ಕೇರಳದಲ್ಲಿ ಕೊರೊನಾ ವೈರಸ್ ನಿಬಂಧನೆಗಿಲ್ಲ ಕವಡೆ ಕಾಸಿನ ಕಿಮ್ಮತ್ತು

ತಿರುವನಂತಪುರಂ, ಮಾರ್ಚ್.21: ಕೊರೊನಾ ವೈರಸ್ ಹರಡುತ್ತೆ. ಜನರು ಮನೆಗಳಿಂದ ಹೊರಗೆ ಬರಬೇಕು. ಗುಂಪು ಗುಂಪಾಗಿ ಸೇರಬೇಡಿ. ಕನಿಷ್ಠ ಅಂತರವನ್ನು ಕಾಯ್ದುಕೊಳ್ಳಿ ಎಂದು ಕೇಂದ್ರ ಸರ್ಕಾರವು ಈಗಾಗಲೇ ಹಲವು ಮಾರ್ಗಸೂಚಿಗಳನ್ನು ನೀಡಿದೆ.

ಕೊರೊನಾ ವೈರಸ್ ಹರಡದಂತೆ ನೀಡಿರುವ ನಿಯಮಗಳಿಗೆ ಕೇರಳದಲ್ಲಿ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರವು ಶತಪ್ರಯತ್ನ ಮಾಡುತ್ತಿದ್ದರೆ, ಜನರು ಮಾತ್ರ ತಮ್ಮ ಹಠವನ್ನು ಮುಂದುವರಿಸಿದ್ದಾರೆ.

Coronavirus: Kerala Peoples Break Central Government Rules

ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ಶ್ರೀಕೃಷ್ಣ ದೇವಸ್ಥಾನದ ವತಿಯಿಂದ ಆಯೋಜಿಸಿದ ಆರತ್ತು ಎಂಬ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದಾರೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಮಾರ್ಗಸೂಚಿ ಹೊರಡಿಸಿ 48 ಗಂಟೆಗಳಲ್ಲೇ ಈ ನಿಯಮವನ್ನು ಭಕ್ತರು ಉಲ್ಲಂಘಿಸಿದ್ದಾರೆ.

ಕೇರಳದಲ್ಲಿ 40 ಮಂದಿಗೆ ಕೊರೊನಾ ವೈರಸ್:
ಕೊರೊನಾ ವೈರಸ್ ಚೀನಾದಲ್ಲಿ ಆರಂಭವಾದಾಗಲೇ ಮೊದಲಿಗೆ ಕೇರಳದಲ್ಲಿ ನಾಲ್ಕು ಪ್ರಕರಣಗಳು ಪತ್ತೆಯಾಗಿದ್ದವು. ನಂತರದಲ್ಲಿ ನಾಲ್ವರು ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಇದೀಗ ಮತ್ತೆ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಏರಿಕೆಯಾಗಿದ್ದು, 40 ಮಂದಿ ಕೊರೊನಾ ವೈರಸ್ ಸೋಂಕಿತರು ಇದ್ದಾರೆ ಎಂದು ತಿಳಿದು ಬಂದಿದೆ. ಇದರ ನಡುವೆ ಶುಕ್ರವಾರ ತಿರುವನಂತಪುರಂನಲ್ಲಿ ನಡೆದ ಆರತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿ ನಿಯಮ ಉಲ್ಲಂಘಿಸಿದವರ ವಿರುದ್ಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+