• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕುಖ್ಯಾತ ಸ್ಮಗ್ಲರ್‌ಗೆ ಕೊರೊನಾ ಅಟ್ಯಾಕ್; ಟ್ರಾವೆಲ್ ಹಿಸ್ಟರಿ ಬಾಯಿ ಬಿಡದ ಕಿಲಾಡಿ!

|

ತಿರುವನಂತಪುರಂ, ಮಾರ್ಚ್ 22: ಡೆಡ್ಲಿ ಕೊರೊನಾ ವೈರಸ್‌ ಜಗತ್ತಿನಲ್ಲಿ ತನ್ನ ಸಂಪರ್ಕಕ್ಕೆ ಬಂದವರನ್ನು ಅಪೋಶನ ತಗೆದುಕೊಳ್ಳುತ್ತಾ ಸಾಗಿದೆ.

ಈಗ ಕೊರೊನಾ ಕೆಂಗೆಣ್ಣಿಗೆ ಕೇರಳದ ಕುಖ್ಯಾತ ಕಳ್ಳಸಾಗಣೆದಾರನೊಬ್ಬ ಬಿದ್ದಿದ್ದಾನೆ. ಅರಬ್ ರಾಷ್ಟ್ರಗಳಿಂದ ಚಿನ್ನವನ್ನು ಕಳ್ಳಸಾಗಣೆ ಮಾಡುವಲ್ಲಿ ನಿಷ್ಣಾತನಾಗಿದ್ದ 47 ವರ್ಷದ ಕೇರಳದ ಕಾಸರಗೋಡು ಮೂಲದ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ತಗುಲಿದೆ.

ಡೆಡ್ಲಿ ಕೊರೊನಾಕ್ಕೆ ಅಮೆರಿಕದಲ್ಲಿಯೂ ನಿಲ್ಲುತ್ತಿಲ್ಲ ಸಾವಿನ ಸರಣಿ

ಈ ವಿಷಯವನ್ನು ಕಾಸರಗೋಡು ಜಿಲ್ಲಾಧಿಕಾರಿಯೇ ಖಚಿತಪಡಿಸಿದ್ದು, ಸೋಂಕಿತ ವ್ಯಕ್ತಿ ಅಂತಾರಾಷ್ಟ್ರೀಯ ಕಳ್ಳ ಸಾಗಣೆದಾರನಾಗಿದ್ದು, ಆತ ದುಬೈನಿಂದ ಮರಳಿದ ನಂತರ ಸುಮಾರು ಜನರೊಡನೆ ಸಂಪರ್ಕಕ್ಕೆ ಬಂದಿದ್ದ. ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಆತ ಈಗ ಐಸೋಲೇಷನ್ ಘಟಕದಲ್ಲಿದ್ದಾನೆ. ಆದರೆ, ಆತ ತಾನು ಯಾರಾರನ್ನು ಭೇಟಿಯಾಗಿದ್ದ ಎಂಬುದನ್ನು ಬಾಯಿ ಬಿಡುತ್ತಿಲ್ಲ ಎಂದು ಹೇಳಿದ್ದಾರೆ.

ದುಬೈನಿಂದ ಬಂದಿದ್ದ

ದುಬೈನಿಂದ ಬಂದಿದ್ದ

ಸೋಂಕಿತ ಕಳ್ಳಸಾಗಣೆದಾರ ದುಬೈನಿಂದ ಮಾರ್ಚ್ 11 ರಂದು ಕೇರಳದ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಈತನ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿ ಪಾಸ್‌ಪೋರ್ಟ್ ವಶಪಡಿಸಿಕೊಂಡು ಎರಡನೇ ಹಂತದ ತಪಾಸಣೆಗೆ ಕರೆದುಕೊಂಡು ಹೋಗಿದ್ದಾಗ, ಕ್ಯಾಲಿಕಟ್ ವಿಮಾನ ನಿಲ್ದಾಣದಿಂದ ಪರಾರಿಯಾಗಿದ್ದ ಎಂದು ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್ 19 ನಿಂದ ಆಸ್ಪತ್ರೆಗೆ

ಕೋವಿಡ್ 19 ನಿಂದ ಆಸ್ಪತ್ರೆಗೆ

ಮಾರ್ಚ್ 19 ರಂದು ಆಸ್ಪತ್ರೆಗೆ ದಾಖಲಾಗಿದ್ದ ಸ್ಮಗ್ಲರ್ ವ್ಯಕ್ತಿಗೆ (ಆತನ ಹೆಸರು ಬಹಿರಂಗಪಡಿಸಿಲ್ಲ) ಕೊರೊನಾ ಸೋಂಕು ತಪಾಸಣೆ ಮಾಡಿದ್ದಾಗ, ಕೊರೊನಾ ಇರುವುದು ದೃಢಪಟ್ಟಿದೆ. ಈಗ ಕೇರಳದ ಕಾಸರಗೂಡಿನ ಐಸೋಲೇಷನ್ ವಾರ್ಡ್‌ನಲ್ಲಿರುವ ಈ ವ್ಯಕ್ತಿಯ ಹಿಂದೆ ಇಡೀ ಕೇರಳ ಜಿಲ್ಲಾಡಳಿತವೇ ಬಿದ್ದಿದೆ. ಮುಂದೆ ಓದಿ

ಕೇರಳದಲ್ಲಿ ಕೊರೊನಾ ವೈರಸ್ ನಿಬಂಧನೆಗಿಲ್ಲ ಕವಡೆ ಕಾಸಿನ ಕಿಮ್ಮತ್ತು

ಬಾಯಿ ಬಿಡದ ಕಳ್ಳಸಾಗಣೆದಾರ

ಬಾಯಿ ಬಿಡದ ಕಳ್ಳಸಾಗಣೆದಾರ

ಯುಎಇ ನ ದುಬೈ ಸೇರಿದಂತೆ ಅರಬ್ ರಾಷ್ಟ್ರಗಳಲ್ಲಿ ಚಿನ್ನ ಕಳ್ಳಸಾಗಾಣೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಭಾರತದ ಕಸ್ಟಮ್ಸ ವಿಭಾಗದಲ್ಲಿ ಈತನ ವಿರುದ್ಧ ಸುಮಾರು ಪ್ರಕರಣಗಳು ಉಲ್ಲೇಖವಾಗಿವೆ. ಇತ್ತೀಚೆಗೆ ದುಬೈಗೆ ಹೋಗಿ ಬಂದಿದ್ದ ಈ ವ್ಯಕ್ತಿ ಈಗ ಕೊರೊನಾ ಪೀಡಿತನಾಗಿ ಆಸ್ಪತ್ರೆ ಸೇರಿದ್ದಾನೆ. ಆದರೆ, ಈ ಕಿಲಾಡಿ ಆರೋಗ್ಯ ಅಧಿಕಾರಿಗಳ ಎದುರಿಗೆ ತಾನು ಯಾರಾರನ್ನು ಭೇಟಿಯಾಗಿದ್ದೆ ಎಂಬುದನ್ನು ಬಾಯಿ ಬಿಡುತ್ತಿಲ್ಲವಂತೆ. ಒಂದು ವೇಳೆ ಬಾಯಿ ಬಿಟ್ಟರೆ ತನ್ನ ಚಿನ್ನ ಕಳ್ಳಸಾಗಾಣೆ ವ್ಯವಹಾರದ ಮುಖ ಎಲ್ಲಿ ಕಳಚುತ್ತದೆ ಎಂದು ಬಹಿರಂಗಪಡಿಸುತ್ತಿಲ್ಲ. ಹೀಗಾಗಿ ಕಾಸರಗೋಡು ಆರೋಗ್ಯ ಅಧಿಕಾರಿಗಳು ಈತನ ಬಗ್ಗೆ ತೀವ್ರ ತಲೆ ಕೆಡಿಸಿಕೊಂಡಿದ್ದಾರೆ.

1400 ಜನರನ್ನು ಭೇಟಿಯಾಗಿದ್ದನಂತೆ!

1400 ಜನರನ್ನು ಭೇಟಿಯಾಗಿದ್ದನಂತೆ!

ಮಾರ್ಚ್ 19 ರಂದು ಆಸ್ಪತ್ರೆಗೆ ದಾಖಲಾದ ರೋಗಿಯ, ಆರಂಭಿಕ ಅಂದಾಜಿನ ಪ್ರಕಾರ ಇಬ್ಬರು ಕೇರಳ ಶಾಸಕರು ಸೇರಿದಂತೆ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ 1,400 ಜನರೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ. ಉದ್ಯಮಿಗಳನ್ನೂ ಭೇಟಿಯಾಗಿದ್ದ. ಆದರೆ, ನಿರೀಕ್ಷಿತ ಸಂಪರ್ಕ ಪಟ್ಟಿ ಹೆಚ್ಚು ಉದ್ದವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವ್ಯಕ್ತಿ ತನ್ನ ಸಂಪರ್ಕಗಳನ್ನು ಪತ್ತೆಹಚ್ಚುವಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸುತ್ತಿಲ್ಲ ಎಂದು ಕಾಸರಗೋಡಿನ ಜಿಲ್ಲಾಧಿಕಾರಿ ಹೇಳಿದ್ದಾರೆ.

ಕೊರೊನಾ ವೈರಸ್ ತಡೆಗೆ ಕೇರಳ ಸರ್ಕಾರದ ಯೋಜನೆ ಏನು ಗೊತ್ತಾ?

English summary
Coronavirus Tested Case Positive For Kerala Gold Smuggler He Did Not Share Travel Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more