ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಷಿಯನ್-ಭಾರತದ 18ನೇ ಶೃಂಗಸಭೆಯ ಪ್ರಮುಖ ಅಂಶಗಳು

|
Google Oneindia Kannada News

ನವದೆಹಲಿ, ಅಕ್ಟೋಬರ್ 28: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಂತರದ ಆರ್ಥಿಕ ಚಟುವಟಿಕೆ, ವ್ಯಾಪಾರ, ಹೂಡಿಕೆ ಹಾಗೂ ಸಂಪರ್ಕ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ ವಿಷಯಗಳು ಏಷಿಯನ್-ಭಾರತ ಶೃಂಗಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿವೆ ಎಂದು ತಿಳಿದು ಬಂದಿದೆ.

ಗುರುವಾರ ಏಷಿಯನ್-ಭಾರತ ವಾರ್ಷಿಕ ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. "ಬಹುಪಕ್ಷೀಯತೆಯ ಮೌಲ್ಯಗಳ ಹಂಚಿಕೆ, ನಿಯಮ-ಆಧಾರಿತ ಅಂತರಾಷ್ಟ್ರೀಯ ಕ್ರಮ, ಅಂತರಾಷ್ಟ್ರೀಯ ಕಾನೂನು ಮತ್ತು ಸಾರ್ವಭೌಮತ್ವ, ಎಲ್ಲಾ ರಾಷ್ಟ್ರಗಳ ಪ್ರಾದೇಶಿಕ ಸಮಗ್ರತೆಗೆ ಗೌರವವನ್ನು ಬಲಪಡಿಸುವುದಕ್ಕೆ ಭಾರತ ಬದ್ಧವಾಗಿದೆ," ಎಂದು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಶೃಂಗಸಭೆಯಲ್ಲಿ ಭಾಗವಹಿಸಲು ಎದುರು ನೋಡುತ್ತಿರುವುದಾಗಿ ಬರೆದುಕೊಂಡಿದ್ದಾರೆ.

ಶೃಂಗಸಭೆಯ ಕುರಿತು ಹೆಚ್ಚಿನ ವಿವರಗಳನ್ನು ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಬ್ರೂನೈ ಸುಲ್ತಾನರ ಆಹ್ವಾನದ ಮೇರೆಗೆ ಅಕ್ಟೋಬರ್ 28ರಂದು ನಡೆಯಲಿರುವ 18ನೇ ಏಷಿಯನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ ಎಂದು ಹೇಳಿದೆ. ಏಷಿಯನ್-ಭಾರತ ಶೃಂಗಸಭೆಯಲ್ಲಿ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಗುಂಪಿನ ಸದಸ್ಯ ರಾಷ್ಟ್ರಗಳ ಸರ್ಕಾರದ ಮುಖ್ಯಸ್ಥರು ಭಾಗವಹಿಸಲಿದ್ದಾರೆ ಎಂದು ಎಂಇಎ ಹೇಳಿದೆ.

PM Modi Address on Trade, Investment, Economy in ASEAN-India Summit: Here Read Expectations

ಆಗ್ನೇಯ ಏಷ್ಯಾದ 10 ರಾಷ್ಟ್ರಗಳ ಒಕ್ಕೂಟ:

ಆಗ್ನೇಯ ಏಷ್ಯಾಧ ರಾಷ್ಟ್ರಗಳ 10-ರಾಷ್ಟ್ರಗಳ ಸಂಘವು (ASEAN) ಈ ಪ್ರದೇಶದ ಅತ್ಯಂತ ಪ್ರಭಾವಶಾಲಿ ಗುಂಪುಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್, ಚೀನಾ, ಜಪಾನ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವಾರು ಇತರ ದೇಶಗಳು ಶೃಂಗಸಭೆಯ ಸಂವಾದದಲ್ಲಿ ಪಾಲುದಾರರಾಗಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬೇಕಿದೆ.

ಯಾವ ವಲಯಗಳಿಗೆ ಒಕ್ಕೂಟದ ಆದ್ಯತೆ:

ಕಳೆದ ಕೆಲವು ವರ್ಷಗಳಲ್ಲಿ ವ್ಯಾಪಾರ ಮತ್ತು ಹೂಡಿಕೆ ಮತ್ತು ಭದ್ರತೆ ಮತ್ತು ರಕ್ಷಣೆಯ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವುದರ ಜೊತೆಗೆ ಭಾರತ ಮತ್ತು ಏಷಿಯನ್ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ವೃದ್ಧಿಸುವತ್ತ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಗುರುವಾರ ನಡೆಯಲಿರುವ "18ನೇ ಏಷಿಯನ್-ಭಾರತ ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳ ಕಾರ್ಯತಂತ್ರದ ಪಾಲುದಾರಿಕೆ ಸ್ಥಿತಿಯನ್ನು ಪರಿಶೀಲಿಸುತ್ತದೆ. ಕೊರೊನಾವೈರಸ್ ಮತ್ತು ಆರೋಗ್ಯ, ವ್ಯಾಪಾರ ಮತ್ತು ವಾಣಿಜ್ಯ, ಸಂಪರ್ಕ, ಹಾಗೂ ಶಿಕ್ಷಣ ಮತ್ತು ಸಂಸ್ಕೃತಿ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಾಧಿಸಿದ ಪ್ರಗತಿಯನ್ನು ಅವಲೋಕಿಸಲಿದೆ," ಎಂದು MEA ತಿಳಿಸಿದೆ.

ಸಾಂಕ್ರಾಮಿಕ ನಂತರದ ಆರ್ಥಿಕ ಚೇತರಿಕೆ ಸೇರಿದಂತೆ ಪ್ರಮುಖ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಬೆಳವಣಿಗೆಗಳನ್ನು ಸಹ ಚರ್ಚಿಸಲಾಗುವುದು ಎಂದು ಭಾರತದ ವಿದೇಶಾಂಗ ವ್ಯವಹಾರ ಸಚಿವಾಲಯ ಹೇಳಿದೆ. ಇದರ ಜೊತೆಗೆ ಇಂಡೋ-ಪೆಸಿಫಿಕ್ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿನ ಕಡಲ ಭದ್ರತೆಯ ಸನ್ನಿವೇಶವನ್ನು ಉಭಯ ಕಡೆಯವರು ಪರಿಶೀಲಿಸುವ ನಿರೀಕ್ಷೆಯಿದೆ.

9ನೇ ಏಷಿಯನ್-ಭಾರತ ಶೃಂಗಸಭೆಯಲ್ಲಿ ಮೋದಿ:

ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ 17ನೇ ಏಷಿಯನ್-ಭಾರತ ಶೃಂಗಸಭೆಯಲ್ಲೂ ಸಹ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ದರು. ಗುರುವಾರ ಅವರು ಭಾಗವಹಿಸಲಿರುವುದು ಒಂಬತ್ತನೇ ಏಷಿಯನ್-ಭಾರತ ಶೃಂಗಸಭೆಯಾಗಿದೆ. "ಏಷಿಯನ್-ಭಾರತದ ಭೌಗೋಳಿಕ ಪಾಲುದಾರಿಕೆಯು ಹಂಚಿಕೆ ಕಾರ್ಯತಂತ್ರ, ಐತಿಹಾಸಿಕ ಮತ್ತು ನಾಗರಿಕ ಸಂಬಂಧಗಳು ಬಲವಾದ ಅಡಿಪಾಯದ ಮೇಲೆ ನಿಂತಿದೆ. ನಮ್ಮ ಆಕ್ಟ್ ಈಸ್ಟ್ ನೀತಿ ಮತ್ತು ಇಂಡೋ-ಪೆಸಿಫಿಕ್‌ನ ನಮ್ಮ ವಿಶಾಲ ದೃಷ್ಟಿಗೆ ಏಷಿಯನ್ ಕೇಂದ್ರವಾಗಿದೆ," ಎಂಇಎ ಹೇಳಿದೆ.

"ಪೂರ್ವ ಏಷ್ಯಾ ಶೃಂಗಸಭೆಯ ಸ್ಥಾಪಕ ಸದಸ್ಯರಾಗಿರುವ ಭಾರತವು ಪೂರ್ವ ಏಷ್ಯಾ ಶೃಂಗಸಭೆಯನ್ನು ಬಲಪಡಿಸಲು ಮತ್ತು ಸಮಕಾಲೀನ ಸವಾಲುಗಳನ್ನು ಎದುರಿಸಲು ಹೆಚ್ಚು ಪರಿಣಾಮಕಾರಿಯಾಗಿಸಲು ಬದ್ಧವಾಗಿದೆ. ಇದು ಏಷಿಯನ್ ಔಟ್‌ಲುಕ್ ಆನ್ ಇಂಡೋ-ಪೆಸಿಫಿಕ್ (ಎಒಐಪಿ) ಮತ್ತು ಇಂಡೋ-ಪೆಸಿಫಿಕ್ ಓಷಿಯನ್ ಇನಿಶಿಯೇಟಿವ್ (ಐಪಿಒಐ) ನಡುವಿನ ಒಮ್ಮುತವನ್ನು ಮೂಡಿಸುವ ಮೂಲಕ ಇಂಡೋ-ಪೆಸಿಫಿಕ್‌ನಲ್ಲಿ ಪ್ರಾಯೋಗಿಕ ಸಹಕಾರ ಹೆಚ್ಚಿಸಲು ಒಂದು ಪ್ರಮುಖ ವೇದಿಕೆಯಾಗಿದೆ" ಎಂದು MEA ಹೇಳಿದೆ.

30 ವರ್ಷಗಳ ಸುದೀರ್ಘ ವೇದಿಕೆ:

2022 ಏಷಿಯನ್-ಭಾರತ ಸಂಬಂಧಗಳ 30 ವರ್ಷಗಳನ್ನು ಬಾಂಧವ್ಯಕ್ಕೆ ಸಾಕ್ಷಿಯಾಗುತ್ತದೆ. ಪೂರ್ವ ಏಷ್ಯಾ ಶೃಂಗಸಭೆಯು ಇಂಡೋ-ಪೆಸಿಫಿಕ್‌ನಲ್ಲಿ ಪ್ರಮುಖ ನಾಯಕರ ನೇತೃತ್ವದ ವೇದಿಕೆ ಎನಿಸಿದೆ. ಈ ವೇದಿಕೆಯು 2005ರಲ್ಲಿ ಪ್ರಾರಂಭವಾದಾಗಿನಿಂದ ಪೂರ್ವ ಏಷ್ಯಾದ ಕಾರ್ಯತಂತ್ರ ಮತ್ತು ಭೌಗೋಳಿಕ ರಾಜಕೀಯ ವಿಕಾಸದಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ.

English summary
PM Modi Address on Trade, Investment, Economy in ASEAN-India Summit: Here Read Expectations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X