Arecanut Price: ಬರದ ನಡುವೆ ಅಡಿಕೆ ಧಾರಣೆ ಹೇಗಿದೆ ತಿಳಿಯಿರಿ
ಒಂದೆಡೆ ಭೀಕರ ಬರ ರಾಜ್ಯದ ರೈತರನ್ನು ಹೈರಾಣಾಗಿಸಿದೆ. ಹಲವು ಜಿಲ್ಲೆಗಳಲ್ಲಿ ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಕೊಳವೆ ಬಾವಿಗಳಲ್ಲಿ ನೀರು ಬತ್ತಿದ್ದು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಭೀಕರ ಬರದ ನಡುವೆ ರಾಜ್ಯದಲ್ಲಿ ಅಡಿಕೆ ಧಾರಣೆ ಹೇಗಿದೆ ಗೊತ್ತಾ?
ರಾಜ್ಯದಲ್ಲಿ ಅಡಿಕೆ ಧಾರಣೆ ಆರಕ್ಕೇರದೆ ಮೂರಕ್ಕಿಳಿಯದೇ ನಿಂತಿದೆ. ಕಳೆದ ಕೆಲವು ತಿಂಗಳಿನಿಂದ ರಾಶಿ ಕೆಂಪಡಕೆ ಧಾರಣೆ ಕ್ವಿಂಟಲ್‌ಗೆ ₹50,000 ಸನಿಹಕ್ಕೆ ಹೋದರೂ ಅದನ್ನು ದಾಟಲು ಸಾಧ್ಯವಾಗಿಲ್ಲ. ಬುಧವಾರ ಕೂಡ ರಾಜ್ಯದಲ್ಲಿ ಅಡಿಕೆ ಧಾರಣೆ ₹45,000 ದಿಂದ ₹49,000 ದ ಒಳಗೆ ಮಾರಾಟವಾಗಿದೆ.

ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆ ಶಿವಮೊಗ್ಗದಲ್ಲಿ ರಾಶಿ ಅಡಿಕೆ ಬೆಲೆ ಪ್ರತಿ ಕ್ವಿಂಟಲ್‌ಗೆ ₹47,319 ಆಗಿತ್ತು. ಬೆಟ್ಟೆ ಅಡಿಕೆ ₹54,572 ಕ್ಕೆ ಮಾರಾಟವಾಗಿದೆ. ಕುಮಟಾ ಮಾರುಕಟ್ಟೆಯಲ್ಲಿ ಚಿಪ್ಪು ಅಡಿಕೆ ಧಾರಣೆ ಕನಿಷ್ಠ ₹13,099 ಇದ್ದರೆ ಗರಿಷ್ಠ ಬೆಲೆ ₹25,509 ಆಗಿತ್ತು.
ಚಿತ್ರದುರ್ಗ ಮಾರುಕಟ್ಟೆಯಲ್ಲಿ ಅಪಿ ಅಡಿಕೆ ಬೆಲೆ ಕನಿಷ್ಠ ಬೆಲೆ ₹46,600 ಆಗಿದ್ದರೆ ಗರಿಷ್ಠ ಧಾರಣೆ ₹47,000 ಆಗಿತ್ತು. ರಾಶಿ ಅಡಿಕೆ ಧಾರಣೆ ಕನಿಷ್ಠ ₹46,100 ಗರಿಷ್ಠ ₹46,500 ಆಗಿತ್ತು.
ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಬಂಟ್ವಾಳ | ಕೋಕಾ | ₹18,000 | ₹28,500 | ₹23,500 |
| 2 | ಬಂಟ್ವಾಳ | ಹೊಸ ವೆರೈಟಿ | ₹28,500 | ₹36,000 | ₹33,000 |
| 3 | ಕುಮಟಾ | ಚಿಪ್ಪು | ₹13,099 | ₹25,509 | ₹20,869 |
| 4 | ಕುಮಟಾ | ಹಣ್ಣು | ₹28,239 | ₹28,239 | ₹28,239 |
| 5 | ಶಿವಮೊಗ್ಗ | ಬೆಟ್ಟೆ | ₹54,572 | ₹54,572 | ₹54,572 |
| 6 | ಶಿವಮೊಗ್ಗ | ರಾಶಿ | ₹47,319 | ₹47,319 | ₹47,319 |
| 7 | ಚಿತ್ರದುರ್ಗ | ಅಪಿ | ₹46,600 | ₹47,000 | ₹46,800 |
| 8 | ಚಿತ್ರದುರ್ಗ | ಕೆಂಪು ಗೋಟು | ₹28,200 | ₹28,600 | ₹28,400 |
| 9 | ಚಿತ್ರದುರ್ಗ | ಬೆಟ್ಟೆ | ₹33,600 | ₹34,000 | ₹33,800 |
| 10 | ಚಿತ್ರದುರ್ಗ | ರಾಶಿ | ₹46,100 | ₹46,500 | ₹46,300 |
| 11 | ಪುತ್ತೂರು | ಕೋಕಾ | ₹11,500 | ₹26,000 | ₹18,750 |
| 12 | ಚನ್ನಗಿರಿ | ರಾಶಿ | ₹46,099 | ₹48,949 | ₹47,032 |
| 13 | ಸಿರಾ | ಬೇರೆ | ₹24,000 | ₹24,000 | ₹24,000 |
| 14 | ಹಳಿಯಾಳ | ಬೇರೆ | ₹30,296 | ₹33,733 | ₹32,537 |
ಕೊಬ್ಬರಿ ಧಾರಣೆ ಹೇಗಿದೆ
ಬೆಂಬಲ ಬೆಲೆಯಡಿ ಕೇಂದ್ರ ಸರ್ಕಾರ ಕೊಬ್ಬರಿ ಖರೀದಿ ಮಾಡುತ್ತಿದ್ದರೂ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆಯಲ್ಲಿ ಯಾವುದೇ ಏರಿಕೆ ಕಂಡಿಲ್ಲ. ಅರಸಿಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ಕನಿಷ್ಠ ₹8,000 ಆಗಿದ್ದರೆ ಗರಿಷ್ಠ ಧಾರಣೆ ₹9,300 ಆಗಿದೆ. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ ₹8,300 ಗರಿಷ್ಠ ಬೆಲೆ ₹9,351 ಆಗಿತ್ತು.
ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ (ಪ್ರತಿ ಕ್ವಿಂಟಲ್)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಅರಸೀಕೆರೆ | ಕೊಬ್ಬರಿ | ₹8,000 | ₹9,300 | ₹8,808 |
| 2 | ತಿಪಟೂರು | ಕೊಬ್ಬರಿ | ₹8,300 | ₹9,351 | ₹9,000 |
| 3 | ಚನ್ನರಾಯಪಟ್ಟಣ | ಬೇರೆ | ₹6,000 | ₹6,000 | ₹6,000 |
| 4 | ಸಿರಾ | ಮಾಧ್ಯಮ | ₹9,000 | ₹9,000 | ₹9,000 |
| 5 | ತಿಪಟೂರು | ಕೊಬ್ಬರಿ | ₹8,000 | ₹9,000 | ₹8,000 |












Click it and Unblock the Notifications