Vande Bharat Express: ಏಪ್ರಿಲ್ 25ರಂದು ಕೇರಳದ ಮೊದಲ ವಂದೇ ಭಾರತ್ ಸೇವೆಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ
ಕೇರಳ, ಏಪ್ರಿಲ್, 15: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್ 25 ರಂದು ತಿರುವನಂತಪುರಂ ರೈಲು ನಿಲ್ದಾಣದಲ್ಲಿ ಕೇರಳದ ಮೊದಲ ವಂದೇ ಭಾರತ್ ಸೆಮಿ ಹೈ-ಸ್ಪೀಡ್ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ.
ನಂತರ ಬಿಜೆಪಿಯು ಏಪ್ರಿಲ್ 24ರಂದು ಕೊಚ್ಚಿಯಲ್ಲಿ ನರೇಂದ್ರ ಮೋದಿ ಅವರಿಗಾಗಿ ಹೈ ಡೆಸಿಬಲ್ ರೋಡ್ ಶೋ ಆಯೋಜಿಸುತ್ತಿದೆ. ಇದೇ ವೇಳೆ ಪ್ರಧಾನಿಯವರು ಯುವಕರೊಂದಿಗೆ ಪಕ್ಷದ ಪ್ರಾಯೋಜಿತ ಸಂವಾದದಲ್ಲಿ ಭಾಗವಹಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎರಡು ಆಧುನಿಕ ರೈಲುಗಳ ಸೇವೆ ಸಾಧ್ಯತೆ
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 16 ಆಧುನಿಕ ಕೋಚ್‌ಗಳನ್ನು ಹೊಂದಿದೆ. ಅಡೆತಡೆಯಿಲ್ಲದ ಸೇವೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ತ್ವರಿತ ತಿರುವುಗಳ ಅಗತ್ಯವನ್ನು ನಿರಾಕರಿಸಲು ಕೇರಳ ರಾಜ್ಯವು ಇಂತಹ ಎರಡು ಆಧುನಿಕ ರೈಲುಗಳ ಸೇವೆಯನ್ನು ಪಡೆಯುವ ಸಾಧ್ಯತೆಯಿದೆ. ಇನ್ನು ಏಪ್ರಿಲ್ 22 ರಂದು ತಿರುವನಂತಪುರಂ-ಕಣ್ಣೂರು ಮಾರ್ಗದಲ್ಲಿ ರೈಲ್ವೇ ಅಧಿಕಾರಿಗಳು ಪ್ರಾಯೋಗಿಕ ಸಂಚಾರವನ್ನು ನಡೆಸಲಿದ್ದಾರೆ. ಹೊಸ ಸೇವೆಗಾಗಿ ಹಳಿಗಳ ಹೆಚ್ಚಳ ಮತ್ತು ಸಿಗ್ನಲಿಂಗ್ ವ್ಯವಸ್ಥೆಯ ಆಧುನೀಕರಣವು ಈಗಾಗಲೇ ಮುಕ್ತಾಯದ ಹಂತದಲ್ಲಿದೆ.

ಕೇರಳದ ರೈಲ್ವೇ ಹಳಿಗಳಲ್ಲಿ ವಂದೇ ಭಾರತ್ ತನ್ನ ಗರಿಷ್ಠ ವೇಗವನ್ನು ಗಂಟೆಗೆ 110 ಕಿ.ಮೀ. ಹೆಚ್ಚಿಸಬಹುದಾಗಿದೆ. ಅಲ್ಲದೆ ರೈಲು ಗಂಟೆಗೆ 180 ಕಿಲೋ ಮೀಟರ್ ವೇಗದಲ್ಲಿ ಚಲಿಸಬಹುದು ಎಂದು ರೈಲ್ವೆ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.
ರೈಲು ಸೇವೆಯ ವಿವರಗಳು
ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತಿರುವನಂತಪುರಂ ಮತ್ತು ಕಣ್ಣೂರು ರೈಲು ನಿಲ್ದಾಣಗಳ ನಡುವೆ ಕಾರ್ಯನಿರ್ವಹಿಸಲಿದೆ. ಇನ್ನು ಕೊಲ್ಲಂ, ಕೊಟ್ಟಾಯಂ ಎರ್ನಾಕುಲಂ ಟೌನ್, ತ್ರಿಶೂರ್, ತಿರೂರ್, ಕೋಝಿಕ್ಕೋಡ್ ರೈಲು ನಿಲುಗಡೆ ಆಗಲಿದೆ. ಇದು ತನ್ನ ಪ್ರಯಾಣವನ್ನು ರಾಜ್ಯ ರಾಜಧಾನಿಯಿಂದ ಬೆಳಗ್ಗೆ 5 ಗಂಟೆಗೆ ಪ್ರಾರಂಭಿಸಲಿದ್ದು, ರಾತ್ರಿಯ ಒಳಗೆ ಹಿಂತಿರುಗಲು ಯೋಜಿಸಲಾಗಿದೆ.
2024ರ ಚುನಾವಣೆಯ ಮೇಲೆ ಕಣ್ಣು
ವಂದೇ ಭಾರತ್ ರೈಲು ಸೇವೆಗೆ ಚಾಲನೆ ನೀಡುವ ಮೂಲಕ ಕೇರಳದ 2024ರ ಲೋಕಸಭಾ ಚುನಾವಣೆಗೆ ಪ್ರಚಾರ ಕೈಗೊಳ್ಳುವ ಲೆಕ್ಕಾಚಾರ ಬಿಜೆಪಿಯದ್ದಾಗಿದೆ. ಹೀಗೆ ಇಲ್ಲಿನ ಬಿಜೆಪಿಯು ಮೋದಿಯವರ ಜನಪ್ರಿಯತೆಯನ್ನು ಬಳಸಿಕೊಳ್ಳಲು ಆಶಿಸುತ್ತಿದೆ. ಇದು ಕೇರಳದಲ್ಲಿ ಪಕ್ಷದ ಸಾರ್ವಜನಿಕ ಸ್ಥಾನಮಾನವನ್ನು ಮೀರಿಸಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಮಾತನಾಡಿ, ಈ ಬೆಳವಣಿಗೆಯು ಕೇರಳದ ರೈಲ್ವೆ ಅಭಿವೃದ್ಧಿಯನ್ನು ಕೇಂದ್ರ ನಿರ್ಲಕ್ಷಿಸಿದೆ ಎಂಬ ಟೀಕೆಯನ್ನು ತಳ್ಳಿಹಾಕಲಿದೆ. ಮೋದಿಯವರ ನಾಯಕತ್ವವು ಕೇರಳದ ಭವಿಷ್ಯಕ್ಕಾಗಿ ಹೆಚ್ಚು ಸಕಾರಾತ್ಮಕ ದೃಷ್ಟಿಕೋನ ಆಗಿದೆ. ಮತ್ತು ಇಲ್ಲಿನ ಮತದಾರರನ್ನು ಒಗ್ಗೂಡಿಸುತ್ತದೆ ಎಂದು ಹೇಳಿದರು.

ಕೇರಳದಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ ಬಿಜೆಪಿ ಪ್ರಯತ್ನದ ನೆರಳಿನಲ್ಲೇ ವಂದೇ ಭಾರತ್ ರೈಲು ಸೇವೆಗೆ ಚಾಲನೆ ದಿನಾಂಕವೂ ಹತ್ತಿರ ಬರುತ್ತದೆ. ಇಲ್ಲಿನ ಬಿಜೆಪಿ ನಾಯಕರು ವಿಷು ದಿನದಂದು ತಮ್ಮ ಮನೆ ಮತ್ತು ಕಚೇರಿಗಳಲ್ಲಿ ಧರ್ಮಗುರುಗಳಿಗೆ ಆತಿಥ್ಯ ನೀಡಲಿದ್ದಾರೆ.
ಅಲ್ಲದೆ ಈಸ್ಟರ್ ದಿನದಂದು ಚರ್ಚ್ ನಾಯಕರನ್ನು ಕರೆಯುವ ತಂತ್ರದ ಅನುಸರಣೆ ಬಿಜೆಪಿ ನಾಯಕರದ್ದಾಗಿದೆ. ಹೀಗೆ ಚುನಾವಣೆ ಸಮಯದಲ್ಲಿ ಇಂತಹ ಮಹತ್ವದ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳಲು ಇಲ್ಲಿನ ಬಿಜೆಪಿ ಸರ್ಕಾರ ತಂತ್ರ ರೂಪಿಸಿದೆ ಎನ್ನುವ ಕೂಗು ಎದ್ದಿದೆ. ಅಲ್ಲದೆ ಒಟ್ಟಿನಲ್ಲಿ ಬಿಜೆಪಿ ಸರ್ಕಾರದ ಇಂತಹ ಪ್ಲಾನ್‌ಗಳಿಗೆ ಟಾಂಟ್ ಕೊಡುವ ಮೂಲಕ ಪಕ್ಷದ ವರ್ಚಸ್ಸನ್ನು ಡ್ಯಾಮೇಜ್ ಮಾಡಲು ವಿಪಕ್ಷಗಳು ತುದಿಗಾಲಲ್ಲಿ ನಿಂತಿವೆ ಎನ್ನಲಾಗುತ್ತಿದೆ.












Click it and Unblock the Notifications