Samit Dravid: ಬೆಂಗಳೂರು ತಂಡಕ್ಕೆ ಸಮಿತ್ ಆಸರೆ, ರಾಹುಲ್ ದ್ರಾವಿಡ್ ಪುತ್ರನ ಬಗ್ಗೆ ನೆಟ್ಟಿಗರು ಹೇಳಿದ್ದೇನು?
Samit Dravid: ಭಾರತೀಯ ಕ್ರಿಕೆಟ್‌ನ ದಿಗ್ಗಜ, ಕನ್ನಡಿಗ ರಾಹುಲ್ ದ್ರಾವಿಡ್ ಅವರ ಮಗ ಮಹಾರಾಜ ಟ್ರೋಫಿಯಲ್ಲಿ ಆಕ್ರಮಣಕಾರಿ ಆಟ ಆಡಿ ಗಮನ ಸೆಳೆದಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇವರದ್ದೇ ಚರ್ಚೆ ಜೋರಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಸಮಿತ್ ದ್ರಾವಿಡ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ವಿರುದ್ಧ 2 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಪ್ಲೇಆಫ್ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿಕೊಂಡಿದೆ. ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಹುಬ್ಬಳ್ಳಿ ಟೈಗರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಜವಾಬ್ದಾರಿಯುತ ಆಟವಾಡಿದ ದ್ರಾವಿಡ್ ಪುತ್ರ
ಬೆಂಗಳೂರು ಬ್ಲಾಸ್ಟರ್ಸ್ ತಂಡದ ಆರಂಭದಲ್ಲಿ ಕೇವಲ 11 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರು. ಈ ಸಮಯದಲ್ಲಿ ಕ್ರೀಸ್‌ಗೆ ಬಂದ ಭಾರತದ ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ ಅವರ ಪುತ್ರ, 20 ವರ್ಷದ ಸಮಿತ್ ದ್ರಾವಿಡ್ ಜವಾಬ್ದಾರಿಯುತ ಆಟವಾಡಿದರು. 139.13 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಸ್ ಬಿಸಿದ ಅವರು 23 ಎಸೆತಗಳಲ್ಲಿ 6 ಆಕರ್ಷಕ ಬೌಂಡರಿಗಳ ನೆರವಿನಿಂದ 32 ರನ್ ಗಳಿಸಿ ನೆರವಾದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇವರದ್ದೇ ಸದ್ದು ಜೋರಾಗಿದೆ.
ಬೆಂಗಳೂರು ಪರ ಯಾರು ಎಷ್ಟು ರನ್ ಸಿಡಿಸಿದರು?
ಉಳಿದಂತೆ ಆರಂಭಿಕ ಆಟಗಾರ ರೋಹನ್ ಪಾಟೀಲ್ ಅವರು ಕೇವಲ 36 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್‌ಗಳ ಸಹಿತ ಬರೊಬ್ಬರಿ 64 ರನ್ ಗಳಿಸಿ ಮಿಂಚಿದರು. ಪ್ರವೀಣ್ ದುಬೆ 51(28), ಶಿವರಾಜ್ ಅಜೇಯ 23(7) ರನ್ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ನಿಗದಿತ 20 ಓವರ್‌ಗಳಲ್ಲಿ ಬೆಂಗಳೂರು ತಂಡವು 7 ವಿಕೆಟ್ ನಷ್ಟಕ್ಕೆ 203 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಹುಬ್ಬಳ್ಳಿ ಪರ ವೈಭವ ಶರ್ಮಾ 3 ವಿಕೆಟ್ ಕಿತ್ತು ಮಿಂಚಿದರೆ, ಅಭಿಷೇಕ್ 2 ವಿಕೆಟ್, ಹಾರ್ದಿಕ್ ರಾಜ್ 1 ವಿಕೆಟ್ ಕಿತ್ತರು.
ಹುಬ್ಬಳ್ಳಿ ತಂಡದಿಂದ ಉತ್ತಮ ಹೋರಾಟ
ಬಳಿಕ 204 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಕ. ಆದರೆ ಮಧ್ಯಮ ಹಾಗೂ ಕೆಳ ಕ್ರಮಾಂಕದಲ್ಲಿ ಬಂದ ಬ್ಯಾಟರ್‌ಗಳು ಆಕ್ರಮಣಕಾರಿ ಆಟ ಆಡಿದರು. ಆದರೂ ಕೊನೆಗೂ ಎರಡು ರನ್‌ಗಳ ಅಂತರದಿಂದ ಸೋಲನುಭವಿಸಿತು. ಹುಬ್ಬಳ್ಳಿ ಪರ ಮನ್ವಂತ್ ಕುಮಾರ್ ಕೇವಲ 22 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ರ್‌ಗಳ ಸಹಿತ ಬರೋಬ್ಬರಿ 60 ರನ್‌ಗಳ ಕೊಡುಗೆ ನೀಡಿದರು. ಈ ಮೂಲಕ ತಂಡದ ಪರ ಅತೀ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಉಳಿದಂತೆ ಶಿವಕುಮಾರ್ ರಕ್ಷಿತ್ 41(30), ಅನೀಶ್ವರ್ ಗೌತಮ್ 34(23), ಅಭಿನವ್ ಮನೋಹರ್ 21 ರನ್ ಗಳಿಸಿ ತಂಡವನ್ನು ಗೆಲುವಿನ ಸಮೀಪದತ್ತ ಕೊಂಡೊಯ್ದರು. ಕೊನೆಯ ಓವರ್‌ವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಹುಬ್ಬಳ್ಳಿ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಲಷ್ಟೇ ಶಕ್ತವಾಗಿ, ಕೇವಲ 2 ರನ್‌ಗಳ ಅಂತರದಿಂದ ಸೋಲನುಭವಿಸಿತು. ಬೆಂಗಳೂರು ಬ್ಲಾಸ್ಟರ್ಸ್ ಪರ ನಿಶ್ಚಿತ್ ರಾವ್ 3 ವಿಕೆಟ್ ಹಾಗೂ ವಿದ್ವತ್ ಕಾವೇರಪ್ಪ 2 ವಿಕೆಟ್ ಪಡೆದು ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಬೆಂಗಳೂರು ಬ್ಲಾಸ್ಟರ್ಸ್ ಪರ ನಿಶ್ಚಿತ್ ರಾವ್ 3 ವಿಕೆಟ್, ವಿದ್ವತ್ ಕಾವೇರಪ್ಪ 2 ವಿಕೆಟ್, ಕೆ ಶಶಿಕುಮಾರ್ 1 ವಿಕೆಟ್ ಕಿತ್ತು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಒಟ್ಟಿನಲ್ಲಿ ಈ ಪಂದ್ಯದಲ್ಲಿ ಬೆಂಗಳೂರಿನ ಗೆಲುವಿನಷ್ಟೇ ರಾಹುಲ್ ದ್ರಾವಿಡ್ ಪುತ್ರ ಸಮಿತ್ ಅವರ ಆಟವೂ ಕ್ರಿಕೆಟ್ ವಲಯದಲ್ಲಿ ಸಖತ್ ಸದ್ದು ಮಾಡುತ್ತಿದೆ. ಹಲವು ನೆಟ್ಟಿಗರು ಇವರನ್ನು ಜೂನಿಯರ್ ರಾಹುಲ್ ದ್ರಾವಿಡ್ ಅಂತಲೂ ಕರೆಯಲು ಶುರು ಮಾಡಿದ್ದಾರೆ.












Click it and Unblock the Notifications