PM Kisan 17th Installment: ರೈತರಿಗೆ 17ನೇ ಕಂತಿನ ಹಣ ಬಿಡುಗಡೆ ಯಾವಾಗ?: ನಿಮ್ಮ ಹೆಸರು ಪರಿಶೀಲಿಸುವ ವಿಧಾನ ತಿಳಿಯಿರಿ
ಬೆಂಗಳೂರು, ಏಪ್ರಿಲ್ 12: ಪ್ರಧಾನ್‌ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PMKISAN) ಲಕ್ಷಾಂತರ ಫಲಾನುಭವಿಗಳು ಮುಂದಿನ ಕಂತಿಗೆ ಕಾತರದಿಂದ ಕಾಯುತ್ತಿದ್ದಾರೆ. ಪಿಎಂಕಿಸಾನ್‌ನ 17ನೇ ಕಂತು ಅರ್ಹ ರೈತರಿಗೆ ಕೇಂದ್ರ ಸರ್ಕಾರ ಯಾವಾಗ ಜಮೆ ಮಾಡಲಿದೆ?, ತಿಂಗಳು, ದಿನಾಂಕದ ಮಾಹಿತಿ ಇಲ್ಲಿದೆ.
ಪಿಎಂಕಿಸಾನ್ ಯೋಜನೆಯ 16 ನೇ ಕಂತನ್ನು ಈ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದ್ದರು. ಈ 2000 ರೂಪಾಯಿ ಸಹಾಯಧನವು ರೈತರ ಖಾತೆಗೆ 2024ರ ಫೆಬ್ರವರಿಯಲ್ಲಿ ಜಮೆ ಆಗಿತ್ತು. ಇದಾಗಿ ತಿಂಗಳೂಗಳು ಕಳೆದಿದ್ದು, ರೈತರು ಮುಂದಿನ ಕಂತಿಗಾಗಿ ಕಾಯುತ್ತಿದ್ದಾರೆ.

ಈ ತಿಂಗಳು ಹಣ ಬಿಡುಗಡೆ ಸಾಧ್ಯತೆ
ಮೂಲಗಳ ಪ್ರಕಾರ, ಪಿಎಂ-ಕಿಸಾನ್ ಯೋಜನೆಯ 17ನೇ ಕಂತು ಮುಂದಿನ ಮೇ ಕೊನೆಯ ಇಲ್ಲವೇ ಜೂನ್ ತಿಂಗಳಲ್ಲಿ ಕೇಂದ್ರ ಸರ್ಕಾರದಿಂದ ಬಿಡುಗಡೆ ಆಗುವ ನಿರೀಕ್ಷೆಗಳು ಇವೆ ಎಂದು ತಿಳಿದು ಬಂದಿದೆ. ಚುನಾವಣೆ ಇರುವ ಕಾರಣ ಜೂನ್ ಮಧ್ಯಕ್ಕೆ ಬಿಡುಗಡೆ ಆಗಲಿದೆ ಅಂತಲೂ ಹೇಳಲಾಗುತ್ತಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಭಾರತಾದ್ಯಂತ 9 ಕೋಟಿಗೂ ಹೆಚ್ಚು ರೈತರಿರಿದ್ದಾರೆ. ಅವರಿಗೆ ಕಳೆದ ಕಂತಿನಲ್ಲಿ 21,000 ಕೋಟಿ ರೂಪಾಯಿ ಹಣವನ್ನು ಪ್ರಧಾನಿ ಬಿಡುಗಡೆ ಮಾಡಿದರು. ಅದರ ಹಿಂದಿನ 15 ನೇ ಕಂತಿನ ಯೋಜನೆಯ ಹಣವನ್ನು ಇದೇ ಪ್ರಧಾನಿಯವರು 2023ರ ನವೆಂಬರ್ 15ಕ್ಕೆ ಬಿಡುಗಡೆ ಮಾಡಿದ್ದರು.
ವಾರ್ಷಿಕ 6000 ರೂ.ನಂತೆ 16 ಕಂತು ಜಮಾ
ಕೇಂದ್ರ ಸರ್ಕಾರ ಕೊರೊನಾ ಕಾಲದಲ್ಲಿ PM-KISAN ಯೋಜನೆಯಡಿ ದೇಶದ ರೈತರಿಗೆ ವಾರ್ಷಿಕವಾಗಿ 6,000 ರೂಪಾಯಿ ಹಣವನ್ನು ಮೂರು ಕಂತುಗಳಂತೆ ಅಂದರೆ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ಜಮೆ ಮಾಡಲು ತೀರ್ಮಾನಿಸಿತ್ತು. ಅದರಂತೆ ಈವರೆಗೆ 16 ಕಂತುಗಳನ್ನು ಕೇಂದ್ರ ಸರ್ಕಾರ ಹಾಕಿದೆ.

ಏಪ್ರಿಲ್- ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ತಿಂಗಳಂತೆ ಮೂರು ಕಂತುಗಳ ಹಣ ರೈತರ ಖಾತೆಗೆ ನೇರವಾಗಿ ಜಮೆ ಆಗುತ್ತಿದೆ. ಇದೀಗ 17ನೇ ಕಂತನ್ನು ಅರ್ಹ ಫಲಾನುಭವಿಗಳು ಎದುರು ನೋಡುತ್ತಿದ್ದಾರೆ.
ರೈತರು ಇ-ಕೆವೈಸಿ ಮಾಡಿಕೊಳ್ಳಿ
ಕಂತುಗಳನ್ನು ಸ್ವೀಕರಿಸುವ ರೈತರ ಬ್ಯಾಂಕ್ ಖತೆಗೆ ಇ-ಕೈವಸಿ ಆಗಿರಬೇಕು. ನೀವು ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸಿಕೊಂಡಿರಬೇಕು. ಸರ್ಕಾರದಿಂದ ಕಂತು ಪಡೆಯುವವರಿಗೆ e-KYC ಕಡ್ಡಾಯಗೊಳಿಸಲಾಗಿದೆ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಮೂಲಕ ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ಇ-ಕೆವೈಸಿ, ಇಲ್ಲ ಬಯೋಮೆಟ್ರಿಕ್ ಆಧಾರದಲ್ಲಿ ಮಾಡಲಾಗುತ್ತದೆ. ಇದು ಆಗಿರದ ಅರ್ಹ ರೈತರು ಕೂಡಲೇ ಹತ್ತಿರದ ಸಿಎಸ್‌ಸಿ ಕೇಂದ್ರಗಳಿಗೆ ಭೇಟಿ ನೀಡುವಂತೆ ಕೇಂದ್ರ ಕೃಷಿ ಇಲಾಖೆ ತಿಳಿಸಿದೆ.
ಫಲಾನುಭವಿ ಪಟ್ಟಿಯಲ್ಲಿ ಹೆಸರು ಪರಿಶೀಲಿಸಲು ಹೀಗೆ ಮಾಡಿ
ಪಿಎಂ ಕಿಸಾನ್ ಯೋಜನೆಯ 17ನೇ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೆ ಎಂದು ಪರಿಶೀಲಿಸಿಕೊಳ್ಳಬೇಕು. ಈ ಕೆಳಗಿನ ವಿಧಾನಗಳು ಅನುಸಿರಿಸಬೇಕು.
* ನೀವು ಪಟ್ಟಿಯಲ್ಲಿ ಹೆಸರು ಪರಿಶೀಲಿಸಲು ಮೊದಲು ಪಿಎಂ ಕಿಸಾನ್ ಅಧಿಕೃತ ಸೈಟ್( www.pmkisan.gov.in) ಭೇಟಿ ಕೊಡಬೇಕು.
* ಪಿಎಂ ಕಿಸಾನ್ ಜಾಲತಾಣದ ಮುಖಪುಟದಲ್ಲಿ 'ಫಲಾನುಭವಿಗಳ ಪಟ್ಟಿ' ಯನ್ನು ಆಯ್ಕೆ ಮಾಡಬೇಕು
* ನಂತರ ನೀವಿರುವ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಹಳ್ಳಿ ವಿವರ ಆಯ್ಕೆ ಮಡಿಕೊಳ್ಳಬೇಕು.
* ಪರದೆ ಮೇಲೆ ಕಾಣುವ ಟ್ಯಾಬ್ ಅನ್ನು ಆಯ್ಕೆ ಮಾಡಿಕೊಳ್ಳಿ.
* ಬಳಿಕ ಪರದೆ ಮೇಲೆ ಕಾಣುವ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಬಹುದು.












Click it and Unblock the Notifications