Puthuppally By Election Results; ಕಾಂಗ್ರೆಸ್‌ಗೆ ಮುನ್ನಡೆ
ತಿರುವನಂತಪುರ, ಸೆಪ್ಟೆಂಬರ್ 08; ಪುತ್ತುಪ್ಪಲ್ಲಿ ವಿಧಾನಸಭಾಕ್ಷೇತ್ರದ ಉಪಚುನಾವಣೆ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಉಮ್ಮನ್ ಚಾಂಡಿ ಪುತ್ರ ಚಾಂಡಿ ಉಮ್ಮನ್ ಗೆಲುವು ಸಾಧಿಸಿದ್ದಾರೆ.
ಕೇರಳದ ಪುತ್ತುಪ್ಪಲ್ಲಿ ವಿಧಾನಸಭಾಕ್ಷೇತ್ರದ ಉಪಚುನಾವಣೆ ಮತ ಎಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್-ಯುಡಿಎಫ್ ಅಭ್ಯರ್ಥಿಯಾದ ಉಮ್ಮನ್ ಚಾಂಡಿ ಪುತ್ರ ಚಾಂಡಿ ಉಮ್ಮನ್ ಗೆಲುವಿನ ವಿಶ್ವಾಸದಲ್ಲಿದ್ದಾರೆ.
ಕೊಟ್ಟಾಯಂ ಜಿಲ್ಲೆಯ ಪುತ್ತುಪ್ಪಲ್ಲಿ ವಿಧಾನಸಭಾಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಶುಕ್ರವಾರ ನಡೆಯುತ್ತಿದೆ. ಕೇರಳದ ಮಾಜಿ ಮುಖ್ಯಮಂತ್ರಿ ದಿ. ಉಮ್ಮನ್ ಚಾಂಡಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಇದು. ಜುಲೈ 18ರಂದು ಉಮ್ಮನ್ ಚಾಂಡಿ ನಿಧನದ ಬಳಿಕ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆದಿದೆ.

8ನೇ ಸುತ್ತಿನ ಮತ ಎಣಿಕೆ ಬಳಿಕ ಕಾಂಗ್ರೆಸ್- ಯುಡಿಎಫ್ ಅಭ್ಯರ್ಥಿ ಚಾಂಡಿ ಉಮ್ಮನ್ ಎಲ್‌ಡಿಎಫ್ ಅಭ್ಯರ್ಥಿ ಜೈಕ್ ಸಿ. ಥಾಮಸ್ ವಿರುದ್ಧ 22,580 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿ ಜಿಲ್ಲಾ ಅಧ್ಯಕ್ಷ ಜಿ. ಲಿಂಜಿನ್‌ಲಾಲ್ ಕಣಕ್ಕಿಳಿಸಿದೆ.
ಕೇರಳದ ಮಾಜಿ ಮುಖ್ಯಮಂತ್ರಿ ದಿ. ಉಮ್ಮನ್ ಚಾಂಡಿ ಸುಮಾರು 5 ದಶಕಗಳ ಕಾಲ ಪುತ್ತುಪ್ಪಲ್ಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅವರ ನಂತರ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆ ಇದೆ. ಚುನಾವಣೆಯಲ್ಲಿ ಯುಡಿಎಫ್ ಮತ್ತು ಎಲ್‌ಡಿಎಫ್ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ಇದೆ.
140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿ ಎಲ್‌ಡಿಎಫ್ 99, ಯುಡಿಎಫ್ 40 ಸ್ಥಾನಗಳನ್ನು ಹೊಂದಿವೆ. ಖಾಲಿ ಇರುವ ಪುತ್ತುಪ್ಪಲ್ಲಿ ಕ್ಷೇತ್ರದ ಶಾಸಕರು ಯಾರು? ಎಂಬುದು ಇಂದು ತಿಳಿಯಲಿದೆ.
ಪುತ್ತುಪ್ಪಲ್ಲಿ ವಿಧಾನಸಭಾಕ್ಷೇತ್ರದ ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ಚಾಂಡಿ ಉಮ್ಮನ್ ವ್ಯಕ್ತಪಡಿಸಿದ್ದಾರೆ. ಆದರೆ ಗೆಲುವಿನ ಅಂತರ ಎಷ್ಟಿರುತ್ತದೆ? ಎಂದು ಹೇಳಲು ಅವರು ನಿರಾಕರಿಸಿದ್ದಾರೆ.
11ನೇ ಸುತ್ತಿನ ಎಣಿಕೆ ಬಳಿಕ ಅಭ್ಯರ್ಥಿಗಳು ಪಡೆದ ಮತಗಳು
* ಕಾಂಗ್ರೆಸ್‌ನ ಚಾಂಡಿ ಉಮ್ಮನ್ 66,112
* ಸಿಪಿಐ (ಎಂ) ಜೈಕ್ ಸಿ. ಥಾಮಸ್ 35,083
* ಬಿಜೆಪಿಯ ಲಿಂಜಿನ್ ಲಾಲ್ 5,537
* ಆಮ್ ಆದ್ಮಿ ಪಕ್ಷದ ಲೂಕ್ ಥಾಮಸ್ 737
* ಪಕ್ಷೇತರ ಸಂತೋಷ್ ಪುಲಿಕಲ್ 70
* ಪಕ್ಷೇತರ ಶಾಜಿ 51
* ಪಕ್ಷೇತರ ಪಿಕೆ ದೇವದಾಸ್ 49












Click it and Unblock the Notifications