ಪುತ್ತುಪ್ಪಲ್ಲಿ ಉಪ ಚುನಾವಣೆ; ಕಾಂಗ್ರೆಸ್ ಗೆಲುವು
ತಿರುವನಂತಪುರ, ಸೆಪ್ಟೆಂಬರ್ 08; ಶುಕ್ರವಾರ ಮಧ್ಯಾಹ್ನದ ಮಾಹಿತಿಯಂತೆ ಪುತ್ತುಪ್ಪಲ್ಲಿ ವಿಧಾನಸಭಾಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಉಮ್ಮನ್ ಚಾಂಡಿ ಪುತ್ರ ಚಾಂಡಿ ಉಮ್ಮನ್ ಗೆಲುವು ಸಾಧಿಸಿದ್ದಾರೆ.
ಕೇರಳದ ಕೊಟ್ಟಾಯಂ ಜಿಲ್ಲೆಯ ಪುತ್ತುಪ್ಪಲ್ಲಿ ವಿಧಾನಸಭಾಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಆರಂಭವಾಗಿದೆ. ಕೇರಳದ ಮಾಜಿ ಮುಖ್ಯಮಂತ್ರಿ ದಿ. ಉಮ್ಮನ್ ಚಾಂಡಿ ಪ್ರತಿನಿಧಿಸುತ್ತಿದ್ದ ಕ್ಷೇತ್ರವಿದು. ಉಮ್ಮನ್ ಚಾಂಡಿ ಉತ್ತರಾಧಿಕಾರಿ ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಶುಕ್ರವಾರ ಬೆಳಗ್ಗೆ 8 ಗಂಟೆಗೆ ಪುತ್ತುಪ್ಪಲ್ಲಿ ಉಪ ಚುನಾವಣಾ ಮತ ಎಣಿಕೆ ಆರಂಭವಾಗಿದೆ. ಜುಲೈ 18ರಂದು ಉಮ್ಮನ್ ಚಾಂಡಿ ನಿಧನದ ಬಳಿಕ ತೆರವಾದ ಸ್ಥಾನಕ್ಕೆ ಸೆಪ್ಟೆಂಬರ್ 5ರಂದು ಉಪ ಚುನಾವಣೆ ನಡೆದಿತ್ತು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿಯಾಗಿ ಉಮ್ಮನ್ ಚಾಂಡಿ ಪುತ್ರ ಚಾಂಡಿ ಉಮ್ಮನ್ ಕಣದಲ್ಲಿದ್ದಾರೆ.

ಚುನಾವಣಾ ಆಯೋಗ ಉಪ ಚುನಾವಣೆಯ ಪ್ರಾಥಮಿಕ ಹಂತದ ಟ್ರೆಂಡ್ ನೀಡಿದೆ. ಆಯೋಗದ ಮಾಹಿತಿ ಪ್ರಕಾರ ಚಾಂಡಿ ಉಮ್ಮನ್ 2,800 ಮತಗಳ ಮುನ್ನಡೆ ಸಾಧಿಸಿದ್ದಾರೆ. ಮಧ್ಯಾಹ್ನ 12 ಗಂಟೆಯ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಲಭ್ಯವಾಗುವ ನಿರೀಕ್ಷೆ ಇದೆ.
ಪುತ್ತುಪ್ಪಲ್ಲಿ ಕ್ಷೇತ್ರದಲ್ಲಿ ಡಿವೈಎಫ್‌ಐನ ಮುಖಂಡ ಜೈಕ್ ಸಿ. ಥಾಮಸ್ ವಿರೋಧ ಪಕ್ಷವಾದ ಎಲ್‌ಡಿಎಫ್ ಅಭ್ಯರ್ಥಿ. ಬಿಜೆಪಿಯಿಂದ ಜಿಲ್ಲಾ ಅಧ್ಯಕ್ಷ ಜಿ. ಲಿಂಜಿನ್‌ಲಾಲ್ ಕಣದಲ್ಲಿದ್ದಾರೆ. ಸುಮಾರು 5 ದಶಕಗಳ ಕಾಲ ಉಮ್ಮನ್ ಚಾಂಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅವರ ನಂತರ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ.
ಕೇರಳದಲ್ಲಿ ಪ್ರತಿಬಾರಿ ವಿಧಾನಸಭೆ ಚುನಾವಣೆ ನಡೆದಾಗ ಎಲ್‌ಡಿಎಫ್ ಅಥವ ಯುಡಿಎಫ್ ಅಧಿಕಾರ ಹಿಡಿಯುತ್ತಿದ್ದವು. ಆದರೆ ಕಳೆದ ಚುನಾವಣೆಯಲ್ಲಿ ಈ ಸಂಪ್ರದಾಯವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಎಲ್‌ಡಿಎಫ್ ಮುರಿದು 2ನೇ ಬಾರಿಗೆ ಅಧಿಕಾರ ಹಿಡಿಯಿತು.
140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿ ಎಲ್‌ಡಿಎಫ್ 99, ಯುಡಿಎಫ್ 40 ಸ್ಥಾನಗಳನ್ನು ಹೊಂದಿವೆ. ಖಾಲಿ ಇರುವ ಪುತ್ತುಪ್ಪಲ್ಲಿ ಕ್ಷೇತ್ರದ ಶಾಸಕರು ಯಾರು? ಎಂಬುದು ಇಂದು ತಿಳಿಯಲಿದೆ.











Click it and Unblock the Notifications