Bengaluru: ಗಣೇಶ ವಿಸರ್ಜನಾ ಮೆರವಣಿಗೆ: ಸಂಚಾರ ಮಾರ್ಗ ಬದಲಾವಣೆ ತಿಳಿಯಿರಿ
ಬೆಂಗಳೂರು, ಸೆಪ್ಟಂಬರ್ 22: ಬೆಂಗಳೂರು ಸಂಚಾರ ಉತ್ತರ ವಿಭಾಗದ ವ್ಯಾಪ್ತಿಯ ಆರ್‌ಟಿ ನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಮುನಿರೆಡ್ಡಿಪಾಳ್ಯದಲ್ಲಿ ನಾಳೆ ಸೆ. 23 ಶನಿವಾರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಜರುಗಲಿದೆ. ಈ ಸಂಬಂಧ ಕೆಲವ ಮಾಡಲಾಗಿದೆ.
ಶನಿವಾರ ಸಂಜೆ ಸಂಜೆ 06 ಗಂಟೆಯಿಂದ ಮರುದಿನ ಸೆ. 24ರ ಬೆಳಗ್ಗೆ 8ರ ವರೆಗೆ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಎಲ್ಲಾ ಮಾದರಿಯ ವಾಹನಗಳು ಪರ್ಯಾಯ ರಸ್ತೆ ಕಲ್ಪಿಸಲಾಗಿದೆ. ಸೂಕ್ತ ಸ್ಥಳಗಳಲ್ಲಿ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು ಸಂಚಾರ ಬಂದೋಬಸ್ತ್ ಮಾಡಲಾಗಿದೆ. ಸಂಚಾರ ಮಾರ್ಗ ಬದಲಾವಣೆ ಮತ್ತು ಗಣೇಶ ವಿಸರ್ಜನೆ ವಿವರ ಹೀಗಿದೆ.

ವಾಹನಗಳ ಸಂಚಾರ ತಾತ್ಕಾಲಿಕ ನಿರ್ಬಂಧದ ಮಾಹಿತಿ
* ದೇವೇಗೌಡ ರಸ್ತೆ,
* ಜೆ.ಸಿ.ನಗರ ಮುಖ್ಯರಸ್ತೆ,
* ಮಠದಹಳ್ಳಿ ಮುಖ್ಯರಸ್ತೆ,
* ದೇಸ್ವರಾಜ್ ಅರಸ್ ರಸ್ತೆ
'ಸಂಚಾರ ಸಲಹೆ'
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) September 22, 2023
'Traffic Advisory' pic.twitter.com/S0jH0pdGmq
ಮಾರ್ಗ ಬದಲಾವಣೆ ವಿವರಗಳ ಪಟ್ಟಿ
* ಸುಲ್ತಾನ್ ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋನ್ಸೆಂಟ್ ರೈಲು ನಿಲ್ದಾಣದ ಕಡೆಗೆ ಹಾಗೂ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳು ದಿಣ್ಣೂರು ಮುಖ್ಯರಸ್ತೆ, ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್ ಎಡತಿರುವು ಪಡೆಯಬೇಕು. ಆರ್.ಟಿ.ನಗರ ಮುಖ್ಯರಸ್ತೆ, ಗುಂಡುರಾವ್‌ಮನೆ ಜಂಕ್ಷನ್ ಮಾರ್ಗವಾಗಿ ಬಲತಿರುವು ಬೆಂಗಳೂರು ಬಳ್ಳಾರಿ ರಸ್ತೆ-ಎಡತಿರುವು- (ಮೇಕ್ರಿಸರ್ಕಲ್- ಅಂಡರ್‌ಪಾಸ್ ಮೂಲಕ ಬೆಂಗಳೂರು ನಗರದ ಕಡೆಗೆ ಸಂಚರಿಸಬಹುದು) ಹಾಗೂ ಮೇತ್ರಿ ಸರ್ಕಲ್ ಸರ್ವೀಸ್ ರಸ್ತೆಯಿಂದ ಎಡತಿರುವು -ಜಯಮಹಲ್ ರಸ್ತೆಯಲ್ಲಿ ನೇರವಾಗಿ ಕಂಟೋನೆಂಟ್ ರೈಲು ನಿಲ್ದಾಣದ ಕಡೆಗೆ ಸಂಚರಿಸುವಂತೆ ಕೋರಲಾಗಿದೆ.
* ಕಂಟೋಸ್ಟೆಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ - ಸುಲ್ತಾನ್ ಪಾಳ್ಯ ಸಂಚರಿಸುವ ವಾಹನಗಳು ಜಯಮಹಲ್ ರಸ್ತೆ-ಮೇಕ್ರಿ ಸರ್ಕಲ್ - ಬಲತಿರುವು ಬೆಂಗಳೂರು ಬಳ್ಳಾರಿ ರಸ್ತೆ - ಸಿ.ಬಿ.ಐ ಅಂಡರ್ ಪಾಸ್ - ಬಲತಿರುವು ಸಿ.ಬಿ.ಐ ರಸ್ತೆ ಡೆಡ್ ಎಂಡ್ - ಬಲತಿರುವು ಆರ್.ಟಿ.ನಗರ ಮುಖ್ಯರಸ್ತೆ-ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್-ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬೇಕು ಎಂದು ಸಂಚಾರಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರದಲ್ಲಿ ಗಣೇಶ ಪ್ರತಿಷ್ಠಾಪನೆಯ ಸೆಪ್ಟಂಬರ್ 18ರಿಂದ ಈವರೆಗೆ ಲಕ್ಷಾಂತರ ಮೂರ್ತಿಗಳು ವಿಸರ್ಜನೆಗೊಂಡಿವೆ. ಹಾಗಾದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಚಾರಿ/ಮೊಬೈಲ್ ಟ್ಯಾಂಕರ್ ಹಾಗೂ ಕೆರೆ ಅಂಗಳ/ತಾತ್ಕಾಲಿಕ ಕಲ್ಯಾಣಿ ಗಳಲ್ಲಿ ಗುರುವಾರ ಸೆ. 21ರಂದು ಒಟ್ಟು 28,397 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿರುತ್ತದೆ.
ವಲಯವಾರು ವಿಸರ್ಜನಾ ಮೂರ್ತಿಗಳ ಪಟ್ಟಿ
*ಪೂರ್ವ ವಲಯ: 3,878
*ಪಶ್ಚಿಮ ವಲಯ: 3,953
*ದಕ್ಷಿಣ ವಲಯ: 14,000
*ಬೊಮ್ಮನಹಳ್ಳಿ ವಲಯ: 277
*ದಾಸರಹಳ್ಳಿ ವಲಯ: 987
*ಮಹದೇವಪುರ ವಲಯ: 2,058
*ಆರ್.ಆರ್.ನಗರ ವಲಯ: 1,887
*ಯಲಹಂಕ ವಲಯ: 1,357 ಮೂರ್ತಿಗಳು ವಿಸರ್ಜನೆಗೊಂಡಿವೆ.












Click it and Unblock the Notifications