ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಪ್ರಶಸ್ತಿಗೆ ಭಾಜನರಾದವರ ಮಕ್ಕಳಿಗೆ ಕೃಷಿ ವಿವಿಯಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಸರ್ಕಾರದ ನೆರವು : ಬಸವರಾಜ ಬೊಮ್ಮಾಯಿ

ಕೇಂದ್ರ ಸರ್ಕಾರ ನೀಡುವ ಬೆಳೆಹಾನಿ ಪರಿಹಾರದ ಜೊತೆಗೆ ರಾಜ್ಯ ಸರ್ಕಾರದ ಪರಿಹಾರವನ್ನು ಸೇರಿಸಿ ದುಪ್ಪಟ್ಟು ಬೆಳೆಹಾನಿ ಪರಿಹಾರವನ್ನು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

|
Google Oneindia Kannada News

ಧಾರವಾಡ, ಜನವರಿ 31: ಕೃಷಿ ಪ್ರಶಸ್ತಿಗೆ ಭಾಜನರಾದವರ ಮಕ್ಕಳಿಗೆ ಕೃಷಿವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಸೇರಿದಂತೆ ಉನ್ನತ ಶಿಕ್ಷಣದ ಶುಲ್ಕವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಮಂಗಳವಾರ ಕೃಷಿ ಇಲಾಖೆ ಹಾಗೂ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಬಾರಿಯ ರೈತರ ಪರವಾಗಿ ವಿಶೇಷವಾದ ಬಜೆಟ್ ಇರಲಿದೆ. ಗ್ರಾಮೀಣ ಬದುಕು ಹಸನಾಗಬೇಕು. ಅಲ್ಲಿ ಆರ್ಥಿಕತೆ ಬೆಳೆದು ಸಾಮಾಜಿಕವಾಗಿ ಸಮಾನತೆ ತರುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ಧಾರವಾಡದಲ್ಲಿ ಕೃಷಿ ಇಲಾಖೆಯ ನೂತನ ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿಧಾರವಾಡದಲ್ಲಿ ಕೃಷಿ ಇಲಾಖೆಯ ನೂತನ ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

ಕೃಷಿ ಇನ್ನಷ್ಟು ಉತ್ತಮಗೊಳ್ಳಲು ಸಣ್ಣ ಸಣ್ಣ ರೈತರ ಮಟ್ಟಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ಹೊಸ ಪದ್ದತಿಯ ಗೋದಾಮುಗಳನ್ನು ನಿರ್ಮಿಸುವುದಕ್ಕೆ ಸರ್ಕಾರ ಚಿಂತನೆ ಮಾಡುತ್ತಿದೆ. ಈ ಮೂಲಕ ರೈತ ತನ್ನ ಬೆಳೆಗೆ ಬೆಲೆ ಬಂದಾಗ ಮಾರಾಟ ಮಾಡಬಹುದು. ನಮ್ಮ ಸುಗ್ಗಿ ಮಾಡಿದ ನಂತರ ರೈತರಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದರು.

Bommai launched new projects of the Department of Agriculture and University of Agriculture

33 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಒದಗಿಸಲಾಗಿದೆ. ಕೃಷಿಯಲ್ಲಿ ಆರ್ಥಿಕ ಬದಲಾವಣೆ ತರಲು ಈ ಬಗ್ಗೆ ಪರಿಣಿತರ ಬಳಿ ಚರ್ಚೆ ಮಾಡುತ್ತಿದ್ದು, ಒಂದು ಎಕರೆ ಜೋಳ ಬೆಳೆದರೆ ಎಷ್ಟು ವೆಚ್ಚವಾಗಲಿದೆ. ಎಷ್ಟು ಅಂತರವಿದೆ ಎಂದು ಪರಿಶೀಲಿಸಿ, ಬರುವ ದಿನಗಳಲ್ಲಿ ಇದಕ್ಕೆ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗುವುದು. ರೈತ, ಕೂಲಿಕಾರರನ್ನು ಗಟ್ಟಿಗೊಳಿಸಿದರೆ ಈ ನಾಡನ್ನು ಕಟ್ಟಬಹುದು. ದುಡಿಮೆಗೆ ಬೆಲೆ ಬರಲು ಕೃಷಿ ಸಾಲದ ನೀತಿ ಬದಲಾಗಬೇಕು. ಕೃಷಿ ಉತ್ಪನ್ನ ಪಡೆದ ಮೇಲೆ ಮಾರುಕಟ್ಟೆಯಲ್ಲಿ ದರ ನಿರ್ಧಾರ ಮಾಡುವ ರೀತಿಯಲ್ಲಿ ಆಗಬೇಕು. ರೈತನಿಗೆ ತಾನು ಬೆಳೆದ ಬೆಲೆ ಎಷ್ಟು ಎಂದು ಮುಂಚಿತವಾಗಿಯೇ ತಿಳಿಯುವ ಯೋಜನೆಯನ್ನು ಜಾರಿಗೆ ತರಬೇಕೆಂಬ ಚಿಂತನೆ ಇದೆ.

ಬರುವ ದಿನಗಳಲ್ಲಿ ಕೃಷಿಗೆ ಇನ್ನಷ್ಟು ಶಕ್ತಿಯನ್ನು ತುಂಬಲಾಗುವುದು. ಪ್ರಧಾನಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆಯಡಿ 20 ಲಕ್ಷ ಕೋಟಿಗಳಿಂತ ಹೆಚ್ಚು ಅನುದಾನವನ್ನು ದೇಶದಲ್ಲಿ ನೀಡಿದ್ದಾರೆ. ಕರ್ನಾಟಕದಲ್ಲಿ 46 ಲಕ್ಷ ಜನ ರೈತರಿಗೆ ಕಳೆದ 5 ವರ್ಷಗಳಿಂದ ಅನುದಾನ ಒದಗಿಸಲಾಗುತ್ತಿದ್ದು, ಕೇಂದ್ರದ ಆರು ಸಾವಿರ ರೂ.ಗಳಿಗೆ ರಾಜ್ಯ ಸರ್ಕಾರದ ನಾಲ್ಕು ಸಾವಿರ ಸೇರಿಸಿ ಒಟ್ಟು ಹತ್ತು ಸಾವಿರ ರೂ.ಗಳನ್ನು ನೀಡಲಾಗುತ್ತಿದೆ ಮೂಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು.

ಸುಮಾರು 51 ಲಕ್ಷ ರೈತರ ಖಾತೆಗೆ 390 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ. ರೈತರ ಯಂತ್ರೋಪಕರಣಕ್ಕೆ ಡೀಸೆಲ್ ವೆಚ್ಚವನ್ನು ಸರ್ಕಾರವೇ ಭರಿಸುವ ದಾಖಲೆಯ ಕಾರ್ಯಕ್ರಮ. ಇದೊಂದು ದಾಖಲೆಯ ನಿರ್ಣಯಕ್ಕೆ 500 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಕೃಷಿಯಲ್ಲಿ ಆದಾಯ ಹೆಚ್ಚಬೇಕಾದರೆ ಕೃಷಿ ಸೇರಿದಂತೆ ಕುಟುಂಬದ ಇತರ ಸದಸ್ಯರು ಬೇರೆ ಬೇರೆ ವೃತ್ತಿಯಲ್ಲಿದ್ದಾಗ ಮಾತ್ರ ಆ ಕುಟುಂಬ ಸಬಲವಾಗುತ್ತದೆ. ಕೃಷಿ ಅಭಿವೃದ್ಧಿಕಂಡಿದ್ದು, ಹಸಿರು ಕ್ರಾಂತಿಯಾಗಿದೆ. ದೇಶದ 130 ಕೋಟಿ ಜನರಿಗೆ ಆಹಾರ ದೊರೆಯುತ್ತಿರುವುದರಲ್ಲಿ ರೈತರು ಮಹತ್ವದ ಪಾತ್ರ ವಹಿಸುತ್ತಾರೆ. ಕೃಷಿ ಸಂಶೋಧನೆಗಳು, ಆವಿಷ್ಕಾರಗಳನ್ನು ರೈತರು, ಕೃಷಿ ವಿವಿಗಳು ಕೈಗೊಳ್ಳುತ್ತಿದ್ದು, ಕೃಷಿ ಕ್ಷೇತ್ರ ಅಭಿವೃದ್ಧಿಗೊಳಿಸುತ್ತಿದ್ದಾರೆ.

Bommai launched new projects of the Department of Agriculture and University of Agriculture

11 ಲಕ್ಷ ರೈತರ ಮಕ್ಕಳಿಗೆ 488 ಕೋಟಿ ರೂ.ಗಳ ವಿದ್ಯಾನಿಧಿ ನೀಡಲಾಗಿದೆ. ಇಂದು ನೀಡಲಾಗಿರುವ ರೈತಶಕ್ತಿ ಯೋಜನೆ, ರೈತ ವಿದ್ಯಾನಿಧಿ ಯೋಜನೆಗಳಿಗೆ ಫಲಾನುಭವಿಗಳಿಂದ ಯಾವುದೇ ಅರ್ಜಿ ಪಡೆಯಲಾಗಿಲ್ಲ. ಒಮ್ಮೆ ದಲಿತ ರೈತರ ಮಗಳು ನನ್ನನ್ನು ಭೇಟಿಯಾದಳು. ಆ ಹೆಣ್ಣುಮಗಳು ಎಸ್ ಸಿ ಎಸ್ ಟಿ ವಿದ್ಯಾರ್ಥಿ ವೇತನ ಹಾಗೂ ರೈತ ವಿದ್ಯಾನಿಧಿಗಳೆರಡೂ ಲಭಿಸಿದೆ ಎಂದರು

ಯಾವುದೇ ವರ್ಗದ ವಿದ್ಯಾರ್ಥಿ ವೇತನ ಪಡೆದಿದ್ದರೂ ರೈತ ಮಕ್ಕಳು, ರೈತ ವಿದ್ಯಾನಿಧಿಯನ್ನು ಪಡೆಯಬಹುದಾಗಿದೆ. ಇದು ಸರ್ಕಾರದ ರೈತಪರ ನಿಲುವಾಗಿದೆ. ಕೇಂದ್ರ ಸರ್ಕಾರ ನೀಡುವ ಬೆಳೆಹಾನಿ ಪರಿಹಾರದ ಜೊತೆಗೆ ರಾಜ್ಯಸರ್ಕಾರದ ಪರಿಹಾರವನ್ನು ಸೇರಿಸಿ ದುಪ್ಪಟ್ಟು ಬೆಳೆಹಾನಿ ಪರಿಹಾರವನ್ನು ನೀಡಲಾಗುತ್ತಿದೆ. 14 ಲಕ್ಷ ರೈತರಿಗೆ 1900 ಕೋಟಿ ರೂ.ಗಳ ಬೆಳೆಹಾನಿ ಪರಿಹಾರವನ್ನು ಎರಡು ತಿಂಗಳ ಅವಧಿಯೊಳಗೆ ನೀಡಲಾಗಿದೆ. ರಾಜ್ಯ ಸರ್ಕಾರವು ಈ ಹಿಂದಿನ ಸರ್ಕಾರಗಳ ಪರಿಹಾರಕ್ಕಿಂತ ಹೆಚ್ಚಿನ ಮೊತ್ತವನ್ನು ನಮ್ಮ ಸರ್ಕಾರ ನೀಡುತ್ತಿದೆ ಎಂದರು.

English summary
Basavaraja Bommayi said that government assistance will be given to the children of agricultural awardees for higher education in agricultural universities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X