ಇನ್ಮುಂದೆ ವೇಗವಾಗಿ ಓಡಲಿವೆ ಭಾರತೀಯ ರೈಲುಗಳು
ನವದೆಹಲಿ, ಅಕ್ಟೋಬರ್ 21: 500 ಕಿ.ಮೀ.ಗಿಂತ ಹೆಚ್ಚು ದೂರ ಸಂಚರಿಸುವ ರೈಲುಗಳ ಪ್ರಯಾಣದ ಅವಧಿಯನ್ನು ಕಡಿತಗೊಳಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರೈಲ್ವೆ ಸಚಿವ ಪಿಯೂಸ್ ಗೋಯಲ್ ಅವರ ನಿರ್ದೇಶನದಂತೆ ರೈಲುಗಳ ಪರಿಸ್ಕೃತ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಇದೇ ನವೆಂಬರ್ ನಲ್ಲಿ ಹೊಸ ರೈಲ್ವೆ ವೇಳಾಪಟ್ಟಿ ಬದಲಾವಣೆಯಾಗಲಿದೆ. ಹಾಗೂ ಎಲ್ಲಾ ಜನಪ್ರಿಯ ರೈಲುಗಳ ಪ್ರಯಾಣದ ಅವಧಿಯನ್ನು ಕನಿಷ್ಠ 15 ನಿಮಿಷದಿಂದ ಎರಡು ಗಂಟೆಗಳವರೆಗೆ ಕಡಿತಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಹೊಸ ವೇಳಾಪಟ್ಟಿಯಲ್ಲಿ ಪ್ರತಿ ರೈಲ್ವೆ ವಿಭಾಗಕ್ಕೂ ನಿರ್ವಹಣೆ ಕಾರ್ಯಗಳಿಗೆ ಎರಡರಿಂದ ನಾಲ್ಕು ಗಂಟೆಗಳ ಸಮಯ ನೀಡಲಾಗಿದೆ. ಹೊಸ ವೇಳಾಪಟ್ಟಿಯಲ್ಲಿ ದೇಶಾದ್ಯಂತ ಸುಮಾರು 500 ರೈಲುಗಳ ಪ್ರಯಾಣದ ಅವಧಿ ಕಡಿತಗೊಳ್ಳುತ್ತಿದ್ದು, ಭೋಪಾಲ್-ಜೋಧ್ ಪುರ್ ಎಕ್ಸ್ ಪ್ರೆಸ್ ರೈಲು 95 ನಿಮಿಷ ಮುಂಚಿತವಾಗಿ ತಲುಪಲಿದೆ.
ಇನ್ನು 2,330 ಕಿ.ಮೀ.ಸಂಚರಿಸುವ ಗೌವಾಹತಿ-ಇಂದೋರ್ ವಿಶೇಷ ರೈಲು 115 ನಿಮಿಷ ಮುಂಚಿತವಾಗಿ ತಲುಪಲಿದೆ. ಇದರಿಂದ ಪ್ರಯಾಣಿಕರು ಮೊದಕುನ ಸಮಯಕ್ಕಿಂತ ಬೇಗವೇ ತಮ್ಮ-ತಮ್ಮ ಊರುಗಳನ್ನು ತಲುಪಲು ಅನುಕೂಲವಾಗಲಿದೆ












Click it and Unblock the Notifications