• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಸ್ಟ್ರೇಲಿಯಾದಲ್ಲಿ ಫ್ರೆಂಡ್ಸ್ ಆಫ್ ಇಂಡಿಯಾದಿಂದ ಗಣೇಶೋತ್ಸವ

By ಸೀತಾ ಕೇಶವ, ಸಿಡ್ನಿ
|

ಲಿವರ್ಪೂಲ್ ಬಡಾವಣೆ ಸಿಡ್ನಿಯ 32 ಕಿ.ಮೀ ದೂರದ ನೈಋತ್ಯದ ಪ್ರಮುಖ ನಗರವಾಗಿದೆ. ಉತ್ತರ ಭಾಗದಲ್ಲಿ ಹೆಚ್ಚಿನ ಸಾಂದ್ರತೆ, ವಸತಿ ಅಪಾರ್ಟ್ಮೆಂಟ್ಸ್ ಗಳು, ದಕ್ಷಿಣದಲ್ಲಿ ವಾಣಿಜ್ಯ ಬೆಳವಣಿಗೆಗಳು ಹಾಗೂ ಸಿಟಿ ಸೆನ್ಟರ್ ಆರ್ಕೇಡ್, ಸಣ್ಣ ಸಣ್ಣ ತಿರುವು ದಾರಿ, ಮಕ್ವೈರೀ ಬೀದಿನಲ್ಲಿ ವೆಸ್ಟ್ ಫೀಲ್ಡ್ ಶಾಪಿನ್ಗ್ ಮಳಿಗೆನಲ್ಲಿ ನೂರಾರು ಡಿಸೈನರ್ ಶಾಪ್ಗಳಿಂದ ಕೂಡಿದ್ದಾಗಿದೆ. ಕ್ರಿಕೆಟ್ ಆಟಗಾರ ಮೈಕೆಲ್ ಕ್ಲಾರ್ಕ್ ಈ ಬಡಾವಣೆಯವರೇ! ಇನ್ನೊಂದು ವಿಶೇಷತೆಯೆಂದರೆ ಪ್ರತೀವರ್ಷ ಕಾದು ಎದುರು ನೋಡುವ 'ಗಣೇಶೋತ್ಸವ'.

2011ರ ಸೆನ್ಸಸ್ ಪ್ರಕಾರ ಇಲ್ಲಿಯ ಜನಗಣತಿ 4,391,674. ಇದಷ್ಟೆ ಅಲ್ಲದೆ ಭಾರತೀಯರ ಸಂಖ್ಯೆಯೂ ಜಾಸ್ತಿಯಿದ್ದು, ಇದನ್ನು 'ಮಿನಿ ಇಂಡಿಯಾ' ಎಂದರೆ ತಪ್ಪಾಗಲಾರದು. ಹೀಗಾಗಿ ವಲಸೆ ಬಂದಿದ್ದವರಲ್ಲೂ ವಿಶ್ವ ಹಿಂದೂ ಪರಿಷತ್, ಆರ್ಎಸ್ಎಸ್ ನಲ್ಲಿ ಪಳಗಿ ಬಂದಿದ್ದವರು ಇಲ್ಲಿದ್ದಾರೆ. 1995ರಲ್ಲಿ ಅವರುಗಳು ಮತ್ತು ಇನ್ನೂ ಅನೇಕ ಸಂಸಾರಗಳು ಕೂಡಿ ಸೇರಿಕೊಂಡು ಮೊದಲಿಗೆ ಮನೆಗಳಲ್ಲೇ ತಾವೇ ಜೇಡಿಮಣ್ಣಿನಿಂದ ಗಣಪನ ಮಾಡಿ ಹಬ್ಬ ಆಚರಿಸುತ್ತಾ ಬಂದಿದ್ದಾರೆ.

ಕ್ರಮೇಣ ಅದಕ್ಕೆ ಫ್ರೆಂಡ್ಸ್ ಆಫ್ ಇಂಡಿಯಾ, ಲಿವರ್ಪೂಲ್ ಎಂದು ನಾಮಕರಣ ಮಾಡಿ, ಅದು ಬೆಳೆಯುತ್ತಾ ಅಲ್ಲಿನ ಸ್ವಯಂ ಸೇವಕರುಗಳು ಒಟ್ಟುಗೂಡಿ ಸತತವಾಗಿ ತಪ್ಪದೆ ಪ್ರತಿವರ್ಷ ಎರಡು ದಿವಸದ ಕಾರ್ಯಕ್ರಮ ಹಾಕಿಕೊಂಡರು. ನಂತರ ಎಲ್ಲರಿಗೂ ಅನುಕೂಲವಾಗುವಂತೆ ಸಾವಿರಾರು ಜನರನ್ನು ಸೇರಿಸಿ ವಿಟ್ಲಂ ಸೆಂಟರ್ ನಲ್ಲಿ ಹಬ್ಬ ಆಚರಿಸುತ್ತ ಬಂದಿದ್ದಾರೆ. ಮೊದಲ ದಿವಸ ಗಣಪನ ಪ್ರತಿಷ್ಠಾಪನೆ, ಗಣ ಹೋಮ, ಸಾಯಂಕಾಲ ಸಂಗೀತ, ಸಾಂಸ್ಕೃತಿಕ ಮನರಂಜನೆಯ ಕಾರ್ಯಕ್ರಮ. ನಂತರ ನೆರೆದವರಿಗೆಲ್ಲಾ ಬಾಳೆ ಎಲೆ ಊಟ (ಬಾಳೆ ಎಲೆ ಸಿಕ್ಕುವಾಗ).

ಶನಿವಾರ ಬೆಳಗ್ಗೆ ಮಹಾಪ್ರಸಾದ. ಸ್ವಯಂಸೇವಕರುಗಳೇ ಸೇರಿ ನೆರೆದ ಭಕ್ತಾದಿಗಳಿಗೆಲ್ಲಾ 'ಕಡುಬು' ಮತ್ತು ಸಾಯಂಕಾಲವೂ ಸುಮಾರು 3000 ಜನರಿಗೆ ಶ್ರದ್ಧೆ, ಪ್ರೀತಿಯಿಂದ ತಯಾರಿಸಿದ ಮಹಾಪ್ರಸಾದ ಹಂಚುವರು. ಎರಡು ದಿವಸದ ಹಬ್ಬದಲ್ಲಿ ಸುಮಾರು 6000 ಜನ ಸೇರುತ್ತಾರೆ. ಮಾರನೆ ದಿವಸ ಸತ್ಯ ನಾರಾಯಣ ಪೂಜೆ, ಮಕ್ಕಳಿಗೆ ವೇಷ ಭೂಷಣದ ಸ್ಪರ್ಧೆ, ವೇದಾಂತ ಸೆಂಟರ್ ಸ್ವಾಮೀಜಿಯವರಿಂದ ಪ್ರವಚನ, ಊಟ ನಂತರ ವಿಸರ್ಜನೆ. ಎರಡು ದಿವಸ ಇಲ್ಲಿ ಭರ್ತಿ ಹಬ್ಬದ ವಾತಾವರಣ, ಮಾತೃಭಾಷೆಯ ಕಲರವ, ಸ್ನೇಹಿತರ ಸಮಾಗಮ!

ಹೀಗೆಯೇ ಗಣೇಶೋತ್ಸವ ಪ್ರತಿವರ್ಷ ಬೆಳೆಯುತ್ತಾ ಬಂದು ಸುತ್ತ ಮುತ್ತಲಿನ ಬಡಾವಣೆಯ ಸದಸ್ಯರುಗಳೂ ಮುಂದೆ ಬಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಭಾಗವಹಿಸಿ, ವಿಧವಿಧವಾದ ಬಣ್ಣ ಬಣ್ಣದ ಕಣ್ಣು ಕೋರೈಸುವ ಉಡುಗೆ ತೊಡುಗೆಗಳಿಂದ ಭಾರತೀಯ, ಬಾಲಿವುಡ್ ನೃತ್ಯಗಳಿಂದ ಮನರಂಜನೆ ನೋಡುತ್ತಿದ್ದರೆ ಎರಡು ಗಂಟೆಗಳು ಕಳೆಯುವುದೇ ಗೊತ್ತಾಗುವುದಿಲ್ಲ.

ಹಿರಿಯರು ತಳಪಾಯ ಹಾಕಿ ನಡೆಸಿಕೊಂಡು ಬಂದಿರುವುದನ್ನ ಯುವ ಪೀಳಿಗೆಯವರು ಅಷ್ಟೇ ಶ್ರದ್ಧೆ, ಭಕ್ತಿ, ಉತ್ಸಾಹ, ಆಸಕ್ತಿಯಿಂದ ಮುಂದೆ ಬಂದು 20ನೇ ವರ್ಷದ ವಾರ್ಷಿಕೋತ್ಸವ ನಡೆಸಿದ್ದು, ಗಣಪನ್ನ ಕೂರಿಸಿದ ಮಂಟಪವನ್ನೂ ಯುವಕ ಯುವತಿಯರು ಕೈಜೂಡಿಸಿ ಕಲಾಕೃತಿಯಲ್ಲಿ ಅಲಂಕರಿಸಿದ್ದು ಎದ್ದು ಕಾಣುತ್ತಿತ್ತು.

ಎರಡನೆಯ ದಿವಸ ಗಣಪನ ವಿಸರ್ಜನೆಗೆ ಮುಂಚೆ ದೊಡ್ಡ ಗಣಪನ್ನ ನವಿಲಿನಿಂದ ಎರಡೂ ಕಡೆ ಅಲಂಕರಿಸಿದ ಟ್ರಕ್ ನಲ್ಲಿ ಕೂರಿಸಿ, ಬ್ಯಾಂಡ್ ಗಣೇಶ ಬಂದ ಕಾಯಿ ಕಡಬು ತಿಂದ ಹಾಡು, ಗಣಪತಿ ಭಪ್ಪ ಮೋರಯ ಎಂದು ಕೂಗುತ್ತ, ಕುಣಿಯುತ್ತ ಮೆರವಣಿಗೆಯಲ್ಲಿ ಪಾಲ್ಗೊಂಡರು. ಸ್ಥಳೀಯ ಮೇಯರ್, ಫೆಡರಲ್ ಗವರ್ನಮೆಂಟ್ ಮೆಂಬರ್ ಭಾರತೀಯ ಸಂಪ್ರದಾಯದಂತೆ ಜನ ಸಮೂಹಕ್ಕೆ 'ನಮಸ್ತೆ ನಮಸ್ತೆ' ಎಂದು ಹೇಳಿ, ಮೆರವಣಿಗೆಯನ್ನು ಪ್ರಶಂಶಿಸಿದರು.

ನಂತರ ಶಾಸ್ತ್ರೋಕ್ತವಾಗಿ ಚಿಪ್ಪಿನ್ಗ್ ನಾರ್ಟನ್ ಬಡಾವಣೆಯ ಕೊಳದಲ್ಲಿ ಗಣಪನ್ನ ವಿಸರ್ಜಿಸಿ ಬಂದಿದ್ದಾಯಿತು. ನಮಗೂ ಇದರಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು ತೃಪ್ತಿಯಾಯಿತು. ಹೆಸರೇ ಹೇಳುವಂತೆ ಫ್ರೆಂಡ್ಸ್ ಆಫ್ ಇಂಡಿಯ, ಶಿಸ್ತು, ಸಂಯಮ, ಸಂಸ್ಕೃತಿ, ಕಲೆ, ಶ್ರದ್ಧೆ, ಪ್ರೀತಿ, ಒಮ್ಮತದಿಂದ ಕಷ್ಟಪಟ್ಟು ಕೆಲಸಮಾಡಿ, 'ಒಗ್ಗಟ್ಟಿನಲ್ಲಿ ಬಲವಿದೆ' ಎನ್ನುವುದು 'ಅಕ್ಷರಸಹಿತ ಸತ್ಯ' ಎನ್ನುವುದು ನಿರೂಪಿಸುತ್ತಿರುವುದು ಹೆಮ್ಮೆಯ ವಿಷಯ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Friends of India, a community formed by Indians to celebrate festivals of Karnataka, India, celebrated Ganeshotsava in a grand fashion. The Hindus are celebrating this festival for the past 20 years. A report by Seetha Keshava, Sydney.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more