇರಿ | ಕಚ್ಚಾ | ₹36,417 | ₹36,417 | ₹36,417 |
| 7 | ಪುತ್ತೂರು | ಹೊಸ ವೆರೈಟಿ | ₹26,500 | ₹36,500 | ₹31,500 |
| 8 | ಸಿದ್ದಾಪುರ | ಬಿಳೆ ಗೊಟು | ₹26,419 | ₹28,709 | ₹27,419 |
| 9 | ಸಿದ್ದಾಪುರ | ರಾಶಿ | ₹46,699 | ₹48,929 | ₹48,699 |
| 10 | ಶಿರಸಿ | ಬಿಳೆ ಗೊಟು | ₹24,699 | ₹32,299 | ₹27,546 |
| 11 | ಶಿರಸಿ | ರಾಶಿ | ₹43,299 | ₹48,698 | ₹46,723 |
| 12 | ಸೊರಬ | ಗೊರಬಲು | ₹27,509 | ₹33,019 | ₹29,322 |
| 13 | ಸೊರಬ | ರಾಶಿ | ₹29,500 | ₹50,599 | ₹47,653 |
| 14 | ತೀರ್ಥಹಳ್ಳಿ | ರಾಶಿ | ₹32,011 | ₹52,299 | ₹51,669 |
| 15 | ತೀರ್ಥಹಳ್ಳಿ | ಇಡಿ | ₹30,669 | ₹52,299 | ₹50,599 |
| 16 | ತೀರ್ಥಹಳ್ಳಿ | ಸರಕು | ₹51,899 | ₹84,300 | ₹75,003 |
ಕೊಬ್ಬರಿ ಧಾರಣೆ ಹೇಗಿದೆ?
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಧಾರಣೆ ಅಲ್ಪ ಕುಸಿತ ಕಂಡಿದೆ. ನಾಫೆಡ್‌ನಿಂದ ಕೊಬ್ಬರಿ ಧಾರಣೆ ಏರಿಕೆಯಾಗದೇ ಇರುವುದು ತೆಂಗು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ತಿಪಟೂರು ಮಾರುಕಟ್ಟೆಯಲ್ಲಿ ಕ್ವಿಂಟಲ್ ಕೊಬ್ಬರಿಗೆ ಕನಿಷ್ಠ ₹8,200 ಇದ್ದರೆ ಗರಿಷ್ಠ ₹9,000 ಕ್ಕೆ ಮಾರಾಟವಾಗಿದೆ. ಕೆ ಆರ್ ಪೇಟೆ ಮಾರುಕಟ್ಟೆಯಲ್ಲಿ ಗರಿಷ್ಠ ₹8,500 ಗರಿಷ್ಠ ₹9,350 ಕ್ಕೆ ಮಾರಾಟವಾಗಿದೆ.
ಕೊಬ್ಬರಿ ಧಾರಣೆ (ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಅರಸೀಕೆರೆ | ಬೇರೆ | ₹6,400 | ₹7,200 | ₹7,200 |
| 2 | ಬಂಟ್ವಾಳ | ಬೇರೆ | ₹5,000 | ₹7,000 | ₹6,000 |
| 3 | ಕೆ.ಆರ್.ಪೇಟೆ | ಕೊಬ್ಬರಿ | ₹8,500 | ₹9,350 | ₹8,500 |
| 4 | ತಿಪಟೂರು | ಕೊಬ್ಬರಿ | ₹8,200 | ₹9,000 | ₹8,500 |
| 5 | ಚನ್ನರಾಯಪಟ್ಟಣ | ಕೊಬ್ಬರಿ | ₹8,850 | ₹9,000 | ₹8,850 |












Click it and Unblock the Notifications