ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿ-20 ಶೃಂಗಸಭೆ: ಚೀನಾ ಅಧ್ಯಕ್ಷ ಜಿನ್‌ಪಿಂಗ್- ಕೆನಡಾ ಪಿಎಂ ಟ್ರುಡೊ ನಡುವೆ ಮಾತಿನ ಚಕಮಕಿ

|
Google Oneindia Kannada News

ಇಂಡೋನೇಷ್ಯಾ, ನವೆಂಬರ್ 16: ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ತಮ್ಮಿಬ್ಬರ ನಡುವೆ ನಡೆದ ಗಂಭೀರ ಚರ್ಚೆಗಳು ಮಾಧ್ಯಮಗಳಿಗೆ ಸೋರಿಕೆಯಾಗಿವೆ ಎಂದು ಜಿನ್‌ಪಿಂಗ್ ಅವರು ಟ್ರುಡೊ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವೆಂಬರ್ 15ರಂದು ನಡೆದ ಮಾತಕತೆ ವಿಚಾರವನ್ನು ಈ ಇಬ್ಬರು ನಾಯಕರು ಪರಸ್ಪರ ಮಾತನಾಡಿಕೊಂಡರು. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಬಗ್ಗೆ ಚೀನಾ ಪ್ರಧಾನಿ ಅಸಮಾಧಾನವನ್ನು ವ್ಯಕ್ತಪಡಿಸುತ್ತಿರುವುದು ವಿಡಿಯೋ ಸಂಭಾಷಣೆಗಳೇ ಹೇಳುತ್ತಿವೆ.

ಭಾರತದ ಹೆಗಲಿಗೆ ಜಿ-20 ಅಧ್ಯಕ್ಷ ಸ್ಥಾನ: ಪ್ರತಿ ಭಾರತೀಯನ ಹೆಮ್ಮೆ ಎಂದ ಪ್ರಧಾನಿ ಮೋದಿ ಭಾರತದ ಹೆಗಲಿಗೆ ಜಿ-20 ಅಧ್ಯಕ್ಷ ಸ್ಥಾನ: ಪ್ರತಿ ಭಾರತೀಯನ ಹೆಮ್ಮೆ ಎಂದ ಪ್ರಧಾನಿ ಮೋದಿ

ಕೊನೆಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಕೋಪಗೊಂಡು ಹೊರನಡೆದ ದೃಶ್ಯಾವಳಿಗಳು ವಿಡಿಯೋದ ಕೊನೆಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಕ್ಸಿ ಜಿನ್‌ಪಿಂಗ್ ಅವರು ಜಸ್ಟಿನ್ ಟ್ರುಡೊ ಅವರೊಂದಿಗೆ ಮಾಧ್ಯಮ ಸೋರಿಕೆ ವಿಷಯದ ಬಗ್ಗೆ ಚರ್ಚಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಈ ವಿಚಾರವಾಗಿ ಜಿನ್‌ಪಿಂಗ್‌ ಆಕ್ಷೇಪವನ್ನೂ ವ್ಯಕ್ತಪಡಿಸುತ್ತಿದ್ದಾರೆ.

Chinese president and Canadian PM Justin Trudeau disagree over media leaks at G20 Summit

ಈ ನಾಯಕರು ಚರ್ಚಿಸಿದ್ದೆಲ್ಲ ಪತ್ರಿಕೆಗಳಲ್ಲಿ ಸೋರಿಕೆ

ಈ ವೇಳೆ ಟ್ರೂಡೊ ಜಿನ್‌ಪಿಂಗ್‌ಗೆ ನೇರ ಉತ್ತರ ನೀಡುತ್ತಿರುವುದು ಕಂಡುಬಂದಿದೆ. ತಾವು ಚರ್ಚಿಸಿದ್ದೆಲ್ಲ ಪತ್ರಿಕೆಗಳಲ್ಲಿ ಸೋರಿಕೆಯಾಗಿದೆ ಎಂದು ಜಿನ್‌ಪಿಂಗ್ ಕೆನಡಾದ ಪ್ರಧಾನಿಗೆ ಹೇಳುತ್ತಿದ್ದಾರೆ. ಇದೇ ವೇಳೆ, ನಾವು ಮುಕ್ತ ಮತ್ತು ಸ್ಪಷ್ಟವಾದ ಸಂಭಾಷಣೆಯನ್ನು ನಡೆಸುತ್ತೇವೆ. ಇದನ್ನು ಮುಂದುವರಿಸುತ್ತೇವೆ ಎಂದು ಹೇಳುವ ಮೂಲಕ ಟ್ರೂಡೊ ತಕ್ಷಣವೇ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ನಾವು ಭಿನ್ನಾಭಿಪ್ರಾಯ ಹೊಂದಿರುವ ಅನೇಕ ವಿಷಯಗಳಿವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

Chinese president and Canadian PM Justin Trudeau disagree over media leaks at G20 Summit

ದಿ ಗ್ಲೋಬ್ ಅಂಡ್ ಮೇಲ್ ವರದಿಯ ಮಾಡಿರುವ ಪ್ರಕಾರ, ಟ್ರೂಡೊ 'ಹಸ್ತಕ್ಷೇಪ' ಕುರಿತು ಚೀನಾದ ಜಿನ್‌ಪಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ. 'ನಾವು ಮಾತಾಡಿಕೊಂಡ ವಿಚಾರಗಳು ಪತ್ರಿಕೆಗಳಿಗೆ ಸೋರಿಕೆಯಾಗಿದೆ. ಇದು ನ್ಯಾಯಯೋಚಿತವಲ್ಲ' ಎಂದು ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ. ಈ ವೇಳೆ, 'ನೀವು ಸತ್ಯವಂತರಾಗಿದ್ದರೆ, ಪರಸ್ಪರ ಗೌರವಯುತವಾಗಿ ಸಂವಹನ ನಡೆಸಬೇಕು. ಇಲ್ಲದಿದ್ದರೆ ಫಲಿತಾಂಶ ಏನಾಗುತ್ತದೆ ಎಂಬುದನ್ನು ಹೇಳುವುದು ಕಷ್ಟ' ಎಂದು ಟ್ರುಡೊ ಹೇಳಿದ್ದಾರೆ.

English summary
Xi Jinping expressed displeasure with Justin Trudeau over details of the conversation between the two leaders leaking to the papers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X