Puthuppally By Election Results; ಚಾಂಡಿ ಉಮ್ಮನ್ ಗೆಲುವು
ತಿರುವನಂತಪುರ, ಸೆಪ್ಟೆಂಬರ್ 08; ಕೇರಳದ ಪುತ್ತುಪ್ಪಲ್ಲಿ ವಿಧಾನಸಭಾಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಉಮ್ಮನ್ ಚಾಂಡಿ ಪುತ್ರ ಚಾಂಡಿ ಉಮ್ಮನ್ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಪುತ್ತುಪ್ಪಲ್ಲಿ ಕ್ಷೇತ್ರ ಮತ್ತೆ ಉಮ್ಮನ್ ಚಾಂಡಿ ಕುಟುಂಬದ ಪಾಲಾಗಿದೆ.
ಕೊಟ್ಟಾಯಂ ಜಿಲ್ಲೆಯ ಪುತ್ತುಪ್ಪಲ್ಲಿ ವಿಧಾನಸಭಾಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಶುಕ್ರವಾರ ನಡೆಯಿತು. ಕಾಂಗ್ರೆಸ್- ಯುಡಿಎಫ್ ಅಭ್ಯರ್ಥಿ ಚಾಂಡಿ ಉಮ್ಮನ್ 78,649 ಮತಗಳನ್ನು ಪಡೆದು ಜಯಗಳಿಸಿದರು.

ಎಲ್‌ಡಿಎಫ್ ಅಭ್ಯರ್ಥಿ ಜೈಕ್ ಸಿ. ಥಾಮಸ್ 41,982 ಮತಗಳನ್ನು ಪಡೆದು ಸೋಲು ಕಂಡರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಜಿ. ಲಿಂಜಿನ್‌ಲಾಲ್ ಅವರನ್ನು ಕ್ಷೇತ್ರದಲ್ಲಿ ಕಣಕ್ಕಿಳಿಸಿತ್ತು. ಆದರೆ ಚಾಂಡಿ ಉಮ್ಮನ್ ಮತ್ತು ಜೈಕ್ ಸಿ. ಥಾಮಸ್ ನಡುವೆ ಉಪ ಚುನಾವಣೆಯಲ್ಲಿ ನೇರ ಪೈಪೋಟಿ ಇತ್ತು.
ಕೇರಳದ ಮಾಜಿ ಮುಖ್ಯಮಂತ್ರಿ ದಿ. ಉಮ್ಮನ್ ಚಾಂಡಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಪುತ್ತುಪ್ಪಲ್ಲಿ. ಜುಲೈ 18ರಂದು ಉಮ್ಮನ್ ಚಾಂಡಿ ಬೆಂಗಳೂರಿನಲ್ಲಿ ವಿಧಿವಶರಾಗಿದ್ದರು. ಅವರ ನಿಧನದ ಬಳಿಕ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ಸೆಪ್ಟೆಂಬರ್ 5ರಂದು ನಡೆದಿತ್ತು, ಶುಕ್ರವಾರ ಚುನಾವಣಾ ಫಲಿತಾಂಶ ಘೋಷಣೆಯಾಗಿದೆ.
ಮೊದಲ ಸುತ್ತಿನ ಮತ ಎಣಿಕೆಯಿಂದಲೇ ಚಾಂಡಿ ಉಮ್ಮನ್ ಮುನ್ನಡೆ ಕಾಯ್ದುಕೊಂಡರು. ಸುಮಾರು 36,000 ಮತಗಳ ಅಂತದಲ್ಲಿ ಉಪ ಚುನಾವಣೆ ಗೆಲ್ಲುವ ಮೂಲಕ ಕಾಂಗ್ರೆಸ್ ದಿ. ಉಮ್ಮನ್ ಚಾಂಡಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಪುತ್ತುಪ್ಪಲ್ಲಿಯನ್ನು ಉಳಿಸಿಕೊಂಡಿದೆ.
ಪುತ್ತುಪ್ಪಲ್ಲಿ ಉಪ ಚುನಾವಣೆ ಗೆಲುವಿನ ಬಳಿಕ ಕೇರಳದ ಕಾಂಗ್ರೆಸ್ ಕಛೇರಿಯಲ್ಲಿ ಪಕ್ಷದ ನಾಯಕರು ಸಿಹಿ ಹಂಚಿ ಸಂಭ್ರಮಿಸಿದರು. ಪಕ್ಷದ ನಾಯಕ ರಮೇಶ್ ಚೆನ್ನಿತಾಲ ಮಾತನಾಡಿ, "ಈ ಉಪ ಚುನಾವಣೆ ಫಲಿತಾಂಶ ಮೋದಿ ಮತ್ತು ಪಿಣರಾಯಿ ವಿಜಯನ್‌ಗೆ ಸ್ಪಷ್ಟ ಸಂದೇಶವಾಗಿದೆ" ಎಂದರು.
ಪುತ್ತುಪ್ಪಲ್ಲಿ ವಿಧಾನಸಭಾಕ್ಷೇತ್ರದ ಉಪಚುನಾವಣೆಯ ಸಂಪೂರ್ಣ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಉಮ್ಮನ್ ಚಾಂಡಿ ಪುತ್ರ ಚಾಂಡಿ ಉಮ್ಮನ್ 37,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಪುತ್ತುಪ್ಪಲ್ಲಿ ಕ್ಷೇತ್ರವನ್ನು ಕಾಂಗ್ರೆಸ್ ಉಳಿಸಿಕೊಂಡಿದೆ. ಅಭ್ಯರ್ಥಿಗಳು ಪಡೆದ ಮತಗಳು ಹೀಗಿವೆ.
* ಸಿಪಿಐ(ಎಂ) ಜೈಕ್ ಸಿ. ಥಾಮಸ್ 41,982 ಮತ
* ಬಿಜೆಪಿಯ ಜಿ. ಲಿಂಜಿನ್‌ಲಾಲ್ 6,486 ಮತ
* ಆಮ್ ಆದ್ಮಿ ಪಕ್ಷದ ಲೂಕ್ ಥಾಮಸ್ 829 ಮತ
* ಪಕ್ಷೇತರ ಸಂತೋಷ್ ಪುಲಿಕಲ್ 78 ಮತ
* ಪಕ್ಷೇತರ ಶಾಜಿ 58 ಮತ
* ಪಕ್ಷೇತರ ಪಿಕೆ ದೇವದಾಸ್ 57 ಮತಗಳು.
ಚಾಂಡಿ ಉಮ್ಮನ್ ಕೇರಳದ ಯುವ ಕಾಂಗ್ರೆಸ್ ನಾಯಕ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಸಕ್ರಿಯವಾಗಿ ತೊಡಗಿದ್ದರು. ಯಾತ್ರೆ ಪೂರ್ಣಗೊಂಡು ಒಂದು ವರ್ಷವಾಗುತ್ತಿದ್ದಂತೆಯೇ ಉಪ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಪುತ್ತುಪ್ಪಲ್ಲಿ ಕ್ಷೇತ್ರದ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಅಗತ್ಯವಿತ್ತು. ಪಕ್ಷದ ನಾಯಕ ಉಮ್ಮನ್ ಚಾಂಡಿ 1970ರಿಂದ ಯಾವುದೇ ಅಡೆ ತಡೆ ಇಲ್ಲದೇ ಕ್ಷೇತ್ರದಿಂದ ಆರಿಸಿ ಬರುತ್ತಿದ್ದರು. ಅವರ ನಿಧನದ ಬಳಿಕ ತೆರವಾದ ಕ್ಷೇತ್ರದಲ್ಲಿ ಅವರ ಪುತ್ರ ಗೆದ್ದು ಬಂದಿದ್ದು, ಕ್ಷೇತ್ರ ಕಾಂಗ್ರೆಸ್ ವಶವಾಗಿದೆ.
ಕ್ಷೇತ್ರದಲ್ಲಿನ ಒಟ್ಟು ಮತದಾರರ ಸಂಖ್ಯೆ ಸುಮಾರು 1.76 ಲಕ್ಷ. ಸೆಪ್ಟೆಂಬರ್ 5ರಂದು ಉಪ ಚುನಾವಣೆಗೆ 182 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಯುಡಿಎಫ್ ಮತ್ತು ಎಲ್‌ಡಿಎಫ್ ನಡುವೆ ಉಪ ಚುನಾವಣೆಯಲ್ಲಿ ನೇರ ಸ್ಪರ್ಧೆ ಇದೆ ಮೊದಲೇ ಅಂದಾಜಿಸಲಾಗಿತ್ತು.
ಸಿಪಿಐ(ಎಂ) ಜೈಕ್ ಸಿ. ಥಾಮಸ್ 2016, 2021ರ ಚುನಾವಣೆಯಲ್ಲಿ ಉಮ್ಮನ್ ಚಾಂಡಿ ವಿರುದ್ಧ ಕಣಕ್ಕಿಳಿದು ಸೋಲು ಕಂಡಿದ್ದರು. ಚಾಂಡಿ ಉಮ್ಮನ್ ವಿರುದ್ಧ ಗೆದ್ದು ಚುನಾವಣಾ ಸೇಡು ತೀರಿಸಿಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಕಳೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ 10ರಷ್ಟು ಮತ ಪಡೆಯಲು ವಿಫಲವಾಗಿದ್ದ ಬಿಜೆಪಿ ಸಾಂಕೇತಿಕವಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications