ಕಾಲೇಜ್‌ ಮೆಟ್ಟಿಲೇ ಹತ್ತಿಲ್ಲ, ಯಾವ ಡಿಗ್ರಿನೂ ಇಲ್ಲ, ಆದ್ರೂ ಇಂದು ಸಾಫ್ಟ್‌ವೇರ್ ಇಂಜಿನಿಯರ್: ಇದು ಅಬ್ದುಲ್ ಅಲಿಮ್ ಕಥೆ

ಭಾರತದ ಪ್ರಮುಖ ಐಟಿ ಮತ್ತು ಸಾಫ್ಟ್‌ವೇರ್ ಕಂಪನಿಗಳಲ್ಲಿ ಚೆನ್ನೈ ಮೂಲದ 'ಜೊಹೊ' ಕೂಡ ಒಂದು. ಇದೀಗ ಜೊಹೊ ಕಂಪನಿ ಎಲ್ಲಡೆ ಸಂಚಲನ ಸೃಷ್ಟಿಸುತ್ತದೆ. ಇದಕ್ಕೆ ಕಾರಣ ಕಂಪನಿ ತನ್ನ ಕೆಲಸದಿಂದಲ್ಲ, ಬದಲಾಗಿ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರ ಯಶಸ್ಸಿನ ಕಥೆಯಿಂದ.

ಹೌದು ಕೇವಲ 10ನೇ ತರಗತಿ ಓದಿರುವ ಅಬ್ದುಲ್ ಅಲಿಮ್ ಎಂಬ ಯುವಕ, ಜೊಹೊ ಕಂಪನಿಯ ಗೇಟ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಸೇರಿ, ಇಂದು ಅದೇ ಕಂಪನಿಯಲ್ಲಿ ಸಾಫ್ಟ್‌ವೇರ್ ಡೆವಲಪ್ಮೆಂಟ್ ಇಂಜಿನಿಯರ್ ಆಗಿದ್ದಾರೆ. ತಮ್ಮ ಈ ಪರಿಶ್ರಮದ ಕಥೆಯನ್ನು ಅವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದು, ಇದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

Abdul Alim

ಕೇವಲ 1000 ರೂ. ಹಿಡಿದು ಮನೆಬಿಟ್ಟಿದ್ದ ಯುವಕ

ಅಬ್ದುಲ್ ಅಲಿಮ್ ಅವರ ಜೀವನ ಅಷ್ಟು ಸುಲಭವಾಗಿರಲಿಲ್ಲ. ಕೇವಲ 1000 ರೂಪಾಯಿಗಳನ್ನು ಹಿಡಿದುಕೊಂಡು 2013ರಲ್ಲಿ ಮನೆಯಿಂದ ಹೊರಬಂದಿದ್ದರು. ಆ 1000ದಲ್ಲಿ 800 ರೂಪಾಯಿಗಳನ್ನ ರೈಲಿನ ಟಿಕೆಟ್‌ಗೆ ಖರ್ಚು ಮಾಡಿದ್ದರು. ಕೈಯಲ್ಲಿ ಕೆಲಸವಿಲ್ಲದೆ, ಉಳಿದುಕೊಳ್ಳಲು ಜಾಗವಿಲ್ಲದೆ ಸುಮಾರು ಎರಡು ತಿಂಗಳ ಕಾಲ ಅಲೆದಾಡಿದ್ದರು. ಕೊನೆಗೆ ಜೊಹೊ ಕಂಪನಿಯ ಆಫೀಸ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಸಿಕ್ಕಿತು. ದಿನಕ್ಕೆ 12 ಗಂಟೆ ಗೇಟ್ ಕಾಯುವ ಕೆಲಸವನ್ನ ಅವರು ಪ್ರಾಮಾಣಿಕವಾಗಿ ಮತ್ತು ನಿಷ್ಟಯಿಂದ ಮಾಡುತ್ತಿದ್ದರು.

ಹೀಗೆ ಕೆಲಸ ಮಾಡುತ್ತಿದ್ದಾಗ ಅವರ ಜೀವನಕ್ಕೆ ತಿರುವು ಸಿಕ್ಕಿತು. ಜೊಹೊ ಕಂಪನಿಯ ಹಿರಿಯ ಉದ್ಯೋಗಿ ಶಿಬು ಅಲೆಕ್ಸಿಸ್ ಅವರು ಸೆಕ್ಯುರಿಟಿ ಗಾರ್ಡ್ ಆಗಿದ್ದ ಅಲಿಮ್ ಅವರನ್ನು ಮಾತನಾಡಿಸಿದ್ದರು. "ಅಲಿಮ್, ನಿನ್ನ ಕಣ್ಣುಗಳಲ್ಲಿ ನನಗೆ ಏನೋ ವಿಶೇಷತೆ ಕಾಣುತ್ತಿದೆ" ಎಂದು ಹೇಳಿದ ಶಿಬು, ಅಲಿಮ್ ಅವರ ಶಿಕ್ಷಣ ಮತ್ತು ಕಂಪ್ಯೂಟರ್ ಜ್ಞಾನದ ಬಗ್ಗೆ ವಿಚಾರಿಸಿದರು. ತಾನು ಶಾಲೆಯಲ್ಲಿ ಸ್ವಲ್ಪ ಎಚ್‌ಟಿಎಮ್‌ಎಲ್ ಕಲಿತಿದ್ದಾಗಿ ಆಲಿಮ್‌ ಅವರ ಬಳಿ ಹೇಳಿದ್ದಾರೆ.

ನಂತರ ಶಿಬು ಅಲೆಕ್ಸಿಸ್ ಅವರು , ಅಲಿಮ್‌ನಲ್ಲಿದ್ದ ಆಸಕ್ತಿಯನ್ನಾ ಗಮನಿಸಿ ಪ್ರೋಗ್ರಾಮಿಂಗ್ ಕಲಿಸಲು ಮುಂದಾದರು. ಪ್ರತಿದಿನ 12 ಗಂಟೆಗಳ ಕಾಲ ಸೆಕ್ಯುರಿಟಿ ಗಾರ್ಡ್ ಕೆಲಸ ಮುಗಿಸಿದ ನಂತರ, ಅಲಿಮ್ ಶಿಬು ಅವರಿಂದ ಕೋಡಿಂಗ್ ಕಲಿಯಲು ಆರಂಭಿಸಿದರು. ಸತತ ಎಂಟು ತಿಂಗಳ ಕಾಲ ಅವರು ಶ್ರದ್ಧೆಯಿಂದ ಪ್ರೋಗ್ರಾಮಿಂಗ್ ಕಲಿತರು.

ಡಿಗ್ರಿ ಇಲ್ಲದಿದ್ದರೂ ಒಲಿದುಬಂದ ಇಂಜಿನಿಯರ್ ಹುದ್ದೆ

ಇದೇ ರೀತಿ ಎಂಟು ತಿಂಗಳ ಕಲಿಕೆಯ ನಂತರ, ಬಳಕೆದಾರರ ಮಾಹಿತಿಯನ್ನು ಪಡೆದು ಅದನ್ನು ವಿಶ್ಯುವಲೈಸ್‌ ಮಾಡುವ ಒಂದು ಸಣ್ಣ ಆ್ಯಪ್‌ಅನ್ನಾ ಅಲಿಮ್ ರೆಡಿ ಮಾಡಿದರು. ಇದನ್ನು ನೋಡಿದ ಶಿಬು ಅಲೆಕ್ಸಿಸ್, ಆ ಆ್ಯಪ್ ಅನ್ನ ತಮ್ಮ ಮ್ಯಾನೇಜರ್‌ಗೆ ತೋರಿಸಿದರು. ಅಲಿಮ್ ಅವರ ಪ್ರತಿಭೆಯನ್ನು ಮೆಚ್ಚಿದ ಮ್ಯಾನೇಜರ್, ತಾಂತ್ರಿಕ ಹುದ್ದೆಗೆ ಸಂದರ್ಶನಕ್ಕೆ ಕರೆದರು.

ತಾನು ಕೇವಲ 10ನೇ ತರಗತಿ ಓದಿದ್ದೇನೆ, ಡಿಗ್ರಿ ಇಲ್ಲದ ತನಗೆ ಈ ಕೆಲಸ ಸಿಗುವುದಿಲ್ಲ ಎಂದು ಅಲಿಮ್ ಹೆದರಿಕೊಂಡಿದ್ದರು. ಆದರೆ, ಅವರಿಗೆ "ಜೊಹೊ ಕಂಪನಿಯಲ್ಲಿ ಕಾಲೇಜು ಡಿಗ್ರಿಯ ಅಗತ್ಯವಿಲ್ಲ, ಇಲ್ಲಿ ನಿಮ್ಮ ಕೌಶಲ್ಯವೇ ಮುಖ್ಯ" ಎಂದು ಧೈರ್ಯ ತುಂಬಿದರು. ಸಂದರ್ಶನದಲ್ಲಿ ಪಾಸ್‌ ಆದ ಅಲಿಮ್, ಟೆಕ್ನಿಕಲ್‌ ವಿಭಾಗಕ್ಕೆ ಸೇರಿದರು. ಇಂದು ಅವರು ಅದೇ ಕಂಪನಿಯಲ್ಲಿ 8 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಈಗ ಸಾಫ್ಟ್‌ವೇರ್ ಡೆವಲಪ್ಮೆಂಟ್ ಇಂಜಿನಿಯರ್ ಆಗಿದ್ದಾರೆ. ಕಲಿಯಲು ವಯಸ್ಸು ಮತ್ತು ಬಡತನ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಅಲಿಮ್ ಅವರೇ ಸಾಕ್ಷಿ ಉದಾಹರಣೆ. ತಮಗೆ ಅವಕಾಶ ನೀಡಿದ ಜೊಹೊ ಕಂಪನಿಗೆ ಹಾಗೂ ಶಿಬು ಅಲೆಕ್ಸಿಸ್ ಅವರಿಗೆ ಅಬ್ದುಲ್ ಅಲಿಮ್ ಅವರು ತಮ್ಮ ಅಧಿಕೃತ ಲಿಂಕ್‌ಡಿನ್‌ ಖಾತೆಯಲ್ಲಿ ಧನ್ಯವಾದ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+