Weekly Horoscope: ಹಣದ ವಿಷಯದಲ್ಲಿ ಈ ರಾಶಿಯವರದ್ದೇ ಅದೃಷ್ಟ, ವೃತ್ತಿಜೀವನದಲ್ಲಿ ಯಶಸ್ಸು, ಸಿಗುವುದು ಹೊಸ ಅವಕಾಶ

ಜ್ಯೋತಿಷ್ಯದ ಪ್ರಕಾರ, ಹೊಸ ತಿಂಗಳ ಮೊದಲ ವಾರ ನಿಮಗೆ ಹೇಗಿರುತ್ತದೆ? ನಿಮ್ಮ ವೃತ್ತಿ, ಆರೋಗ್ಯ, ಉದ್ಯೋಗ ಮತ್ತು ಪ್ರೇಮ ಜೀವನ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಜುಲೈ ಮೊದಲ ವಾರದ ಸಾಪ್ತಾಹಿಕ ಜಾತಕ ಫಲ ಹೇಗಿದೆ ಎಂದು ನೋಡೋಣ.

ಮೇಷ ರಾಶಿ (Aries):

ಮೇಷ ರಾಶಿಯವರು ಈ ವಾರ ಎಚ್ಚರಿಕೆಯಿಂದ ಇರಬೇಕಾಗುತ್ತದೆ.ಈ ಅವಧಿಯಲ್ಲಿ, ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಕೆಲಸ ಮತ್ತು ವ್ಯವಹಾರದಲ್ಲಿ ಪಡುವ ಕಠಿಣ ಪರಿಶ್ರಮದಿಂದ ಉತ್ತಮ ಲಾಭಗಳನ್ನು ಪಡೆಯುವಿರಿ. ಈ ವಾರ ನಿಮ್ಮ ಮಾತಿನ ಮೇಲೆ ನಿಯಂತ್ರಣ ಇರಲಿ. ನಿಮ್ಮ ಮಾತಿನಿಂದ ಅನೇಕ ಜನರಿಗೆ ನೋವುಂಟು ಮಾಡುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ.

Weekly Horoscope

ವೃಷಭ ರಾಶಿ (Taurus):

ಜುಲೈ 6, 2026 ರಿಂದ ಜುಲೈ 12, 2026 ರವರೆಗಿನ ಅವಧಿಯು ವೃಷಭ ರಾಶಿಯವರಿಗೆ ಶುಭವಾಗಿರುತ್ತದೆ. ಈ ಅವಧಿಯಲ್ಲಿ, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಸುಧಾರಣೆಯಾಗುವುದು. ಕೆಲವು ಸಕಾರಾತ್ಮಕ ಬದಲಾವಣೆಗಳಾಗುವುದು. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಅಲ್ಲದೆ, ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿಯ ಲಕ್ಷಣಗಳಿವೆ.

ಮಿಥುನ ರಾಶಿ (Gemini):

ಈ ವಾರವು ಮಿಥುನ ರಾಶಿಯವರಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುವ ಸಮಯವಾಗಿರುತ್ತದೆ. ಈ ಅವಧಿಯಲ್ಲಿ ಯಾವುದೇ ಅಹಂಕಾರವನ್ನು ಇಟ್ಟುಕೊಳ್ಳಬೇಡಿ. ಕೆಟ್ಟ ಸ್ನೇಹಿತರ ಸಹವಾಸದಿಂದ ದೂರವಿರಿ. ವೃತ್ತಿಜೀವನದ ಬಗ್ಗೆ ಕುಟುಂಬದ ಹಿರಿಯರ ಸಲಹೆಯನ್ನು ಪರಿಗಣಿಸಿ. ವಾರದ ಅಂತ್ಯದ ವೇಳೆಗೆ ಆರ್ಥಿಕ ಸಂಕಷ್ಟ ಎದುರಾಗಬಹುದು. ಹಣವನ್ನು ಬುದ್ಧಿವಂತಿಕೆಯಿಂದ ಬಳಸಿ.

ಬಾಬಾ ವಾಂಗಾ ಭವಿಷ್ಯ ವೈರಲ್! ಜುಲೈ-ಡಿಸೆಂಬರ್‌ನಲ್ಲಿ ಈ 5 ರಾಶಿಯವರಿಗೆ ಕೋಟಿ ಸಂಪತ್ತಿನ ಯೋಗವಂತೆ!
ಬಾಬಾ ವಾಂಗಾ ಭವಿಷ್ಯ ವೈರಲ್! ಜುಲೈ-ಡಿಸೆಂಬರ್‌ನಲ್ಲಿ ಈ 5 ರಾಶಿಯವರಿಗೆ ಕೋಟಿ ಸಂಪತ್ತಿನ ಯೋಗವಂತೆ!

ಕರ್ಕಾಟಕ ರಾಶಿ (cancer):

ಕರ್ಕ ರಾಶಿಯವರಿಗೆ ಹೊಸ ವಾರದ ಆರಂಭವು ಶುಭಕರವಾಗಿರುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಲಕ್ಷಣಗಳು ಕಂಡುಬರುತ್ತವೆ. ಈ ಅವಧಿಯಲ್ಲಿ, ಕೆಲವು ಪ್ರಭಾವಿ ಜನರನ್ನು ಭೇಟಿಯಾಗುವಿರಿ. ಕೆಲವು ಹೊಸ ಸಂಪರ್ಕಗಳು ಏರ್ಪಡುತ್ತವೆ. ಮೊದಲು ಪ್ರಮುಖ ಕೆಲಸವನ್ನು ಮಾಡಿ ಮುಗಿಸಿಕೊಳ್ಳಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಸಿಂಹ ರಾಶಿ (Leo):

ಸಿಂಹ ರಾಶಿಯವರಿಗೆ ಹೊಸ ವಾರ ಸ್ವಲ್ಪ ಸವಾಲಿನಿಂದ ಕೂಡಿರುತ್ತದೆ. ಈ ಅವಧಿಯಲ್ಲಿ ವ್ಯವಹಾರ ವಿಷಯಗಳಲ್ಲಿ ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಯಾವುದೇ ರೀತಿಯ ವಾದಗಳಿಂದ ದೂರವಿರಿ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಹೆಚ್ಚುತ್ತಿರುವ ಕೆಲಸದ ಒತ್ತಡದಿಂದಾಗಿ ಮಾನಸಿಕ ಒತ್ತಡವನ್ನು ಅನುಭವಿಸಬಹುದು.

ಈ ರಾಶಿಯವರಿಗೆ ಮಹಾಲಕ್ಷ್ಮೀ ಯೋಗ: ಒಲಿದು ಬರುವುದು ಸಿರಿ ಸಂಪತ್ತು, ಎಲ್ಲಾ ಸಮಸ್ಯೆಗಳಿಗೂ ಸಿಗುವುದು ಪರಿಹಾರ
ಈ ರಾಶಿಯವರಿಗೆ ಮಹಾಲಕ್ಷ್ಮೀ ಯೋಗ: ಒಲಿದು ಬರುವುದು ಸಿರಿ ಸಂಪತ್ತು, ಎಲ್ಲಾ ಸಮಸ್ಯೆಗಳಿಗೂ ಸಿಗುವುದು ಪರಿಹಾರ

ಕನ್ಯಾ ರಾಶಿ (Virgo):

ಜುಲೈ 6 ರಿಂದ 12 ರವರೆಗಿನ ಅವಧಿಯು ಕನ್ಯಾ ರಾಶಿಯವರಿಗೆ ಶುಭಕರವಾಗಿರುತ್ತದೆ. ಆತ್ಮವಿಶ್ವಾಸ ಹೆಚ್ಚುವುದು. ಈ ಅವಧಿಯಲ್ಲಿ ಯಾವುದೇ ಆತುರದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ವ್ಯವಹಾರದ ವಿಸ್ತರಣೆಯಿಂದಾಗಿ ಲಾಭವಾಗುವುದು. ಸ್ನೇಹಿತರ ಸಹಾಯದಿಂದ, ನಿಮ್ಮ ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದು.

ತುಲಾ ರಾಶಿ (Libra):

ಜ್ಯೋತಿಷ್ಯದ ಪ್ರಕಾರ, ತುಲಾ ರಾಶಿಯವರಿಗೆ ಈ ವಾರ ತಮ್ಮ ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು. ಕೆಲಸ ಕಾರ್ಯಗಳಲ್ಲಿ ಹಿರಿಯರಿಂದ ಬೆಂಬಲ ಸಿಗುತ್ತದೆ. ಆರ್ಥಿಕ ಲಾಭದ ಸೂಚನೆಗಳಿವೆ. ಪ್ರೇಮ ಸಂಬಂಧಗಳಲ್ಲಿ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಆರೋಗ್ಯವು ಉತ್ತಮವಾಗಿರುವುದು. ಆದರೆ ಪ್ರಯಾಣ ಮಾಡುವಾಗ ಜಾಗರೂಕರಾಗಿರಿ.

ವೃಶ್ಚಿಕ ರಾಶಿ (Scorpio):

ಜ್ಯೋತಿಷ್ಯದ ಪ್ರಕಾರ, ವೃಶ್ಚಿಕ ರಾಶಿಯವರು ಈ ವಾರ ತಾಳ್ಮೆಯಿಂದ ಕೆಲಸ ಕಾರ್ಯಗಳನ್ನು ಪೂರೈಸುವಿರಿ. ವ್ಯವಹಾರದಲ್ಲಿ ಹೊಸ ಅವಕಾಶಗಳು ಉದ್ಭವಿಸಬಹುದು. ಖರ್ಚುಗಳನ್ನು ನಿಯಂತ್ರಿಸಿ. ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗದಂತೆ ಎಚ್ಚರವಹಿಸಿ. ತಲೆನೋವು ಅಥವಾ ಒತ್ತಡದಿಂದ ಮಾನಸಿಕ ಕಿರಿ ಕಿರಿ ಉಂಟಾಗುವುದು.

ಧನು ರಾಶಿ (Sagitarius):

ಜ್ಯೋತಿಷ್ಯದ ಪ್ರಕಾರ, ಈ ವಾರ ಧನು ರಾಶಿಯವರಿಗೆ ಅದೃಷ್ಟದ ವಾರವಾಗಿರುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಯಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಪ್ರೇಮ ಜೀವನದಲ್ಲಿ ಸಂಬಂಧಗಳು ಬಲಗೊಳ್ಳುತ್ತವೆ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಮನಸ್ಸಿನ ಸಂತೋಷ ನೆಮ್ಮದಿ ಹೆಚ್ಚಾಗುವುದು. ಆರೋಗ್ಯವು ಉತ್ತಮವಾಗಿರಲಿದೆ.

ಮಕರ ರಾಶಿ (Capricorn):

ಜ್ಯೋತಿಷ್ಯದ ಪ್ರಕಾರ, ಮಕರ ರಾಶಿಯವರಿಗೆ ಈ ವಾರ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲ ಸಿಗುತ್ತದೆ. ಮೇಲಧಿಕಾರಿಗಳಿಂದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಹಣಕಾಸಿನ ವಹಿವಾಟುಗಳನ್ನು ಚಿಂತನಶೀಲವಾಗಿ ಮಾಡಿ. ಕುಟುಂಬದೊಂದಿಗೆ ಸಮಯ ಕಳೆಯಿರಿ. ಆರೋಗ್ಯಕ್ಕೆ ಸಮತೋಲಿತ ಆಹಾರ ಅತ್ಯಗತ್ಯ.

ಕುಂಭ ರಾಶಿ (Sagitarius):

ಈ ವಾರ ಕುಂಭ ರಾಶಿಯವರಿಗೆ ಹೊಸ ಅವಕಾಶಗಳು ಒಲಿದು ಬರುವುದು. ವ್ಯವಹಾರ ವಿಸ್ತರಣೆಗೆ ಅವಕಾಶಗಳಿವೆ. ಆರ್ಥಿಕ ಲಾಭದ ಸಾಧ್ಯತೆಗಳಿವೆ. ಪ್ರೇಮ ಸಂಬಂಧಗಳಲ್ಲಿ ನಂಬಿಕೆ ಹೆಚ್ಚಾಗುತ್ತದೆ. ಮದುವೆ ಮಾತುಕತೆ ಮುಂದುವರೆಸುವ ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆಗಳು ದೂರವಾಗುವುದು.

ಮೀನ ರಾಶಿ (Pisces):

ಮೀನ ರಾಶಿಯವರಿಗೆ ಈ ವಾರ ಸಕಾರಾತ್ಮಕವಾಗಿರುತ್ತದೆ. ವೃತ್ತಿಜೀವನದಲ್ಲಿ ಪ್ರಗತಿ ಮತ್ತು ಹೊಸ ಅವಕಾಶಗಳು ಸಿಗಬಹುದು. ಆರ್ಥಿಕ ಲಾಭವಾಗುವುದು. ಕೆಲಸದಲಿ ಆತ್ಮವಿಶ್ವಾಸ ಹೆಚ್ಚುವುದು. ಪ್ರೇಮ ಜೀವನವು ಸಂತೋಷದಿಂದ ಕೂಡಿರುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+