ವಿಡಿಯೋ: ಗಣಪತಿ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸುವ ನಾಯಿ
ವಿದ್ಯಾದಾತ, ಇಷ್ಟಾರ್ಥ ಸಿದ್ದಿ, ಸರ್ವ ಕಷ್ಟ ನಿವಾರಕ ಗಣೇಶ. ಹೀಗಾಗಿ ಗಣೇಶನನ್ನು ಇತರ ದೇವತೆಗಳಲ್ಲಿ ಪ್ರಥಮ ಪೂಜ್ಯ ದೇವರು ಎಂದು ಕರೆಯಲಾಗುತ್ತದೆ. ಗಣೇಶ ಎಲ್ಲರಿಗಿಂತ ಹೆಚ್ಚು ಪ್ರೀತಿಪಾತ್ರನಾದ ದೇವರು ಕೂಡ ಹೌದು. ಪೂಜೆ, ಯಜ್ಞ, ಹವನ ಅಥವಾ ಇತರ ಯಾವುದೇ ಧಾರ್ಮಿಕ ಆಚರಣೆಗಳಿಗೆ ಗಣೇಶನನ್ನು ಯಾವಾಗಲೂ ಮೊದಲು ಪೂಜಿಸಲಾಗುತ್ತದೆ.
ಭಕ್ತಿಯಿಂದ ಬೇಡಿದರೆ ಇಷ್ಟಾರ್ಥಗಳು ಪ್ರಾಪ್ತಿಯಾಗುತ್ತವೆ. ಶಿವ ಮತ್ತು ಪಾರ್ವತಿ ದೇವಿಯ ಮಗನಾದ ಗಣೇಶನನ್ನು ಪೂಜಿಸದ ಜನರಿಲ್ಲ. ಮನುಷ್ಯರು ಮಾತ್ರವಲ್ಲದೆ ಪ್ರಾಣಿಗಳು ಗಣೇಶನನ್ನು ಭಕ್ತಿಯಿಂದ ಪ್ರಾರ್ಥಿಸುತ್ತವೆ. ಇದಕ್ಕೆ ಸಾಕ್ಷಿಯಾಗಿದ್ದು ಗಣೇಶನ ಮುಂದೆ ತಲೆ ಬಾಗಿ ಪ್ರಾರ್ಥನೆ ಮಾಡುವ ಶ್ವಾನದ ವಿಡಿಯೋ.
ಗಣೇಶನನ್ನು ಭಕ್ತರ ಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸುವವ ಎಂದೂ ಕರೆಯುತ್ತಾರೆ. ಜೀವನದಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವ ಜನರು ತಮ್ಮ ಸಮಸ್ಯೆಗಳನ್ನು ತೊಡೆದುಹಾಕಲು ಗಣೇಶನ್ನು ಪೂಜಿಸುತ್ತಾರೆ. ಅದರೆ ಇಲ್ಲೊಂದು ನಾಯಿ ತನ್ನ ಮಾಲೀಕನೊಂದಿಗೆ ದೇವಸ್ಥಾನದಲ್ಲಿ ಗಣೇಶ ಮುಂದೆ ತಲೆ ಬಾಗಿ ನಮಿಸುವ ವಿಡಿಯೋ ವೈರಲ್ ಆಗಿದೆ.

ಭಾರತ ಮತ್ತು ಪ್ರಪಂಚದ ಸಾವಿರಾರು ಜನರು ಗಣಪತಿಯನ್ನು ಪೂಜಿಸುತ್ತಾರೆ. ಆದರೆ ಸಾಕು ನಾಯಿಗಳಂತಹ ಪ್ರಾಣಿಗಳು ಸಹ ಅನೇಕ ಜನರಂತೆ ದೇವರನ್ನು ಪ್ರಾರ್ಥಿಸಲು ಪ್ರಾರಂಭಿಸಿವೆ. ಮುದ್ದಿನ ನಾಯಿಯೊಂದು ತನ್ನ ಮಾಲೀಕನ ಜೊತೆಯಲ್ಲಿ ಗಣೇಶನನ್ನು ಪೂಜಿಸುವ ಕ್ಲಿಪ್ ವೈರಲ್ ಆಗಿದೆ. ದೇವಸ್ಥಾನದಲ್ಲಿ ಗಣೇಶ ಮೂರ್ತಿಯ ಮುಂದೆ ವ್ಯಕ್ತಿಯೊಬ್ಬರು ಕೈ ಜೋಡಿಸಿ ನಿಂತಿರುವುದು ವಿಡಿಯೋದಲ್ಲಿ ಕಾಣಬಹುದು. ಮಾಲೀಕ ಪ್ರಾರ್ಥಿಸುತ್ತಿದ್ದಂತೆ ಮುದ್ದಾದ ನಾಯಿಯು ಗಣೇಶ ಬಪ್ಪನ ಮುಂದೆ ತಲೆಬಾಗಿ ನಮಸ್ಕರಿಸುತ್ತದೆ.
ದೇವಸ್ಥಾನದಲ್ಲಿ ಗಣೇಶನಿಗೆ ನಾಯಿ ಪ್ರಾರ್ಥನೆ ಮಾಡುವ ವೈರಲ್ ವಿಡಿಯೊವನ್ನು ಇಲ್ಲಿ ವೀಕ್ಷಿಸಿ:
ಮಾಲೀಕ ಗಣಪತಿಗೆ ಗೌರವ ಸಲ್ಲಿಸುವುದು ಮುಗಿದ ಬಳಿಕ ನಾಯಿಯು ಎದ್ದು ಅವನೊಂದಿಗೆ ಹೊರಟು ಹೋಗುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹಂಚಿಕೊಂಡ ಈ ವಿಡಿಯೊ 1.5 ಮಿಲಿಯನ್ ವೀಕ್ಷಣೆಗಳು ಮತ್ತು 261 ಲಕ್ಷಕ್ಕೂ ಹೆಚ್ಚು ಇಷ್ಟಗಳನ್ನು ಗಳಿಸಿದೆ. ಕಾಮೆಂಟ್‌ಗಳಲ್ಲಿನ ಜನರ ಪ್ರಕಾರ, ವಿಡಿಯೊ ಮಹಾರಾಷ್ಟ್ರದ ಪುಣೆಯಲ್ಲಿರುವ ದಗ್ದುಶೇತ್ ಹಲ್ವಾಯಿ ಗಣಪತಿ ಮಂದಿರದಲ್ಲಿ (Shreemant Dagdusheth Halwai Ganpati Mandir) ಸೆರೆಹಿಡಿಯಲಾಗಿದೆ. ನೋಡುಗರು ವಿಡಿಯೊವನ್ನು ಇಷ್ಟಪಟ್ಟಿದ್ದಾರೆ ಮತ್ತು ಹೃದಯ-ಕಣ್ಣಿನ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ.












Click it and Unblock the Notifications