ಶುಭ ಶಕುನವೇ? ಎಚ್‌ಡಿಕೆ ಪೂಜೆ ಸಲ್ಲಿಸುವ ವೇಳೆ ಪುಷ್ಪ ಪ್ರಸಾದ ಕೊಟ್ಟ ಗೋಕರ್ಣ ಗಣಪತಿ!
ಕರ್ನಾಟಕ ವಿಧಾನಸಭೆ ಚುನಾವಣೆ 2023: ಮುಂಬರುವ ಚುನಾವಣೆಯ ಸಿದ್ಧತೆಯಲ್ಲಿ ನಿರತರಾಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಗೋಕರ್ಣದ ಮಹಾಗಣಪತಿ ದೇಗುಲದಲ್ಲಿ ಗಣಪ ಪ್ರಸಾದ ಕೊಟ್ಟಿದ್ದಾನೆ.
ಕುಮಾರಸ್ವಾಮಿಯವರು ಪೂಜೆ ಸಲ್ಲಿಸುವ ವೇಳೆ ಪುಷ್ಪ ಪ್ರಸಾದ ಲಭಿಸಿದೆ. ಗೋಕರ್ಣ ಮಹಾಗಣಪತಿ ದೇಗುಲದಲ್ಲಿ ಗಣಪ ಪ್ರಸಾದ ಕೊಟ್ಟಿದ್ದಾನೆ. ಈ ಮೂಲಕ ಮಹಾಗಣಪತಿ ಅಭಯ ನೀಡಿದ್ದಾನೆ ಎಂದು ಹೇಳಲಾಗುತ್ತಿದೆ. ಗಣಪತಿ ಬಲಗಡೆ ಕಿವಿಯಿಂದ ಹೂವು ಬಿದ್ದಿದ್ದು ಹೆಚ್.ಡಿ. ಕುಮಾರಸ್ವಾಮಿ ಭಕ್ತಿಯಿಂದ ಬೇಡಿಕೊಂಡಿದ್ದಾರೆ.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ 'ಪಂಚರತ್ನ' ಯಾತ್ರೆಯು ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಗೋಕರ್ಣಕ್ಕೆ ಕುಮಾರಸ್ವಾಮಿ ತೆರಳಿದ್ದರು. ಮಹಾಬಲೇಶ್ವರ ದೇವರ ಆಶೀರ್ವಾದವನ್ನು ಪಡೆದರು.
ಬಳಿಕ ಅವರು ಶಿವನ ಆತ್ಮಲಿಂಗದ ದರ್ಶನ ಪಡೆದು ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದರು. ವಿಘ್ನ ನಿವಾರಕನಿಗೆ ಪೂಜೆ ಮಾಡುವ ವೇಳೆ ಪುಷ್ಪ ಪ್ರಸಾದವನ್ನು ಗಣಪ ನೀಡಿದ್ದಾನೆ. ಹೆಚ್‌ಡಿಕೆ ಪೂಜೆ ಮಾಡುವ ವೇಳೆ ಬಲಭಾಗದಲ್ಲಿ ಪುಷ್ಪ ಬಿದ್ದಿದ್ದು ಅರ್ಚಕರು ಅದನ್ನು ಕುಮಾರಸ್ವಾಮಿಗೆ ನೀಡಿದ್ದಾರೆ.
ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು,' ಅಭಿವೃದ್ಧಿ ಮಾಡಬೇಕಾದ ಸರ್ಕಾರ ಗೊಂದಲ ಮಾಡುತ್ತಿದೆ. ಹಿಜಾಬ್ ವಿಚಾರ ತೆಗೆದು ದೇಶದಲ್ಲಿ ಗೊಂದಲ ಹುಟ್ಟಿಸಿದೆ. ಊಟ ಮಾಡುವ ಹಲಾಲ್ ವಿಚಾರದಲ್ಲೂ ಗೊಂದಲ ಮೂಡಿಸಿದೆ. ಜೆಡಿಎಸ್ ಅಧಿಕರಕ್ಕೆ ಬಂದರೆ ನೆಮ್ಮದಿ ಜೀವನಕ್ಕೆ ಆಧ್ಯತೆ ಎಂದರು.

ರಾಜ್ಯ ವಿಧಾನಸಭೆ ಚುನಾವಣೆ:-
ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ. ಹೀಗಾಗಿ ಪ್ರಬಲ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಹಲವಾರು ಭರವಸೆಗಳ ಮೂಲಕ ಜನರನ್ನು ತನ್ನತ್ತ ಸೆಳೆಯುವ ಕಾರ್ಯದಲ್ಲಿ ನಿರತವಾಗಿವೆ.












Click it and Unblock the Notifications