ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking : ಗೌರಿಗಣೇಶ ಹಬ್ಬದ ಸಡಗರಕ್ಕೆ ಬ್ರೇಕ್- ವಾರ್ಡ್‌ಗೆ ಒಂದೇ ಗೌರಿ ಗಣಪ

|
Google Oneindia Kannada News

ಬೆಂಗಳೂರು, ಆಗಸ್ಟ್ 06: ಗೌರಿ ಗಣೇಶೋತ್ಸವ ಹಬ್ಬ ಇಡೀ ದೇಶವೇ ಸಡಗರದಿಂದ ಆಚರಿಸುವ ಹಬ್ಬವಾಗಿದೆ. ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಗಣೇಶೋತ್ಸವ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕೋವಿಡ್‌ನಿಂದ ಕಳೆದ ವರ್ಷ ವಾರ್ಡ್‌ಗೆ ಒಂದರಂತೆ ಗೌರಿ ಗಣೇಶವನ್ನು ಕೂರಿಸಲು ಅವಕಾಶವನ್ನು ಮಾಡಿಕೊಡಲಾಗಿತ್ತು. ಈ ವರ್ಷವೂ ಅದೇ ನಿಯಮ ಮುಂದುವರೆಯಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಗೌರಿ ಗಣೇಶ ಹಬ್ಬದಂದು ಮನೆಯ ಮುಂದೆ ರಸ್ತೆ ರಸ್ತೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವುದು ವಾಡಿಕೆ. ರಸ್ತೆಗಳಲ್ಲಿ ಬಗೆ ಬಗೆಯ ಗಣೇಶನ್ನು ಕೂರಿಸಿ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತದೆ. ಗಣೇಶನ ಪ್ರತಿಷ್ಠಾಪನೆಯ ಮುಂದೆ ಮನರಂಜನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಆದರೆ ಇದಕ್ಕೆಲ್ಲಾ ಈ ಸಲವೂ ಕಡಿವಾಣ ಬೀಳುವುದು ಖಚಿತವಾಗಿದೆ.

Gauri Ganesh festival: A single Gauri Ganapa for a ward in Bengaluru

ಬಿಬಿಎಂಪಿ ಮುಖ್ಯ ಆಯುಕ್ತರು ಹೇಳಿದ್ದೇನು?
ಗಣೇಶ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ಮುುಖ್ಯ ಆಯುಕ್ತರು ಮಾತನಾಡಿದ್ದಾರೆ. "ಗಣೇಶ ಚತುರ್ಥಿಗೆ ಬಿಬಿಎಂಪಿ‌ಯಿಂದ ಹಲವು ನಿಯಮಗಳಿವೆ. ಕಳೆದ ಬಾರಿಯ ನಿಯಮಗಳನ್ನೇ ಈ ಬಾರಿಯೂ ಹಾಕಲಾಗುತ್ತದೆ, ಕಳೆದ ಬಾರಿ ವಾರ್ಡಿಗೆ ಒಂದು ಗಣಪ ಅನ್ನೊ ನಿಯಮವಿತ್ತು. ಈ ಬಾರಿಯೂ ಕಳೆದ ವರ್ಷದ ನಿಯಮವೇ ಜಾರಿಯಲ್ಲಿರಲಿದೆ. ಈ ಬಾರಿಯೂ ವಾರ್ಡಿಗೆ ಒಂದೇ ಗಣೇಶನನ್ನು ಪ್ರತಿಷ್ಠಾಪಿಸಬೇಕು" ಎಂದು ತಿಳಿಸಿದ್ದಾರೆ

Gauri Ganesh festival: A single Gauri Ganapa for a ward in Bengaluru

ಪಿಒಪಿ ಗಣೇಶ ತಯಾರಿಕೆಗೆ ನಿಷೇಧ
"ಪಿಒಪಿ ಗಣಪತಿಗಳನ್ನ ತಯಾರು ಮಾಡಬಾರದು ಅನ್ನೊ ನಿಯಮವಿದೆ. ಯಾರೂ ಸಹ ಪಿಒಪಿ ವಿಗ್ರಹಗಳನ್ನ ತಯಾರು ಮಾಡಿ ಮಾರಾಟ ಮಾಡಬಾರದು. ಪಿಒಪಿ ಗಣೇಶನನ್ನು ತಯಾರಿಸ ಮಾರಾಟ ಮಾಡುತ್ತಿರುವುದು ಕಂಡು ಬಂದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಸೇರಿ ರೇಡ್ ಮಾಡಿ ಕ್ರಮ‌ ಕೈಗೊಳ್ಳಲಾಗುತ್ತದೆ" ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

English summary
Gauri Ganeshotsava is a festival that is celebrated with great enthusiasm in the whole country. Ganeshotsav is celebrated with great pomp in the alleyways of Bengaluru. Due to Covid last year ward was given opportunity to sit Gauri Ganesha as one. BBMP Chief Commissioner Tushar Girinath said that the same rule will continue this year as well,Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X