Get Updates
Get notified of breaking news, exclusive insights, and must-see stories!

ಚಿತ್ರದುರ್ಗ ಕೇಸರಿಮಯ: ಹಿಂದೂ ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಆರಂಭ

ಚಿತ್ರದುರ್ಗ, ಸೆಪ್ಟೆಂಬರ್ 17 : ಗಣೇಶನ ಹಬ್ಬ ಬಂತು ಎಂದರೆ ಎಲ್ಲರಿಗೂ ನೆನಪಾಗುವುದು ಕೋಟೆ ನಾಡು. ಹೌದು ರಾಜ್ಯದಲ್ಲೇ ಗಣಪತಿ ಹಬ್ಬವನ್ನು ತೋರಿಸಿದ್ದೇ ಈ ಜಿಲ್ಲೆ. ಅಂದಹಾಗೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ 21 ದಿನಗಳ ಕಾಲ ಪ್ರತಿಷ್ಠಾಪಿಸಲಾಗಿದ್ದ ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಲಕ್ಷಾಂತರ ಮಂದಿ ಸಮ್ಮುಖದಲ್ಲಿ ಆರಂಭಗೊಂಡಿದೆ .

ಕೋವಿಡ್‌ 19 ಕಾರಣದಿಂದ ಕಳೆದ ಎರಡು ವರ್ಷ ಸರಳವಾಗಿ ನಡೆದಿದ್ದ ಶೋಭಾಯಾತ್ರೆ ಎಲ್ಲಾ ಆತಂಕ ದೂರವಾದ ಕಾರಣ ಈ ಬಾರಿ ನಿರೀಕ್ಷೆಗೂ ಮೀರಿದ ಉತ್ಸಾಹ, ಸಂಭ್ರಮ ವ್ಯಕ್ತವಾಗುತ್ತಿದೆ. ಮೆರವಣಿಗೆ ಸಾಗುವ ನಾಲ್ಕೂವರೆ ಕಿ.ಮೀ ಮಾರ್ಗ ಸಂಪೂರ್ಣ ಕೇಸರಿಮಯವಾಗಿದೆ.

ಶನಿವಾರ ಬೆಳಿಗ್ಗೆ ಜೈನ್‌ಧಾಮದ ಆವರಣದಲ್ಲಿ ಶೋಭಾಯಾತ್ರೆಗೆ ವಿಶ್ವ ಹಿಂದೂ ಪರಿಷತ್‌ ಅಖಿಲ ಭಾರತೀಯ ಸಹ ಕಾರ್ಯದರ್ಶಿ ಅಂಬರೀಶ್‌ ಸಿಂಗ್‌ ವಿಧ್ಯುಕ್ತ ಚಾಲನೆ ನೀಡಿದ್ದಾರೆ. ಈ ಸಂಭ್ರಮದ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದಾರೆ. ಈ ಶೋಭಯಾತ್ರೆಗೆ ಲಕ್ಷಾಂತರ ಜನರು ಸಾಗರೋಪಾದಿಯಲ್ಲಿ ಕಿಕ್ಕಿರಿದು ಮೆರವಣಿಗೆಯಲ್ಲಿ ಸೇರುವುದು ಖಚಿತವಾಗಿದೆ. ಎತ್ತ ತಿರುಗಿದರು ಸಹ ಜನವೋ, ಜನ. ಗಣಪತಿ ಮೆರವಣಿಗೆಗೆ ನಿರೀಕ್ಷೆಗೂ ಮೀರಿ ಜನರು ಸೇರುತ್ತಿದ್ದಾರೆ.

ಶನಿವಾರ ಬೆಳಗ್ಗೆ 12ರ ಸುಮಾರಿಗೆ ವಿಜ್ಞಾನ ಕಾಲೇಜು ಮುಂಭಾಗದಿಂದ ಶುರುವಾದ ಗಣಪತಿ ವಿಸರ್ಜನಾ ಶೋಭಾಯಾತ್ರೆ ಮೂರು ಕಿಲೋಮೀಟರ್ ಸಾಗಿ, ಚಂದ್ರವಳ್ಳಿ ಕೆರೆಯಲ್ಲಿ ವಿಸರ್ಜನೆ ಗೊಳ್ಳಲಿದೆ. ಈ ಮೆರವಣಿಗೆಗೆ ನಿರೀಕ್ಷೆಗೂ ಮೀರಿ ಜನರು ಸೇರಲಿದ್ದಾರೆ. ಪ್ರತಿಷ್ಠಾಪನ ಸ್ಥಳದಿಂದ ಗಣಪತಿ ಮೆರವಣಿಗೆ ಹೊರಟು ಮದಕರಿನಾಯಕನ ವೃತ್ತ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಸಂಗೋಳ್ಳಿ ರಾಯಣ್ಣ ವೃತ್ತ ಹಾಗೂ ಕನಕ ವೃತ್ತದದ ಮೂಲಕ ಶೋಭಾಯಾತ್ರೆ ಸಾಗಲಿದೆ.

 ಪೊಲೀಸರ ಸರ್ಪಗಾವಲು

ಪೊಲೀಸರ ಸರ್ಪಗಾವಲು

ಯುವಕ, ಯುವತಿಯರು, ಮಕ್ಕಳು, ಹಿರಿಯರು ಹೀಗೆ ಎಲ್ಲರೂ ಭವ್ಯ ಮೆರವಣಿಗೆಗೆ ಸಾಕ್ಷಿಯಾಗಲಿದ್ದಾರೆ. ಇನ್ನು ರಸ್ತೆಯುದ್ದಕ್ಕೂ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ. ಭದ್ರತೆಗಾಗಿ 8 ಕೆಎಸ್ಆರ್ಪಿ ತುಕಡಿಗಳು, 8 ಡಿಎಆರ್ ತುಕಡಿಗಳು ಸೇರಿದಂತೆ ಪೋಲಿಸರ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮೆರವಣಿಗೆಯಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಜೊತೆಗೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದ ತಂಡ ಸಹ ಎಲ್ಲಿಯೂ ಸಮಸ್ಯೆ ಆಗದಂತೆ ಎಚ್ಚರವಹಿಸಿದ್ದಾರೆ. ಇನ್ನು ಒಳ ಬರುವ ಪ್ರಮುಖ ರಸ್ತೆಗಳನ್ನು ತಾತ್ಕಾಲಿಕವಾಗಿ ಬಂಬೂಗಳಿಂದ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ನಗರದ ವಿವಿಧ ಭಾಗಗಳಲ್ಲಿ ವಾಚಿಂಗ್ ಟವರ್ ನಿರ್ಮಾಣ ಮಾಡಲಾಗಿದೆ.

 ಎತ್ತನೋಡಿದರೂ ಕೇಸರಿ ಬಾವುಟಕ್ಕೆ ಹಾರಾಟ

ಎತ್ತನೋಡಿದರೂ ಕೇಸರಿ ಬಾವುಟಕ್ಕೆ ಹಾರಾಟ

ಗಣೇಶನ ಬೃಹತ್ ಶೋಭಾಯಾತ್ರೆಗೆ ಚಿತ್ರದುರ್ಗ ನಗರ ಕೇಸರಿ ಬಣ್ಣದ ಮಾಯಾವಾಗಿದೆ. ಎಲ್ಲಿ ಎತ್ತಾ ನೋಡಿದ್ರೂ ಕೇಸರಿ ಬಾವುಟ ಹಾರಾಟ ಕಾಣುತ್ತಿವೆ. ನಗರದ ವೃತ್ತಗಳಿಗೆ ಬಣ್ಣ ಬಣ್ಣದ ಅಲಂಕಾರ ಮಾಡಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಮದಕರಿನಾಯಕ ವೃತ್ತ, ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ, ಕನಕ ಸರ್ಕಲ್ ಸೇರಿದಂತೆ ಮತ್ತಿತರರ ವೃತ್ತಗಳಿಗೆ ಭಾರಿ ಅಲಂಕಾರ ಮಾಡಲಾಗಿದೆ.

 ಅಲಂಕಾರ ರಹಿತವಾಹಿ ಕಂಡ ಅಂಬೇಡ್ಕರ್ ಪ್ರತಿಮೆ

ಅಲಂಕಾರ ರಹಿತವಾಹಿ ಕಂಡ ಅಂಬೇಡ್ಕರ್ ಪ್ರತಿಮೆ

ಗಣೇಶನ ಮೆರವಣಿಗೆ ಹಿನ್ನಲೆಯಲ್ಲಿ ನಗರದ ಎಲ್ಲಾ ವೃತ್ತಗಳಿಗೆ ಅಲಂಕಾರ ಮಾಡಿದ ಹಿನ್ನೆಲೆಯಲ್ಲಿ ಝಗಮಗಿಸುತ್ತಿದ್ದವು. ಆದರೆ ಅಂಬೇಡ್ಕರ್ ಪ್ರತಿಮೆ ಹಾಗೂ ವೃತ್ತಕ್ಕೆ ಅಲಂಕಾರ ಮಾಡಿರದ ಕಾರಣ ಖಾಲಿ ಖಾಲಿಯಾಗಿ ಕಾಣುತ್ತಿತ್ತು. ಕಾರಣ ಅಂಬೇಡ್ಕರ್ ಫಾಲೋವರ್ಸ್ ನಡುವೆ ಶೀತಲ ಸಮರ. ಅಂಬೇಡ್ಕರ್‌ಗೂ ಹಾಗೂ ಹಿಂದೂ ಮಹಾಗಣಪತಿ ಏನು ಸಂಬಂಧ ಇದೆ ಎಂಬ ಪ್ರಶ್ನೆ ಅಂಬೇಡ್ಕರ್‌ ವಾದಿಗಳದ್ದು. ಹೀಗಾಗಿ ರಾಷ್ಟ್ರೀಯ ಮಹಾನಾಯಕನ ಪ್ರತಿಮೆ ಯಾವುದೇ ಅಲಂಕಾರ ಕಾರ್ಯ ನಡೆದಿಲ್ಲ.

 ನಗರದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ

ನಗರದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ

ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ನೇತೃತ್ವದಲ್ಲಿ ನಡೆಯುತ್ತಿರುವ ಹಿಂದೂ ಮಹಾಗಣಪತಿ ವಿಸರ್ಜನೆಯ ಬೃಹತ್ ಶೋಭಾಯಾತ್ರೆ ನಗರದೆಲ್ಲೆಡೆ ವಿಜೃಂಭಣೆಯಿಂದ ನಡೆಯುವ ಹಿನ್ನೆಲೆಯಲ್ಲಿ ನಗರದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಡಿಡಿಪಿಐ ರವಿಶಂಕರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+