ಶಿವಮೊಗ್ಗ : ಇಂಟರ್‌ಸಿಟಿ ರೈಲು ವೇಳಾಪಟ್ಟಿ, ದರ ಬದಲಾವಣೆ

Posted By: Gururaj
Subscribe to Oneindia Kannada

ಶಿವಮೊಗ್ಗ, ನವೆಂಬರ್ 5 : ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ರೈಲನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ರೈಲನ್ನು ಸೂಪರ್ ಫಾಸ್ಟ್ ಆಗಿ ಪರಿವರ್ತಿಸಲಾಗಿದ್ದು, ದರ, ವೇಳಾಪಟ್ಟಿ ಬದಲಾವಣೆಯಾಗಿದೆ.

ಶಿವಮೊಗ್ಗ-ಬೆಂಗಳೂರು, ಬೆಂಗಳೂರು-ಶಿವಮೊಗ್ಗ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ಈ ತನಕ 95 ರೂ. ಇದ್ದ ದರವನ್ನು 15 ರೂ. ಹೆಚ್ಚಳ ಮಾಡಲಾಗಿದೆ.

ಇನ್ಮುಂದೆ ವೇಗವಾಗಿ ಓಡಲಿವೆ ಭಾರತೀಯ ರೈಲುಗಳು

 Intercity train timings, fare changed

ನವೆಂಬರ್ 1ರಿಂದ ಜಾರಿಗೆ ಬರುವಂತೆ ದೇಶದ 600 ರೈಲುಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ನೈಋತ್ಯ ವಲಯದ ಹಲವು ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ.

ಮತ್ತಷ್ಟು ಅಭಿವೃದ್ಧಿಯಾಗಲಿದೆ ರೈಲ್ವೆ ಇಲಾಖೆ ವೆಬ್ ಸೈಟ್

ಪಿಯೂಷ್ ಗೋಯೆಲ್ ಅವರು ರೈಲ್ವೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ರೈಲುಗಳ ವೇಗವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದರ ಭಾಗವಾಗಿಯೇ ಅಧಿಕಾರಿಗಳು ದೇಶಾದ್ಯಂತ ಹಲವು ರೈಲುಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಿದ್ದಾರೆ.

ರೈಲಿನ ವೇಳಾಪಟ್ಟಿ

* ಪ್ರತಿದಿನ ಬೆಳಗ್ಗೆ 6.30ಕ್ಕೆ ಶಿವಮೊಗ್ಗದಿಂದ ಹೊರಡುತ್ತಿದ್ದ ರೈಲು 6.40ಕ್ಕೆ ಹೊರಡಲಿದೆ

* 6.40ಕ್ಕೆ ಹೊರಡುವ ರೈಲು 11.35ಕ್ಕೆ ಬೆಂಗಳೂರು ತಲುಪಲಿದೆ

* ಬೆಂಗಳೂರಿನಿಂದ ಪ್ರತಿದಿನ ಮಧ್ಯಾಹ್ನ 3.30ಕ್ಕೆ ಹೊರಡುವ ರೈಲು, 3 ಗಂಟೆಗೆ ಹೊರಡಲಿದೆ

* ಶಿವಮೊಗ್ಗ ನಗರಕ್ಕೆ ರಾತ್ರಿ 8ಗಂಟೆಗೆ ತಲುಪಲಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shivamogga-Bengaluru intercity train timings, fare changed.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ