ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Economic Survey 2023: ಕೃಷಿ ವಲಯದ ಸಾಮರ್ಥ್ಯ ಪ್ರತಿನಿಧಿಸುತ್ತದೆ: ವಿಶ್ಲೇಷಕರು

ಕೃಷಿ ಕ್ಷೇತ್ರದಲ್ಲಿ ರೈತರ ಜೀವನೋಪಾಯದ ಬೆಳವಣಿಗೆ ಹಾಗೂ ವರ್ಧನೆಗೆ ಬಲಗೊಂಡಿದೆ ಎಂದು 2023ರ ಆರ್ಥಿಕ ಸಮೀಕ್ಷೆ, ವಿಶ್ಲೇಷಕರು, ಉದ್ಯಮಿಗಳು ತಿಳಿಸಿದ್ದಾರೆ.

|
Google Oneindia Kannada News

ಬೆಂಗಳೂರು, ಜನವರಿ 31: ಕೃಷಿ ಕ್ಷೇತ್ರದಲ್ಲಿ ರೈತರ ಜೀವನೋಪಾಯದ ಬೆಳವಣಿಗೆ ಹಾಗೂ ವರ್ಧನೆಗೆ ಬಲಗೊಂಡಿದೆ ಎಂದು 2023ರ ಆರ್ಥಿಕ ಸಮೀಕ್ಷೆ, ವಿಶ್ಲೇಷಕರು, ಉದ್ಯಮಿಗಳು ತಿಳಿಸಿದ್ದಾರೆ.

ಕೃಷಿ ಉತ್ಪನ್ನ ಸಂಗ್ರಹಿಸಿಟ್ಟುಕೊಳ್ಳುವ ಗೋದಾಮುಗಳು ಬಹುತೇಕವುಗಳು ವ್ಯಾಪಾರಿಗಳು/ಸಂಸ್ಕರಣೆದಾರರ ಒಡೆತನದಲ್ಲಿವೆ. ಕೃಷಿ ವ್ಯಾಪಾರಿಗಳಿಗಾಗಿ ಗೋದಾಮುಗಳ ಅಭಿವೃದ್ಧಿಗೊಳಿಸುವ ಅವಶ್ಯಕತೆ ಇದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ಕೃಷಿ ಪ್ರಶಸ್ತಿಗೆ ಭಾಜನರಾದವರ ಮಕ್ಕಳಿಗೆ ಕೃಷಿ ವಿವಿಯಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಸರ್ಕಾರದ ನೆರವು : ಬಸವರಾಜ ಬೊಮ್ಮಾಯಿಕೃಷಿ ಪ್ರಶಸ್ತಿಗೆ ಭಾಜನರಾದವರ ಮಕ್ಕಳಿಗೆ ಕೃಷಿ ವಿವಿಯಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಸರ್ಕಾರದ ನೆರವು : ಬಸವರಾಜ ಬೊಮ್ಮಾಯಿ

ಡಿಲಾಯ್ಟ್ ಇಂಡಿಯಾದ ಸಂಸ್ಥೆ ಪಾಲುದಾರರಾದ ಆನಂದ್ ರಾಮನಾಥನ್ ಅವರು, ಆಹಾರ ಧಾನ್ಯ ಉತ್ಪಾದನೆಯಲ್ಲಿ ಪ್ರಗತಿ, ದಾಖಲೆ ಮಟ್ಟದಲ್ಲಿ ಕೃಷಿ ರಫ್ತು, ಎಂಎಸ್‌ಪಿ ಮಟ್ಟಗಳ ಏರಿಕೆ ಜೊತೆಗೆ ರಾಗಿ, ಎಣ್ಣೆ ಬೀಜಗಳು ಹಾಗೂ ಬೇಳೆ ಕಾಳುಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ಬೆಳೆ ವಿಮೆಯ ಹೆಚ್ಚಿನ ವ್ಯಾಪ್ತಿ ಹೊಂದಿದೆ. ಸಂಗ್ರಹಣೆಯಲ್ಲಿ ಕೃಷಿ ಉದ್ಯಮವು ಪ್ರಗತಿ ಕಂಡಿದೆ. ಇದು ರೈತರ ಜೀವನೋಪಾಯದ ಬೆಳವಣಿಗೆ ಮತ್ತು ವರ್ಧನೆಗೆ ನೆರವಾಗಿದೆ ಎಂದು ತಿಳಿಸಿದರು.

Economic survey shows strength of agriculture sector, livelihood of farmers, says agri Experts

ಆರ್ಥಿಕ ಸಮೀಕ್ಷೆ ಪ್ರಕಾರ ಕೃಷಿಯಲ್ಲಿನ ಇಳುವರಿ, ಉತ್ಪಾದನೆ ಹಾಗೂ ಮಾರುಕಟ್ಟೆ ಸಂಪರ್ಕ- ವ್ಯವಸ್ಥೆಯಡಿ ಈ ವಲಯವು ಕೆಲವು ಪ್ರಮುಖ ಸವಾಲುಗಳನ್ನು ಎದುರಿಸಿದೆ. ಆ ಸವಾಲು ಮೆಟ್ಟಿ ನಿಲ್ಲು ಕೃಷಿ-ತಂತ್ರಜ್ಞಾನದಿಂದ ಸಾಧ್ಯವಾಗಿದೆ. ಕೃಷಿ ತಂತ್ರಜ್ಞಾನದ ವ್ಯಾಪ್ತಿಯು ವಿಸ್ತರಣೆಯಾಗುತ್ತಿದೆ ಎಂದರು.

ರಫ್ತು ಹೆಚ್ಚಾದಂತೆ ಗೋದಾಮು ಬೇಡಿಕೆ ಏರಿಕೆ

ನ್ಯಾಷನಲ್ ಕಮೊಡಿಟೀಸ್ ಮ್ಯಾನೇಜ್‌ಮೆಂಟ್ ಸರ್ವಿಸಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಗುಪ್ತಾ ಅವರು ಸಮೀಕ್ಷೆ ಕುರಿತು ಪ್ರತಿಕ್ರಿಯಿಸಿದ್ದಾರೆ. ಕಳೆದ ಸುಮಾರು 06 ವರ್ಷಗಳಿಂದ ಭಾರತದ ಕೃಷಿ ಕ್ಷೇತ್ರವು ಶೇಕಡಾ 4.6ರ ದರದಲ್ಲಿ ಬೆಳೆಯುತ್ತಿದೆ. ಈ ಮೂಲಕ ಭಾರತವು ಕೃಷಿ ಉತ್ಪನ್ನಗಳ ನಿವ್ವಳ ರಫ್ತುದಾರನಾಗಿ ಹೊರಹೊಮ್ಮಿದೆ ಎಂಬುದು ಹರ್ಷದಾಯಕ ಸಂಗತಿ.

Economic survey shows strength of agriculture sector, livelihood of farmers, says agri Experts

ಕಳೆದ 2021-22ರ ಸಾಲಿನಲ್ಲಿ ದಾಖಲೆಯ US $ 50.2 ಶತಕೋಟಿಯನ್ನು ತಲುಪಿದೆ. ಕೃಷಿ ಉತ್ಪನ್ನಗಳ ಮುಂದುವರಿದ ಬೆಳವಣಿಗೆಯು ಕೃಷಿ ಗೋದಾಮಿನ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ. ಗೋದಾಮುಗಳು ಬೆಳೆ ಬೆಳೆದ ನಂತರದ ಅಗತ್ಯ ಸಂದರ್ಭಗಳಲ್ಲಿ ನಷ್ಟವನ್ನು ಕಡಿಮೆ ಮಾಡಲು ಕೃಷಿ ವ್ಯಾಪಾರಿಗಳಿಗೆ ಅವಶ್ಯಕವಾಗಿದೆ ಎಂದು ಹೇಳಿದರು.

ಸರ್ಕಾರ ರೈತರ ಆದಾಯವನ್ನು ಹೆಚ್ಚಿಸುವ ಮತ್ತು ಆಹಾರ ಭದ್ರತೆ ಖಾತರಿಪಡಿಸುವ ಉದ್ದೇಶ ಹೊಂದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ವ್ಯಾಪಾರಿಗಳು/ಸಂಸ್ಕರಣೆದಾರರ ಒಡೆತನದ ಬಹುಪಾಲು ಗೋದಾಮುಗಳ ಅಭಿವೃದ್ಧಿಯತ್ತ ಗಮನಹರಿಸಬೇಕಿದೆ. ಇನ್ನು ವಿಭಜಿತ ಕೃಷಿ ಉಗ್ರಾಣ ಉದ್ಯಮಕ್ಕೆ ನಿಯಂತ್ರಣ ಮಾಡುವುದು ತೀರಾ ಅಗತ್ಯವಿದೆ. ಈ ವಲಯಕ್ಕೆ ಸರಿಯಾದ ನಿಯಂತ್ರಣ ಅನ್ವಯವಾದರೆ ಉಗ್ರಾಣ ಕ್ಷೇತ್ರದ ಸಾಂಸ್ಥಿಕೀಕರಣಗೊಳ್ಳುತ್ತದೆ. ಉಗ್ರಾಣ ಕ್ಷೇತ್ರಕ್ಕೆ ಬಂಡವಾಳ ಹೂಡಿಕೆಯನ್ನು ಹೆಚ್ಚು ಆಕರ್ಷಿಸಲು ಸಾಧ್ಯವಾಗುತ್ತಿದೆ ಎಂದು ಅವರು ವಿವರಿಸಿದರು.

English summary
Economic survey 2023 is shows strength of agriculture sector, livelihood of farmers, says agri Experts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X