Peddi: ಭಾರತದ ಕಥೆಗಳು ಜಾಗತಿಕ ಪ್ರೇಕ್ಷಕರಿಗೆ: 'ಪೆದ್ದಿ' ಕುರಿತು ಹೊಂಬಾಳೆ ಫಿಲ್ಮ್ಸ್ ಹೆಮ್ಮೆಯ ಘೋಷಣೆ

Peddi Film Latest Updates: ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Peddi Ram Charan) ಅಭಿನಯದ 'ಪೆದ್ದಿ' ಸಿನಿಮಾದ ಟ್ರೈಲರ್ ದಿನಾಂಕ ಘೋಷಿಸಿದ್ದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ (Homable Films) ಇದೀಗ ಮತ್ತೊಂದು ಅಪ್ಡೇಟ್ ನೀಡಿದೆ. ಇತ್ತೀಚೆಗೆ ಕರ್ನಾಟಕದಲ್ಲಿ 'ಪೆದ್ದಿ' ಸಿನಿಮಾ ವಿತರಣೆ ಹಕ್ಕು ಮಾರಾಟವಾಗಿತ್ತು. ಇದೀಗ ಸಾಗರೋತ್ತರ ವಿತರಣೆ ಕಾರ್ಯ ಆರಂಭಿಸಿದ್ದೇವೆ. 'ನಮ್ಮ ಮಣ್ಣಿನಲ್ಲಿ ಬೇರೂರಿರುವ ಕಥೆಗಳು, ಇಲ್ಲಿನ ಭಾವನೆಗಳು ಜಗತ್ತಿಗೆ ಮೀಸಲಾಗಿವೆ' ಎಂದು ಹೊಂಬಾಳೆ ಸಂಸ್ಥೆ ತಿಳಿಸಿದೆ. ವಿಶೇಷವೆಂದರೆ ಇದರಲ್ಲಿ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರು ನಟಿಸಿದ್ದಾರೆ.

ಆರ್‌ಆರ್‌ಆರ್‌ ಸಿನಿಮಾ ಮೂಲಕ ಕರ್ನಾಟಕ ಸೇರಿದಂತೆ ದೇಶಾದ್ಯಂತ ಜೊತೆಗೆ ವಿದೇಶಗಳಲ್ಲಿ ರಾಮ್ ಚರಣ್ ಕ್ರೇಜ್ ಹೆಚ್ಚಾಯಿತು. ತೆಲುಗು ಸಿನಿಮಾಗಳಿಗೆ ಮೊದಲಿನಿಂದಲೂ ಉತ್ತಮ ಬೇಡಿಕೆ ಇದೆ. ಅದರಲ್ಲೂ ರಾಮ್ ಚರಣ್, ನಟಿ ಜಾನ್ವಿ ಕಪೂರ್ (Peddi Janhvi Kapoor) ನಟನೆಯ 'ಪೆದ್ದಿ' ಸಿನಿಮಾ ಮೇಲೆ ಅಪಾರ ನಿರೀಕ್ಷೆ ಇದೆ. ಆಂಧ್ರ ಪ್ರದೇಶದ ಗ್ರಾಮೀಣ ಭಾಗದ 1980ರ ದಶಕ ಕಥೆಯನ್ನು ನಿರ್ದೇಶಕ ಬುಚ್ಚಿ ಬಾಬು ಸನಾ ಅವರು ವಿಭಿನ್ನವಾಗಿ ತೆರೆಗೆ ತರಲು ಸಜ್ಜಾಗಿದ್ದಾರೆ.

Peddi

ಈ ನೆಲದ ಕಥೆಗಳು ಜಗತ್ತಿನಾದ್ಯಂತ ಪರಸರಿಸಬೇಕು ಎಂಬ ಉದ್ದೇಶದಿಂದ ದೇಶ ವಿದೇಶಗಳಲ್ಲೂ ಪೆದ್ದಿ ರಿಲೀಸ್ ಮಾಡಲು ಹೊಂಬಾಳೆ ಸಂಸ್ಥೆ ಪ್ಲ್ಯಾನ್ ಹಾಕಿಕೊಂಡಿದೆ. ಇದರ ಹಿಂದೆ ಭರ್ಜರಿ ಕಲೆಕ್ಷನ್ ಮಾಡುವ ಲೆಕ್ಕಾಚಾರವೂ ಸಹ ಇದೆ.

Sanvi Sudeep: ಬೆನ್ನ ಮೇಲೆ ಗಣಪತಿ ಹಚ್ಚೆ ಹಾಕಿಸಿಕೊಂಡ ನಟ ಸುದೀಪ್ ಪುತ್ರಿ ಸಾನ್ವಿ, ಬೇಕಿತ್ತಾ ಎಂದ ನೆಟ್ಟಿಗರು
Sanvi Sudeep: ಬೆನ್ನ ಮೇಲೆ ಗಣಪತಿ ಹಚ್ಚೆ ಹಾಕಿಸಿಕೊಂಡ ನಟ ಸುದೀಪ್ ಪುತ್ರಿ ಸಾನ್ವಿ, ಬೇಕಿತ್ತಾ ಎಂದ ನೆಟ್ಟಿಗರು

ಹೊಂಬಾಳೆ ಫಿಲ್ಮ್ಸ್‌ ಪೋಸ್ಟ್ ನಲ್ಲೇನಿದೆ?

ಸಾಗರೋತ್ತರ ದೇಶಗಳಲ್ಲಿ 'ಪೆದ್ದಿ' ವಿತರಣೆ ಈ ಕುರಿತು ಎಕ್ಸ್ ಪೋಸ್ಟ್ ಮಾಡಿರುವ ಹೊಂಬಾಳೆ ಸಂಸ್ಥೆಯು, 'ಪೆದ್ದಿಯೊಂದಿಗೆ ನಮ್ಮ ಸಾಗರೋತ್ತರ ವಿತರಣೆ ಕಾರ್ಯ ಆರಂಭಿಸಲು ಹೆಮ್ಮೆ ಪಡುತ್ತೇವೆ. ಭಾರತೀಯ ಕಥೆಗಳನ್ನು ಗಡಿಗಳನ್ನು ಮೀರಿ ತೆಗೆದುಕೊಂಡು ಹೋಗಿ ಅವುಗಳನ್ನು ವಿಶ್ವಾದ್ಯಂತ ಪ್ರೇಕ್ಷಕರಿಗೆ ಹತ್ತಿರ ತರುವುದು' ಇದರ ಉದ್ದೇಶವಾಗಿದೆ ಎಂದು ತಿಳಿಸಿದೆ. #GetReadyForPeddi ಹೆಸರಿನಲ್ಲಿ ಹ್ಯಾಷ್ ಟ್ಯಾಗ್ ಹಾಕಿ ಈ ನೆಲದ ಕಥೆ ಕಣ್ತುಂಬಿಕೊಳ್ಳಲು ಸಜ್ಜಾಗಿ ಎಂದು ಕರೆ ನೀಡಲಾಗಿದೆ.

'ಪೆದ್ದಿ' ಪ್ಯಾನ್ ಇಂಡಿಯಾ ಸಿನಿಮಾನಾ? ಪ್ಯಾನ್ ವರ್ಲ್ಡ್?

ಭಾರತದಲ್ಲಿ ತೆಲುಗು, ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಅಸಲಿಗೆ ಇದು ಪ್ಯಾನ್ ಇಂಡಿಯಾ ಮಟ್ಟದ ದೊಡ್ಡ ಸಿನಿಮಾ. ಆದರೂ ಇದನ್ನು ವಿಶ್ವದ ವಿವಿಧ ಹಲವು ರಾಷ್ಟ್ರಗಳಲ್ಲಿ ತೆರೆಗೆ ತರಲು ಹೊಂಬಾಳೆ ಯೋಜಿಸಿದೆ. ಇದೇ ಕಾರಣಕ್ಕೆ ಇಂದಿನಿಂದ ವಿದೇಶಗಳಲ್ಲಿ ವಿತರಣೆ ಹಕ್ಕು ಮಾರಾಟವಾಗಲಿದೆ.

ಸಾಗರೋತ್ತರ ಯಾವೆಲ್ಲ ದೇಶಗಳಲ್ಲಿ ರಿಲೀಸ್?

ಮೂಲಗಳ ಪ್ರಕಾರ, 'ಪೆದ್ದಿ' ಸಿನಿಮಾವನ್ನು ಉತ್ತರ ಅಮೆರಿಕಾ, ಯುಕೆ, ಆಸ್ಟ್ರೇಲಿಯಾ, ಕೆನಡಾ, ಸಿಂಗಾಪುರ ಮತ್ತು ಶ್ರೀಲಂಕಾ ದೇಶಗಳಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ. ಹೀಗಾಗಿ ವಿತರಣೆ ಹಕ್ಕು, ಮಾರಾಟ ಇಂದಿನಿಂದ ಅಂತಿಮವಾಗಲಿವೆ ಎಂದು ಹೊಂಬಾಳೆ ತಿಳಿಸಿದೆ.

Dileep Raj: 'ಮಿಲನ, ಹಿಟ್ಲರ್ ಕಲ್ಯಾಣ' ಖ್ಯಾತಿಯ ನಟ ದಿಲೀಪ್ ರಾಜ್ ನಿಧನ, ಸ್ಯಾಂಡಲ್‌ವುಡ್‌ನಲ್ಲಿ ಶೋಕ
Dileep Raj: 'ಮಿಲನ, ಹಿಟ್ಲರ್ ಕಲ್ಯಾಣ' ಖ್ಯಾತಿಯ ನಟ ದಿಲೀಪ್ ರಾಜ್ ನಿಧನ, ಸ್ಯಾಂಡಲ್‌ವುಡ್‌ನಲ್ಲಿ ಶೋಕ

ಇನ್ನೂ ಕರ್ನಾಟಕದಲ್ಲಿ ಕನ್ನಡ ನಿರ್ಮಾಪರು, ಜೇಮ್ಸ್ ಖ್ಯಾತಿಯ ಕಿಶೋರ್ ಪತ್ತಿಕೊಂಡ ಅವರು ರಾಜ್ಯದಲ್ಲಿ ಪೆದ್ದಿ ವಿತರಣೆ ಹಕ್ಕನ್ನು ಪಡೆದುಕೊಂಡಿದ್ದಾರೆ. ರಿಲೀಸ್‌ಗೂ ಮೊದಲೇ ಒಟ್ಟಾರೆ ವಿತರಣೆ ಹಕ್ಕಿನಿಂದ ಎಷ್ಟು ಗಳಿಕೆ ಆಗಿದೆ ಎಂಬುದರ ಅಧಿಕೃತ ಮಾಹಿತಿ ಶೀಘ್ರವೇ ಗೊತ್ತಾಗಲಿದೆ.

ಮೇ 18ಕ್ಕೆ ಟ್ರೈಲರ್, ಜೂನ್ 4ಕ್ಕೆ ರಿಲೀಸ್

'ಪೆದ್ದಿ'ಯಲ್ಲಿನ ರಾಮ್ ಚರಣ್ ಅವರ ಗೆಟಪ್, ಹಾಡು, ಡಾನ್ಸ್‌ಗಳು, ನಟಿ ಜಾನ್ವಿ ಕಪೂರ್ ವಿಶೇಷ ಲುಕ್-ಪಾತ್ರ, ಇತ್ತೀಚಿನ ರಕ್ತಸಿಕ್ತ ಪೋಸ್ಟರ್ ಎಲ್ಲವೂ ಸಿನಿಮಾ ಮೇಲಿನ ಕೂತೂಹಲ ಹೆಚ್ಚಾಗುವಂತೆ ಮಾಡಿದೆ. ಹಾಡುಗಳನ್ನು ಅಭಿಮಾನಿಗಳು ಗುನುಗುತ್ತಿದ್ದು, ಸಿನಿಮಾ ಥಿಯೇಟರ್‍‌ಗೆ ಬರುವುದನ್ನು ಕಾಯುತ್ತಿದ್ದಾರೆ. ರಿಲೀಸ್ ದಿನ ಫ್ಯಾನ್ಸ್ ಹಬ್ಬದಂತೆ 'ಪೆದ್ದಿ'ಯನ್ನು ಬರಮಾಡಿಕೊಳ್ಳಲಿದ್ದಾರೆ. ಇತ್ತೀಚೆಗೆ ಮೇ 18ರಂದು ಪೆದ್ದಿ ಟ್ರೈಲರ್ ಬಿಡುಗಡೆ ಮಾಡುವುದಾಗಿ ಸಿನಿಮಾ ತಂಡ ತಿಳಿಸಿದೆ. ಜೂನ್ 4ರಂದು ದೇಶ ವಿದೇಶಗಳಲ್ಲಿ 'ಪೆದ್ದಿ' ಸಿನಿಮಾ ಬಿಡುಗಡೆ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+