ಈ ಬಾರಿಯ ಗಣೇಶ ಹಬ್ಬ ಹಿಂದಿನಂತಲ್ಲ: ವಿಗ್ರಹ ತಯಾರಕರ ಹೊಸ ಕಾನ್ಸೆಪ್ಟ್!
ಬೆಂಗಳೂರು, ಆಗಸ್ಟ್ 21: ಗಣೇಶನ ಹಬ್ಬ ಹತ್ತಿರ ಬರುತ್ತಾ ಇದೆ, ಅಂದರೆ ಬಹುತೇಕರಿಗೆ ಗಣಪನ ಕೂರಿಸಿ ಮೆರವಣಿಗೆ ಮಾಡುವ ನೆನಪು ಬರುತ್ತದೆ. ಮಾರ್ಕೆಟ್ ಅಲ್ಲಿ ಕೂಡ ಭಿನ್ನ ವಿಭಿನ್ನವಾದ ಡಿಫರೆಂಟ್ ಡಿಫರೆಂಟ್ ಡಿಸೈನ್ ನಲ್ಲಿರುವ ಗಣಪ ಸಿಕ್ಕುತ್ತಾನೆ. ಸದ್ಯ ಈ ಬಾರಿ ಹೊಸ ಟ್ರೆಂಡ್ ಶುರು ಆಗಿದೆ, ಇದರ ಪ್ರಕಾರ ಬೆಂಗಳೂರಿನಲ್ಲಿ ಗಣೇಶ ಮೂರ್ತಿ ಬಾಡಿಗೆಗೆ ಸಿಗಲಿದೆ. ಬಾಡಿಗೆ ಗಣಪನ ಹೇಗಪ್ಪಾ ಮೈನ್ಟೇನ್ ಮಾಡೋದು ಹೇಗೆ ಸಿಗುತ್ತೆ?
ಬೆಂಗಳೂರಿನಲ್ಲಿ ನಮಗೆಲ್ಲಾ ಗೊತ್ತಿರುವ ಹಾಗೇ ಏರಿಯಾ ಏರಿಯಾಗಳಲ್ಲಿ ಗಣಪನನ್ನ ಕೂರಿಸುತ್ತಾರೆ. ಸದ್ಯ ಗೌರಿ ಗಣೇಶ ಹಬ್ಬಕ್ಕೆ ಒಂದು ತಿಂಗಳು ಇರುವಾಗಲೇ ಪಿಒಪಿ ಬಾಡಿಗೆ ಗಣೇಶನಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದೆ. ಈಗಾಗಲೇ ಗೊತ್ತಿರೋ ಹಾಗೇ ಪಿಒಪಿ ಗಣೇಶನ ಮಾರಾಟ ಮಾಡುವ ಹಾಗಿಲ್ಲ ಸದ್ಯ POP ಗಣೇಶನಿಗೆ ಮಾರ್ಕೆಟ್ ನಲ್ಲಿ ನಿಷೇಧ ಹೇರಲಾಗಿದೆ.

ಹೀಗಾಗಿ ಗಣೇಶ ತಯಾರಕರು ಇರುವಂತಹ POP ಗಣೇಶನ ಮಾರೋದು ಹೇಗಪ್ಪಾ ಅಂತ ತಲೆ ಮೇಲೆ ಕೈ ಹೊತ್ತು ಕುಳಿತು ಕೊಳ್ಳದೇ ಈ ಪರ್ಯಾಯ ಪ್ಲಾನ್ ಮಾಡಿದ್ದಾರೆ. ಮಾರಾಟ ಮಾಡುವ ಬದಲು ಪಿಒಪಿ ಗಣೇಶನ ಮೂರ್ತಿ ಬಾಡಿಗೆ ನೀಡಲು ಸಿದ್ದರಾಗಿದ್ದಾರೆ. ಹೀಗೇ ನೀಡುವ ಸಮಯದಲ್ಲಿ ಪಿಒಪಿ ಗಣೇಶನ ಮೂರ್ತಿಯ ಜತೆಗೆ ಒಂದು ಮಣ್ಣಿನ ಮೂರ್ತಿಯನ್ನು ನೀಡ್ತಾರೆ. ಮೆರವಣಿಗೆಯಲ್ಲಿ ಎರಡೂ ಮೂರ್ತಿಗಳು ಜೊತೆಗಿರುತ್ತವೆ.
ಆದರೆ, ಮಣ್ಣಿನ ಮೂರ್ತಿಯನ್ನು ಮಾತ್ರ ನೀರಿನಲ್ಲಿ ವಿಸರ್ಜಿಸುತ್ತಾರೆ, ಪಿಒಪಿ ಗಣೇಶನನ್ನು ಮಾಲೀಕರಿಗೆ ವಾಪಸ್ ನೀಡಬೇಕಾಗುತ್ತದೆ. ಇನ್ನೂ ಈ POP ಗಣೇಶನ ಪಡೆಯುವುದಕ್ಕೆ ಕೆಲವು ರೂಲ್ಸ್ ಗಳು ಅಪ್ಲೈ ಆಗುತ್ತದೆ. ಆ ಪಿಒಪಿ ಗಣೇಶ ಎಷ್ಟು ಬೆಲೆ ಬಾಳುತ್ತದೆ ಅಷ್ಟು ಮೊತ್ತವನ್ನು ಠೇವಣಿ ಇಡಬೇಕು.
ಪಿಒಪಿ ಗಣೇಶನ ಪಡೆಯುವಾಗಲೇ, ಠೇವಣಿ ಇಡಬೇಕಾಗುತ್ತದೆ. ಬಳಿಕ ಪಿಒಪಿ ಗಣೇಶನನ್ನು ತೆಗೆದುಕೊಂಡು ಹೋಗಬೇಕು. ಎಷ್ಟು ದಿನ ಇಟ್ಟು ಕೊಳ್ಳುತ್ತಾರೋ ಅಷ್ಟು ದಿನದ ಬಾಡಿಗೆಯನ್ನು ವಾಪಾಸ್ ಕೊಡುವಾಗ ಕಟ್ ಮಾಡಿ ಅಸಲಿ ಹಣ ಅಂಗಡಿ ಮಾಲೀಕರು ವಾಪಸ್ ಕೊಡುತ್ತಾರೆ.
ಜನ ತಮಗೆ ಇಷ್ಟವಾಗುವ ಗಣೇಶನ ಮೂರ್ತಿ ಬೇಕಾದಷ್ಟು ದಿನ ಬಾಡಿಗೆ ಪಡೆಯಲು ಅವಕಾಶ ಇದೆ. ಪೂಜೆ ಆದ ನಂತರ ಮೂರ್ತಿಗಳ ಮಾಲೀಕರಿಗೆ ವಾಪಸ್ ನೀಡಬಹುದು. ಮೂರ್ತಿಗಳ ಎತ್ತರ, ವಿನ್ಯಾಸದ ಮೇಲೆ ಬಾಡಿಗೆ ದರ ನಿಗದಿ ಮಾಡಲಾಗಿದೆ. ಸಾಮಾನ್ಯವಾಗಿ ದಿನಕ್ಕೆ 2 ಸಾವಿರದಿಂದ 10 ಸಾವಿರ ರೂ.ವರೆಗೆ ಬಾಡಿಗೆ ದರವಿದೆ.
ಪಿಒಪಿ ನಿಷೇಧಕ್ಕೂ ಮುನ್ನ ತಯಾರಿಸಿದ ಸಾಕಷ್ಟು ಮೂರ್ತಿಗಳು ಹಾಗೇ ಇವೆ. ನಿಷೇಧಕ್ಕೂ ಮೊದಲೇ ತಯಾರಿಸಿರುವ ಮೂರ್ತಿಗಳು ಮಾರಾಟವಾಗದೆ ಉಳಿದುಕೊಂಡಿವೆ. ಹೀಗಾಗಿ ಮಾರಾಟ ಮಾಡುವ ಬದಲು ಬಾಡಿಗೆ ನೀಡಲು ಮಾಲೀಕರು ನಿರ್ಧಾರ ಮಾಡಿದ್ದಾರೆ.












Click it and Unblock the Notifications