Get Updates
Get notified of breaking news, exclusive insights, and must-see stories!

Ganesha Chaturthi: ಆಕಳು ಸಗಣಿಯ ಗಣೇಶ ಮೂರ್ತಿಗಳಿಗೆ ಭಾರೀ ಬೇಡಿಕೆ, ತಯಾರಿಕೆ ಹೇಗೆ?, ವಿಶೇಷತೆ ಬಗ್ಗೆ ತಿಳಿಯಿರಿ

ಬೆಂಗಳೂರು, ಸೆಪ್ಟಂಬರ್ 15: ಸರ್ಕಾರದ ಕ್ರಮಗಳು, ಪರಸರ ಪ್ರೇಮಿಗಳು ಸೇರಿದಂತೆ ಸಂಘ ಸಂಸ್ಥೆಗಳ ಜಾಗೃತಿ ಮೇರೆಗೆ ಗಣೇಶೋತ್ಸವದ ಪರಿಸರ ಸ್ನೇಹಿ ಆಚರಣೆಗಳು ಕಂಡು ಬರುತ್ತಿವೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಬಹುತೇಕ ನಿಷೇಧಗೊಂಡಿವೆ. ಹೀಗಾಗಿ ಮಣ್ಣಿನಿಂದ ಸಿದ್ಧವಾಗುವ ಮೂರ್ತಿಗಳ ಜೊತೆಗೆ ಅಪ್ಪಟ ಪರಿಸರ ಸ್ನೇಹಿಯಾದ ಸಗಣಿಯಿಂದ ತಯಾರಾಗುವ ಮೂರ್ತಿಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ.

ಗಣೇಶ ಹಬ್ಬದಾಚರಣೆಗೆ ಎರಡು ದಿನ ಬಾಕಿ ಇದ್ದು, ತಯಾರಿ ಜೋರಾಗಿದೆ. ಜಾಗೃತಿ ಟ್ರಸ್ಟ್ ಎಂಬ ಸರ್ಕಾರೇತರ ಸಂಸ್ಥೆಯು' ಗೋಮಯ ಅಭಿಯಾನ' ಆರಂಭಿಸಿ ವರ್ಷಗಳು ಕಳೆದಿವೆ. ದೇಶಿಯ ಹಸುಗಳ ತಳಿ ರಕ್ಷಣೆಗೆ, ಸಗಣಿಯಿಂದ ಮಾಡಬಹುದಾದ ವಸ್ತುಗಳನ್ನು ಉತ್ತೇಜಿಸುವ ಈ ಟ್ರಸ್ಟ್ ಜೊತೆಗೆ ಅನೇಕ ಗೋಶಾಲೆಗಳು ದೇಶಿ ತಳಿ ಹಸುಗಳ ರಕ್ಷಣೆಯಲ್ಲಿ ತೊಡಗಿವೆ.

Demand Rise For Eco-Friendly Ganesha Idols Made From Dung of Desi Cows Is on The Rise

ಇದರ ಜೊತೆ ಜೊತೆಗೆ ಪರಿಸರ ಸ್ನೇಹಿ ಗಣೇಶ ಮೂರ್ತಿಗನ್ನು ವಿವಿಧ ರೀತಿಯಲ್ಲಿ ಸಗಣಿಯಿಂದ ತಯಾರಿಸಲಾಗುತ್ತಿದೆ. ಬೆಳಗಾವಿ, ಕೊಲ್ಲಾಪುರ, ರಾಮೋಹಳ್ಳಿ, ಬೆಂಗಳೂರಿನ ಕನಕಪುರ ಸೇರಿದಂತೆ ರಾಜ್ಯದ ವಿವಿಧೆಡೆ ಗೋಶಾಲೆಗಳಲ್ಲಿ 2.5 ಅಡಿ ವರೆಗೆ ಸಗಣಿಯಿಂದ ಗಣೇಶ ಮೂರ್ತಿಗಳನ್ನು ತಯಾರಿಸಲಾಗಿದೆ. ಮೊದಲು ಆರ್ಡರ್ ಮಾಡಿದವರಿಗೆ ಅವರಿಷ್ಟದ ಎತ್ತರ, ಆಕಾರದಲ್ಲಿ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿ ಪೂರೈಸಲಾಗುತ್ತಿದೆ ಎಂದು ಟ್ರಸ್ಟ್‌ನ ಮಾಧವ ಹೆಬ್ಬಾರ್ ಅವರು ತಿಳಿಸಿದರು.

ಸಗಣಿಯ 2,500 ಗಣೇಶ ಮೂರ್ತಿ ತಯಾರಿಕೆ

ಸರ್ಕಾರದ ನಿರಂತರ ಕ್ರಮದಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಿಓಪಿ ಗಣೇಶ ಮೂರ್ತಿಗಳ ನಿಷೇಧ ಬಳಿಕ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ವರ್ಷ ಬೆಂಗಳೂರಿನಲ್ಲಿ 2,500 ಸಗಣಿಯ ಗಣೇಶ ಮೂರ್ತಿಗಳಿಗೆ ಬೇಡಿಕೆ ಬಂದಿದ್ದು, ಅಗತ್ಯದಷ್ಟು ಮೂರ್ತಿಗಳನ್ನು ಪೂರೈಸಲಾಗುತ್ತಿದೆ. ಈ ಮೂಲಕ ಪರಿಸರ ಹಾನಿ ತಡೆಗೆ ಕೊಡುಗೆ ನೀಡಲಾಗುತ್ತಿದೆ. ಸರ್ಕಾರ ಈ ವಲಯದ ಬೆಳವಣಿಗೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಕನಕಪುರದ ಬಳಿಯ 'ದೇಸಿ ಮಿಲ್ಕ್' (ಸಣ್ಣ ಕೈಗಾರಿಕೆ) ನಡೆಸುವ ಕೃಷ್ಣೇಗೌಡ ಅವರು ಮಾಹಿತಿ ಹಂಚಿಕೊಂಡರು.

ವರ್ಷದಿಂದ ವರ್ಷಕ್ಕೆ ಸಗಣಿಯಿಂದ ತಯಾರಾಗುವ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಪರಿಸರ ಬಗ್ಗೆ ಜನರಲ್ಲಿ ಕಾಳಜಿ ವ್ಯಕ್ತವಾಗುತ್ತಿದೆ. ಕೇವಲ ಗಣೇಶ ಮೂರ್ತಿ ಮಾತ್ರವಲ್ಲದೇ ಚಾಮುಂಡೇಶ್ವರಿ, ಬುದ್ಧ, ದುರ್ಗಾದೇವಿ, ಹಣತೆಗಳು ಹಾಗೂ ರಾಕಿಗಳನ್ನು ಸಗಣಿಯಿಂದ ತಯಾರಿಸುತ್ತೇವೆ. ಟ್ರಸ್ಟ್‌ ಮತ್ತು ಅದರ ಸಂಪರ್ಕದಲ್ಲಿರುವ ರಾಜ್ಯದ ವಿವಿಧ ಗೋಶಾಲೆಗಳಿಂದ ಹತ್ತು ಸಾವಿರಕ್ಕೂ ಅಧಿಕ ಮೂರ್ತಿಗಳು ಮಾರಾಟವಾಗಲಿವೆ.

Demand Rise For Eco-Friendly Ganesha Idols Made From Dung of Desi Cows Is on The Rise

ದೇಶಿಯ ತಳಿಗಳ ಸಗಣಿಯಿಂದ ಮೂರ್ತಿ ತಯಾರು

ವಿಶೇಷವೆಂದರೆ ದೇಶಿಯ ತಳಿಗಳ ಹಸುಗಳ ಸಗಣಿಯಿಂದ ಇವುಗಳನ್ನು ಮಾಡಲಾಗುತ್ತಿದೆ. ಸದ್ಯ 'ಹಳ್ಳಾಕಾರ್' ತಳಿ ರಕ್ಷಣೆಯಲ್ಲಿ ತೊಡಗಿರುವ ಕೃಷ್ಣೇಗೌಡರು ದೇಶಿ ಹಸುಗಳ ಹಾಲನ್ನು ಸಂಗ್ರಹಿಸಿ ತಂದು ನಗರದಲ್ಲಿ ಮಾರಾಟ ಮಾಡುತ್ತಾರೆ. ದೇಶಿ ಹಸುಗಳ ರಕ್ಷಣೆ ಜೊತೆಗೆ 'ಹಳ್ಳಾಕಾರ್, ಕಿಲ್ಲಾರಿ, ದೇವಣಿ, ಮಲೆನಾಡಿನ ಗಿಡ್ಡ, ಕೃಷ್ಣವೇಣಿ, ಅಮೃತ ಮಹಲ್' ಮತ್ತಿತರ ದೇಶಿ ತಳಿ ಹಸುಗಳ ಸಗಣಿಯಿಂದ ಉತ್ಪನ್ನಗಳ ತಯಾರಿಸಲಾಗುತ್ತಿದೆ. ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಬೇಕಿದೆ. ಈ ವಲಯಗಳತ್ತ ಸರ್ಕಾರ ಕಣ್ತೆರೆದು ನೋಡಬೇಕಿದೆ ಎಂದು ಅವರು ಮನವಿ ಮಾಡಿದರು.

9 ರೂಪದ ಪರಿಸರ ಸ್ನೇಹಿ ಗಣೇಶ

ಸಗಣಿಯಿಂದ ತಯಾರಿಸುವ ಈ ಗಣೇಶ ಮೂರ್ತಿಗಳು ಹಲವು ವಿಶೇಷತೆಗಳಿಂದ ಕೂಡಿವೆ. ಇವುಗಳನ್ನು ಸಾಂಪ್ರದಾಯ ಪ್ರತೀಕವಾದ ಲಂಬೋಧರ, ಪ್ರಥಮೇಶ, ಮಂಗಳಮುಖಿ, ವಿಶ್ವಮುಖಿ ಸೇರಿದಂತೆ ಒಟ್ಟು ಒಂಬತ್ತು ರೂಪದಲ್ಲಿ ತಯಾರಿಸಲಾಗುತ್ತದೆ.

ಸಗಣಿಯನ್ನು ಮೊದಲು ಒಣಗಿಸಿ ಪುಡಿ ಮಾಡಿ ಅದಕ್ಕೆ ಹಸುವಿನ ಗಂಜಲ ಸೇರಿಸಿ, ಬೇವು, ಬಿಲ್ವಪತ್ರೆ, ಪುಡಿ ಮಾಡಿ ಜೊತೆಗೆ ಅರಿಶಿಣ ಮತ್ತು ಕುಂಕುಮ ಹಾಕಿ ಹದ ಮಾಡಿ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಇಲ್ಲಿ 06 ಇಂಚಿನ ಸಣ್ಣ ಮೂರ್ತಿಗಳಿಂದ ಹಿಡಿದು ಆರ್ಡರ್‌ಗಳಿಗೆ ತಕ್ಕಂತೆ 2.5 ವರೆಗೆ, ಕೆಲವಮೊಮ್ಮೆ ಅದಕ್ಕೂ ಎತ್ತರವಾಗಿ ದೊಡ್ಡ ಗಣೇಶ ಮೂರ್ತಿ ಮಾಡಿಕೊಡಲಾಗುತ್ತದೆ. ಮೂರ್ತಿಗಳು ಜಲ, ಅಗ್ನಿ ನಿರೋಧಕ ಶಕ್ತಿ ಹೊಂದಿವೆ.

Demand Rise For Eco-Friendly Ganesha Idols Made From Dung of Desi Cows Is on The Rise

ಪರಿಸರಕ್ಕೆ ಪೂರಕವಾಗಿ ಮೂರ್ತಿಗಳು ಇವಾಗಿವೆ

ಒಂದು ಮೂರ್ತಿಗೆ 280 ರೂಪಾಯಿಂದ ಹಿಡಿದು 2,000 ರೂಪಾಯಿ ಬೆಲೆಯ ಮೂರ್ತಿಗಳನ್ನು ಜನ ಖರೀದಿ ಮಾಡುತ್ತಿದ್ದಾರೆ. ಈಗಾಗಲೇ ಬುಕ್ಕಿಂಗ್ ಆಗಿದ್ದು, ಅರ್ಧಕ್ಕಿಂತ ಹೆಚ್ಚು ಮಂದಿ ಈಗಾಗಲೇ ಖರೀದಿಸಿದ್ದಾರೆ. ಈ ಮೂರ್ತಿಗಳು ಮಣ್ಣಿನ ಗಣೇಶ ಮೂರ್ತಿಗಿಂತಲೂ ಹಗುವಾಗಿರುತ್ತವೆ. ಎಲ್ಲಕ್ಕಿಂತ ಮೀಗಿಲಾಗಿ ನೀರಿನಲ್ಲಿ ಬೇಗನೇ ಕರಗುತ್ತವೆ.

ನಿತ್ಯ ಒಂದಿಲ್ಲ ಒಂದು ರೀತಿಯಲ್ಲಿ ನಾವು ಪ್ಲಾಸ್ಟಿಕ್ ಬಳಸುತ್ತಿದ್ದೇವೆ. ಬೆಳಗ್ಗೆ ಎದ್ದು ಹಲ್ಲುಜ್ಜುವ ಬ್ರೆಷ್ ನಿಂದ ಹಿಡಿದು ರಾತ್ರಿ ಮಲಗುವ ತನಕ ನಾವು ಬಳಸುವ ವಸ್ತುಗಳು ಬಹುತೇಕ ಪ್ಲಾಸ್ಟಿಕ್ ನಿಂದಲೇ ಕೂಡಿವೆ. ಇವುಗಳು ವ್ಯಕ್ತಿಯ ಆರೋಗ್ಯ ದ ಮೇಲೆ ದುಷ್ಪರಿಣಾಮ ಬೀರುವ ಜೊತೆಗೆ ಪ್ರಕೃತಿ/ಪರಿಸರ ಮೇಲೂ ವ್ಯತಿರಿಕ್ತ ಪರಿಣಾಮ ಭೀರುತ್ತಿದೆ. ಆದ್ದರಿಂದ ಹಸುಗಳ ಸಗಣಿಯಿಂದ ಇಂತಹ ಉತ್ಪನ್ನಗಳನ್ನು ಮಾಡುವುದರಿಂದ ರೈತರಿಗೆ ಕೃಷಿ ಜೊತೆಗೆ ಮತ್ತೊಂದು ಆದಾಯವು ಲಭಿಸುತ್ತದೆ. ಪರಿಸರ ರಕ್ಷಣೆಗೂ ಕೊಡುಗೆ ನೀಡಿದಂತಾಗುತ್ತದೆ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಬೇಕಿದ್ದು, ಸರ್ಕಾರ ಇಂತಹ ಸಂಘ ಸಂಸ್ಥೆಗಳಿಗೆ ಆಸರೆಯಾಗಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+