Video Call Ganesha: ಗಣೇಶ ಚತುರ್ಥಿಯಂದು ಈ 'ಗಣಪತಿ'ಗೆ ವೀಡಿಯೋ ಕಾಲ್ ಮಾಡಬಹುದು... ಈ ಅದ್ಭುತ ಮೂರ್ತಿ ಎಲ್ಲಿದೆ?
Video Call Ganesha: ಭಕ್ತರೊಂದಿಗೆ ಮಾತನಾಡಲು ಭೂಲೋಕಕ್ಕೆ ಬಂದಿದ್ದಾನೆ ಗಣೇಶ. ಏನಿದು ಆಶ್ಚರ್ಯ ಅಂದ್ರಾ? ಆಶ್ಚರ್ಯ ಆದರೂ ಇದು ನಿಜನೇ. ಯಾಕೆಂದರೆ ಆಗ್ರಾದಲ್ಲಿನ ಗಣೇಶ ಭಕ್ತರೊಂದಿಗೆ ಮಾತನಾಡುತ್ತಾನೆ. ಮಾತ್ರವಲ್ಲ ಈ ಗಣೇಶನಿಗೆ ವಿಡಿಯೋ ಕಾಲ್ ಕೂಡ ಮಾಡಬಹುದು. ಅಷ್ಟೇ ಯಾಕೆ ನೀವು ಕೊಟ್ಟ ಮೋದಕವನ್ನೂ ತಿನ್ನುತ್ತಾನೆ.
ಗಣೇಶನಿಗೆ ಸಮರ್ಪಿತವಾದ ಗಣೇಶ ಚತುರ್ಥಿಯ ಹಬ್ಬ ಈ ವರ್ಷ ಸೆಪ್ಟೆಂಬರ್ 18 ರಂದು ಬರುತ್ತದೆ. ಈ ಹಬ್ಬವನ್ನು ದೇಶದಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಗಣೇಶನನ್ನು ಪೂಜಿಸುವ ಸಂಪ್ರದಾಯವಿದೆ. ಈ ದಿನವನ್ನು ವಿಶೇಷವಾಗಿ ಗಣೇಶನ ಜನ್ಮದಿನವೆಂದು ಆಚರಿಸಲಾಗುತ್ತದೆ. ಆದರೆ ಈ ಗಣೇಶ ಚತುರ್ಥಿಯಂದು ಆಗ್ರಾದಲ್ಲಿ ಗಣಪತಿಯೇ ಪ್ರತ್ಯಕ್ಷನಾಗುತ್ತಾನೆ.

ಮಾತನಾಡಬಹುದು, ತಿನ್ನುವ, ನೋಡುವ ಗಣೇಶ
ವಾಸ್ತವವಾಗಿ ಆಗ್ರಾದ ಪಂಚಕುಯಿಯಾನ್ ತಿಲಾ ನಿವಾಸಿ ಅಜಯ್ ಬಾಥಮ್ ಎಂಬುವವರು ಗಣೇಶನ ವಿಶಿಷ್ಟ ವಿಗ್ರಹವನ್ನು ತಯಾರಿಸಿದ್ದಾರೆ. ಈ ವಿಗ್ರಹ ಮಾತನಾಡಬಲ್ಲದು, ಕೇಳಬಲ್ಲದು, ತಿನ್ನಬಲ್ಲದು ಮತ್ತು ನೋಡಬಲ್ಲದು ಎಂದು ಈ ವಿಗ್ರಹದ ಬಗ್ಗೆ ಅಜಯ್ ಹೇಳಿಕೊಂಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಈ ವಿಗ್ರಹವು ಉಸಿರಾಡುತ್ತದೆ ಎಂದು ಯುವಕ ಹೇಳುತ್ತಾರೆ. ಈ ಪ್ರತಿಮೆಗೆ ಕೃತಕ ಹೃದಯವೂ ಇದೆ ಮತ್ತು ಅದು ಬಡಿದುಕೊಳ್ಳುತ್ತದೆ. ಮೊದಲ ನೋಟಕ್ಕೆ ಈ ಪ್ರತಿಮೆಯನ್ನು ನೋಡಿದರೆ ಪ್ರತಿಮೆ ಜೀವಂತವಾಗಿದೆ ಎಂದು ತೋರುತ್ತದೆ.
ಬಸ್ ಮತ್ತು ಟ್ರಕ್‌ನ ಟ್ಯೂಬ್‌ನಿಂದ ಪ್ರತಿಮೆ ತಯಾರಿ
37 ವರ್ಷದ ಅಜಯ್ ಬಾಥಮ್ ಈ ಪ್ರತಿಮೆಯನ್ನು ತಯಾರಿಸಲು ಸುಮಾರು 8 ರಿಂದ 9 ತಿಂಗಳುಗಳನ್ನು ತೆಗೆದುಕೊಂಡಿದ್ದಾರೆ. ಈ ಬಾರಿಯ ಗಣೇಶ ಉತ್ಸವದಂದು ಈ ಮೂರ್ತಿಯನ್ನು ಚೌಕದಲ್ಲಿ ಪೂಜೆಗೆ ಇಡಲಾಗುತ್ತದೆ. ಕಳೆದ ವರ್ಷ ಗಣೇಶ ಚತುರ್ಥಿಯಂದು ಈ ವಿಗ್ರಹವನ್ನು ತಯಾರಿಸುವ ಆಲೋಚನೆ ಬಂದಿತ್ತು ಎಂದು ಅಜಯ್ ಹೇಳುತ್ತಾರೆ. ಈ ವಿಗ್ರಹದ ವಿಶೇಷವೆಂದರೆ ಬಸ್ ಮತ್ತು ಟ್ರಕ್‌ನ ಟ್ಯೂಬ್‌ಗಳನ್ನು ಬಳಸಿ ತಯಾರಿಸಿರುವುದು.

ಕಣ್ಣುಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ
ವಿಗ್ರಹದೊಳಗೆ ಅನೇಕ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಗ್ಲೋಬರ್ ಮೋಟಾರ್ ಬಳಸಲಾಗಿದೆ ಎಂದು ಅಜಯ್ ಬಾಥಮ್ ಹೇಳಿದ್ದಾರೆ. ವಿಗ್ರಹದ ರೂಪದಲ್ಲಿ ಇರುವ ಗಣೇಶನು ನೀರನ್ನು ಕುಡಿಯುತ್ತಾನೆ ಮತ್ತು ಪ್ರಸಾದದ ಭಾಗವಾಗಿ ಲಡ್ಡುಗಳನ್ನು ತಿನ್ನುತ್ತಾನೆ ಎಂಬುದು ಇದರ ವಿಶೇಷತೆಯಾಗಿದೆ. ಅಷ್ಟೇ ಅಲ್ಲ ಭಕ್ತರನ್ನು ನೋಡುವ ಮತ್ತು ಕೇಳುವ ರೀತಿಯಲ್ಲಿ ಅಜಯ್ ಪ್ರತಿಮೆಯನ್ನು ವಿನ್ಯಾಸಗೊಳಿಸಿದ್ದಾರೆ. ಸುಮಾರು 10 ಅಡಿ ದೊಡ್ಡ ಪ್ರತಿಮೆ ಇದಾಗಿದೆ.
ಪಾದಗಳನ್ನು ಮುಟ್ಟಿದರೆ ಆಶೀರ್ವಾದ ಸಿಗುತ್ತದೆ
ಈ ವಿಗ್ರಹದಲ್ಲಿ ಪಾದದ ಮೇಲೆ ಗುಂಡಿಯಿದ್ದು, ಪಾದ ಮುಟ್ಟಿದಾಗ ತಥಾಸ್ತು ಎಂಬ ಸದ್ದು ಕೇಳಿಸುತ್ತದೆ. ಮೂರ್ತಿಯ ಬಾಯಿಯಿಂದಲೂ ಲಡ್ಡುಗಳು ಪ್ರಸಾದ ರೂಪದಲ್ಲಿ ಹೊರಬಹುತ್ತದೆ. ಇದಲ್ಲದೆ ಈ ಪ್ರತಿಮೆ ಮನುಷ್ಯರಂತೆ ಕಣ್ಣು ಮಿಟುಕಿಸುತ್ತದೆ. ಯಾವುದೇ ಭಕ್ತರು ಗಣಪತಿಯ ನೇರ ದರ್ಶನವನ್ನು ಪಡೆಯಲು ಬಯಸಿದರೆ ಮತ್ತು ದೇವಸ್ಥಾನಕ್ಕೆ ಬರಲು ಸಾಧ್ಯವಾಗದಿದ್ದರೆ, ಅವರು ದೇವರ ದರ್ಶನಕ್ಕಾಗಿ ವೀಡಿಯೊ ಕರೆ ಮಾಡಿ ಆಶೀರ್ವಾದ ಪಡೆಯಬಹುದು. ಗಣೇಶನ ಬಳಿಯೂ ಸ್ವಂತ ಮೊಬೈಲ್ ಇದೆ. ಇದರ ಸಂಖ್ಯೆ 9568055894. ಇದರಲ್ಲಿ ವಿಡಿಯೋ ಕಾಲ್ ಕೂಡ ಮಾಡಬಹುದು.

ಅಜಯ್ ಬಾಥಮ್ ಅವರು ಈವೆಂಟ್ ಕೆಲಸ ಮಾಡುತ್ತಾರೆ. ಅವರ ಮನೆ ಚಿಕ್ಕದಾಗಿರುವ ಕಾರಣ ಗಣೇಶ ಚತುರ್ಥಿಯಂದು ಅಷ್ಟು ದೊಡ್ಡ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸಾಧ್ಯವಿಲ್ಲ. ಹೀಗಾಗಿ ನಗರದ ಜನರ ನೆರವು ಕೋರಲಾಗಿದೆ. ಇದರಿಂದ ಗಣೇಶ ಚತುರ್ಥಿಯಂದು ವಿಗ್ರಹವನ್ನು ಪ್ರತಿಷ್ಠಾಪಿಸಲು ಮತ್ತು ಹಬ್ಬವನ್ನು ಆಚರಿಸಲು ಸ್ಥಳವನ್ನು ಸ್ಥಳೀಯವಾಗಿ ಪಡೆಯಲಾಗಿದೆ.
ಈ ಮೂರ್ತಿ ವಿಸರ್ಜನೆ ಮಾಡಲಾಗುತ್ತಾ?
ಈ ವಿಗ್ರಹವನ್ನು ತಯಾರಿಸಲು ಅಜಯ್ ಬಾಥಮ್ 8-9 ತಿಂಗಳ ಶ್ರಮವನ್ನು ತೆಗೆದುಕೊಂಡಿದ್ದಾರೆ. ಪ್ರತಿಮೆಗೆ ಮಾನವನಂತಿರುವ ಜೀವ ನೀಡಲು ಅವರು ಸಾಕಷ್ಟು ಸಂಶೋಧನೆ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ಈ ದೇವರ ವಿಗ್ರಹವನ್ನು ಮುಳುಗಿಸುವ ಬದಲು ನಗರದ ದೇವಸ್ಥಾನ ಅಥವಾ ವಸ್ತು ಸಂಗ್ರಹಾಲಯದಲ್ಲಿ ಇಡಲು ಬಯಸಿದ್ದಾರೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications