Ganesha in Indigo flight: ಮೊದಕದೊಂದಿಗೆ ಇಂಡಿಗೋ ವಿಮಾನದಲ್ಲಿ ಬಂದ ಗಣೇಶ: ಫ್ಲೈಟ್ ಮೆನುನಲ್ಲಿ ಮೋದಕ ಸೇರಿಸಲು ನೆಟ್ಟಿಗರ ಸಲಹೆ
ದೇಶದೆಲ್ಲೆಡೆ ಗಣೇಶನ ಮೂರ್ತಿಗಳು ಕಂಗೊಳಿಸುತ್ತಿವೆ. ಕಣ್ಣು ಹಾಯಿಸಿದಲ್ಲೆಲ್ಲ ವಿಭಿನ್ನ ಗಣೇಶನ ಮೂರ್ತಿಗಳು ಆಕರ್ಷಿಸುತ್ತಿವೆ. ಈ ಸಂದರ್ಭದಲ್ಲಿ ಇಂಡಿಗೋ ವಿಮಾನದಲ್ಲಿ ಗಣೇಶ ಬಂದಿದ್ದಾನೆ. ಗಣೇಶನ ಕೈಯಲ್ಲಿ ಮೋದಕವೂ ಇದೆ. ಏನಿದು ಟ್ರಕ್, ಲಾರಿ ಇನ್ನಿತರ ವಾಹನದಲ್ಲಿ ಗಣೇಶ ಬರುವುದು ನೋಡಿದ್ದೇವೆ. ಇದ್ಯಾವ ಗಣೇಶ ವಿಮಾನದಲ್ಲಿ ಬಂದಿದ್ದು ಅಂತ ಯೋಚಿಸುತ್ತಿದ್ದಿರಾ? ಆ ಗಣೇಶ ಇಲ್ಲಿದ್ದಾನೆ ನೋಡಿ.
ಹಿಂದೂ ಹಬ್ಬವಾದ ಗಣೇಶ ಚತುರ್ಥಿಯನ್ನು ದೇಶಾದ್ಯಂತ ಅಪಾರ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ವರ್ಷ 10 ದಿನಗಳ ಕಾಲ ನಡೆಯುವ ಹಬ್ಬ ಹಲವೆಡೆ ಇಂದು (ಸೆಪ್ಟೆಂಬರ್ 19) ಪ್ರಾರಂಭವಾಗಿದೆ. ಈ ದಿನವನ್ನು ಭಕ್ತರು ತಮ್ಮ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಿಹಿತಿಂಡಿಗಳನ್ನು ಅರ್ಪಿಸುವ ಮೂಲಕ ಆಚರಿಸುತ್ತಿದ್ದಾರೆ.

ಇದೀಗ ಈ ಶುಭ ಸಂದರ್ಭದಲ್ಲಿ ಇಂಡಿಗೋ ಏರ್‌ಲೈನ್ ಕೂಡ ಹಿಂದೂ ದೇವರು ವಿಮಾನದಲ್ಲಿ ಮನೆಗೆ ಬರುತ್ತಿರುವ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳನ್ನು ಕೋರಿದೆ. "ಬಪ್ಪಾ ಮನೆಗೆ ಬರುತ್ತಿದ್ದಾರೆ!" ಎಂದು ಶೀರ್ಷಿಕೆಯೊಂದಿಗೆ ಫೋಟೋ ಹಂಚಿಕೊಳ್ಳಲಾಗಿದೆ.
ಫೋಟೋದಲ್ಲಿ ಗಣೇಶನು ಇಂಡಿಗೋ ವಿಮಾನದ ಸೀಟ್‌ನಲ್ಲಿ ಕುಳಿತಿದ್ದಾನೆ. ಆತನ ಮುಂದೆ ಮೋದಕದ ದೊಡ್ಡ ತಟ್ಟೆಯೊಂದು ಇದೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನ ಸೆಳೆದಿದೆ. ಕೆಲವೇ ಗಂಟೆಗಳ ಹಿಂದೆ ಹಂಚಿಕೊಳ್ಳಲಾದ ಫೋಟೋ ಈಗಾಗಲೇ 25,000 ಕ್ಕೂ ಹೆಚ್ಚು ಲೈಕ್ಸ್ ಮತ್ತು ಹಲವಾರು ಕಾಮೆಂಟ್‌ಗಳನ್ನು ಸಂಗ್ರಹಿಸಿದೆ.
ಪ್ರತಿಕ್ರಿಯೆಗಳು:-
"ವಾವ್!! ಈ ಸುಂದರವಾದ ಪೋಸ್ಟ್‌ನ ಕಲ್ಪನೆಯ ಹಿಂದೆ ಯಾರು ಇದ್ದಾರೋ ಅವರನ್ನು ನಾನು ಪ್ರಶಂಸಿಸುತ್ತೇನೆ" ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
"ಇದೊಂದು ಅದ್ಬತ ಗಣೇಶ. ಈ ಕಲ್ಪನೆ ನಿಮಗೆ ಬರಲು ಹೇಗೆ ಸಾಧ್ಯವಾಯ್ತು!" ಎಮದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
"ಇಂಡಿಗೋದ ಮೆನುವಿನಲ್ಲಿ ಮೋದಕ್ ಅನ್ನು ಸೇರಿಸಲು ಮನವಿ" ಎಂದು ಮೂರನೇ ಬಳಕೆದಾರರು ಹೇಳಿದರು.
"ವೈಯಕ್ತಿಕವಾಗಿ ನಾನು ನಿಮ್ಮ ಕಲೆಯನ್ನು ಪ್ರೀತಿಸುತ್ತೇನೆ, ಗ್ರಾಹಕರ ನೆಚ್ಚಿನ ಚಿತ್ರ" ನಾಲ್ಕನೆಯವರು ಬರೆದಿದ್ದಾರೆ.
ಒಬ್ಬ ಬಳಕೆದಾರರು ಎಐ-ರಚಿಸಿದ ಚಿತ್ರವನ್ನು "ಸೂಪರ್ ಕ್ರಿಯೇಟಿವ್" ಎಂದು ಕರೆದರೆ, ಮತ್ತೊಬ್ಬರು "ವಾವ್ ಸುಂದರ ಚಿತ್ರ" ಎಂದು ಬರೆದಿದ್ದಾರೆ.
ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮನೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಆಚರಿಸಲಾಗುತ್ತದೆ. ಅನಂತ ಚತುರ್ದಶಿಯ ದಿನದಂದು ಮೂರ್ತಿಯನ್ನು ಸಾರ್ವಜನಿಕ ಮೆರವಣಿಗೆಯಲ್ಲಿ ಕೊಂಡೊಯ್ದು ಸಮುದ್ರ ಇಲ್ಲವೆ ನದಿಯಲ್ಲಿ ಮುಳುಗಿಸಿದಾಗ (ವಿಸರ್ಜನ್) 10 ದಿನಗಳ ಕಾಲ ನಡೆಯುವ ಉತ್ಸವವು ಕೊನೆಗೊಳ್ಳುತ್ತದೆ.












Click it and Unblock the Notifications