• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳದಲ್ಲಿ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನಾ ಘಟಕ ಸ್ಥಾಪನೆ ಸಂಬಂಧ ಮಾತುಕತೆ

|
Google Oneindia Kannada News

ತಿರುವನಂತಪುರಂ, ಜುಲೈ 23: ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನಾ ಘಟಕವನ್ನು ಕೇರಳದಲ್ಲಿ ಸ್ಥಾಪಿಸುವ ಸಂಬಂಧ ರಾಜ್ಯ ಸರ್ಕಾರ ರಷ್ಯಾದ ನೇರ ಹೂಡಿಕೆ ನಿಧಿ (RDIF) ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಕೈಗಾರಿಕಾ ಸಚಿವ ಪಿ. ರಾಜೀವ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಈಚೆಗೆ ಕೊರೊನಾ ಲಸಿಕೆಗಳಿಗೆ ತೀವ್ರ ಅಭಾವ ಸೃಷ್ಟಿಯಾದ ಸಮಯದಲ್ಲಿ ಲಸಿಕಾ ಉತ್ಪಾದನಾ ಘಟಕ ಆರಂಭಿಸುವ ಕುರಿತು ರಷ್ಯಾ ಹಾಗೂ ಕೇರಳ ಸರ್ಕಾರದ ಮಧ್ಯೆ ಮಾತುಕತೆ ಆರಂಭವಾಗಿದೆ.

ದೇಹದಲ್ಲಿ ಪ್ರತಿಕಾಯ ಸೃಷ್ಟಿಗೆ ಸ್ಪುಟ್ನಿಕ್ V ಲಸಿಕೆಯ ಒಂದೇ ಡೋಸ್ ಸಾಕುದೇಹದಲ್ಲಿ ಪ್ರತಿಕಾಯ ಸೃಷ್ಟಿಗೆ ಸ್ಪುಟ್ನಿಕ್ V ಲಸಿಕೆಯ ಒಂದೇ ಡೋಸ್ ಸಾಕು

"ರಷ್ಯಾದ ಕೌನ್ಸಲ್ ಜನರಲ್ ಹಾಗೂ ಆರ್‌ಡಿಐಎಫ್‌ನ ಅಧಿಕಾರಿಗಳೊಂದಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಇತರೆ ಅಧಿಕಾರಿಗಳು ಈ ವಿಷಯ ಸಂಬಂಧ ಸಂಪರ್ಕದಲ್ಲಿದ್ದಾರೆ. ಪ್ರಾಥಮಿಕ ಚರ್ಚೆಗಳು ನಡೆಯುತ್ತಿವೆ. ಕೆಲವೇ ದಿನಗಳಲ್ಲಿ ಘಟಕ ಸ್ಥಾಪನೆ ಕುರಿತು ಒಪ್ಪಂದಕ್ಕೆ ಬರಲಿದ್ದೇವೆ" ಎಂದು ಸಚಿವ ರಾಜೀವ್ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಲಸಿಕೆಗಳ ಉತ್ಪಾದನೆಗೆ ಸಿದ್ಧವಿರುವ ಕಂಪನಿಗಳಿಗೆ ಪ್ರಸ್ತಾವನೆ ನೀಡುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ರಾಜ್ಯ ಸರ್ಕಾರ ರಚಿಸಿದ ತಜ್ಞರ ಸಮಿತಿಯು ತೊನ್ನಕ್ಕಲ್‌ನ ಜೀವವಿಜ್ಞಾನ ಉದ್ಯಾನದಲ್ಲಿನ ಭೂಮಿಯನ್ನು ಲಸಿಕಾ ಉತ್ಪಾದನಾ ಘಟಕ ಸ್ಥಾಪನೆಗೆ ಸೂಚಿಸಿದೆ.

ಈ ಲಸಿಕೆ ಉತ್ಪಾದನಾ ಘಟಕದಿಂದ ರಾಜ್ಯದ ಜನರಿಗೆ ಬಹಳ ಉಪಯೋಗವಾಗಲಿದೆ ಎಂದು ಸಚಿವರು ತಿಳಿಸಿದರು.

ಇದರೊಂದಿಗೆ ಕೇರಳದಲ್ಲಿ ಐಟಿ, ಪ್ರವಾಸೋದ್ಯಮ, ಕೃಷಿ ಅವಲಂಬಿತ ಕೈಗಾರಿಕೆಗಳು, ಔಷಧ ಕಂಪನಿಗಳು ಹಾಗೂ ವೈದ್ಯಕೀಯ ಸಲಕರಣೆ ಉತ್ಪಾದನಾ ಕ್ಷೇತ್ರಗಳನ್ನು ಆರಂಭಿಸುವ ಹಲವು ಯೋಜನೆಗಳಿರುವುದಾಗಿ ತಿಳಿಸಿದರು.

English summary
Kerala government talks with the Russian Direct Investment Fund (RDIF) for setting up a Sputnik V vaccine manufacturing plant in the state, says Industries Minister P Rajeev
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X