Weather: ಸಾಗರದ ತಾಪಮಾನದಲ್ಲಿ ಭಾರೀ ಏರಿಕೆ: 2026 ಎಲ್‌ನಿನೋ ಅಲರ್ಟ್, ಭಾರತ ಸೇರಿ ಅನೇಕ ದೇಶಗಳಿಗೆ ಹವಾಮಾನ ಸಂಕಷ್ಟ

Weather Forecast: ಕರ್ನಾಟಕ ಸೇರಿದಂತೆ ಭಾರತದಲ್ಲಿ ಮುಂಗಾರು ಮಳೆ 2026 (Monsoon Rain 2026) ಆಗಮನಕ್ಕೆ ಕಾಯುತ್ತಿದ್ದೇವೆ. ದೇಶದ ಹವಾಮಾನದ ಮೇಲೆ ಪ್ರಭಾವ ಬೀರುವ ಪೆಸಿಫಿಕ್‌ ಮಹಾಸಾಗರದಲ್ಲಿ ಈ ವರ್ಷ "ಅತ್ಯಂತ ಪ್ರಬಲ" ಬದಲಾವಣೆಗಳು ಆಗಲಿವೆ. ತಾಪಮಾನ ಏರಿಕೆ ಹಾಗೂ 'ಎಲ್ ನಿನೋ' ಕುರಿತು ಜಾಗತಿಕ ಹವಾಮಾನ ಸಂಸ್ಥೆಗಳು, ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಭಾರತೀಯ ಹವಾಮಾನ ಇಲಾಖೆ (IMD) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಗಾರು ಮಳೆ ಮತ್ತು ಬರಗಾಲದ ಮೇಲೆ ನಿಗಾ ಇಟ್ಟಿದೆ. ಇದೇ ಮೇ ತಿಂಗಳಿನಿಂದ ಜುಲೈವರೆಗೆ ಜಾಗತಿಕವಾಗಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನದ ಕಂಡು ಬರಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Super El Ni o Alert 2026

ಕಳೆದ 150 ವರ್ಷಗಳಲ್ಲಿ ಕಂಡರಿಯದ ವಿದ್ಯಮಾನವೊಂದು ಈಗ ಪೆಸಿಫಿಕ್ ಸಾಗರದಲ್ಲಿ ನಡೆಯುತ್ತಿದೆ. ಸಾಗರ ಮೇಲ್ಮೈ ತಾಪಮಾನವು 1877ರಲ್ಲಿ ಭಾರತ, ಚೀನಾ, ಬ್ರೆಜಿಲ್ ಮತ್ತು ಆಫ್ರಿಕಾದಲ್ಲಿ 5 ಕೋಟಿಗೂ ಹೆಚ್ಚು ಜನರ ಪ್ರಾಣ ತೆಗೆದಿದೆ. ಅದಕ್ಕೆ ತಾಪಮಾನ ಹೆಚ್ಚಳದ ವಿದ್ಯಮಾನಕ್ಕೆ ಕಾರಣವಾಗುವ 'ಎಲ್ ನಿನೋ' ಪ್ರಭಾವ ಎಂದು ತಜ್ಞರು ವಿವರಿಸಿದ್ದಾರೆ. 1877ರಲ್ಲಿ ಇದೇ ರೀತಿಯ ಘಟನೆಯಿಂದ ಕೋಟ್ಯಾಂತರ ಜನರು ಪ್ರಾಣ ಬಿಟ್ಟಿದ್ದರು. ಈ ಬಾರಿ ಏನೆಲ್ಲ ಸಂಭವಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಇಲ್ಲಿದೆ.

Karnataka Weather: ರಾಜ್ಯದ ಈ ಭಾಗಗಳಲ್ಲಿ ಮುಂದಿನ 5 ದಿನ ಬಿರುಗಾಳಿ ಮಳೆ, ಬೆಂಗಳೂರು ಹವಾಮಾನ ವರದಿ
Karnataka Weather: ರಾಜ್ಯದ ಈ ಭಾಗಗಳಲ್ಲಿ ಮುಂದಿನ 5 ದಿನ ಬಿರುಗಾಳಿ ಮಳೆ, ಬೆಂಗಳೂರು ಹವಾಮಾನ ವರದಿ

ವಿಶ್ವ ಹವಾಮಾನ ಸಂಸ್ಥೆ ಅಲರ್ಟ್

ವಿಶ್ವ ಹವಾಮಾನ ಸಂಸ್ಥೆ (WMO) ಹೇಳುವ ಪ್ರಕಾರ, 2026ರ ಮೇ-ಜುಲೈನಲ್ಲಿ ಪೆಸಿಪಿಕ್ ಮಹಾಸಾಗರದಲ್ಲಿ ಎಲ್‌ ನಿನೋ ಸಂಭವಿಸುವ ಸಾಧ್ಯತೆ ಶೇ 61ರಷ್ಟಿದೆ. ಪೆಸಿಫಿಕ್ ಮೇಲ್ಮೈ ತಾಪಮಾನವು 1877ರ ನಂತರದ ಅತ್ಯಂತ ವೇಗದ ಏರಿಕೆ ದಾಖಲಾಗಲಿದೆ. ಕೆಲವು ಮಾದರಿಗಳನ್ನು ನೋಡುವುದಾದರೆ ಆಗ 3.5 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ತಾಪಮಾನ ದಾಖಲಾಗಿತ್ತು. ಇದೀಗ 3.0 ಡಿಗ್ರಿ ಸೆಲ್ಸಿಯಸ್ ಅಧಿಕ ಗರಿಷ್ಠ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಎಲ್‌ನಿನಾ, ಲಾನಿನಾ; ಆರು ಖಂಡಗಳ ಮಳೆ, ಹವಾಮಾನ ನಿರ್ಧಾರ

ಎಲ್ ನಿನೋ ಕೇವಲ ಹವಾಮಾನ ಮಾದರಿಯಲ್ಲ. ಸಾಗರ-ವಾತಾವರಣದಲ್ಲಿ ಆಗುವ ದೊಡ್ಡ ಬದಲಾವಣೆ. ಸಾಗರ ಮೇಲ್ಮೈ ಬಿಸಿಯಾಗುವುದು 'ಎಲ್ ನಿನೋ' ಆದಲ್ಲಿ, ಸಾಗದ ಮೇಲ್ಮೈ ತಣ್ಣಗಾಗುವುದನ್ನು 'ಲಾ ನಿನಾ' ಎನ್ನಲಾಗುತ್ತದೆ. ಈ ಹಂತಗಳು ಆರು ಖಂಡಗಳ ಹವಾಮಾನ, ಮಳೆ, ಬರ ಮತ್ತು ಉಷ್ಣತೆಯನ್ನು ನಿರ್ಧರಿಸುತ್ತವೆ. ಸಾಗರ ಮೇಲ್ಮೈ ಸಾಮಾನ್ಯಕ್ಕಿಂತ 2 ಡಿಸೆ ಹೆಚ್ಚು ಬಿಸಿಯಾದರೆ ಅದು "ಸೂಪರ್" ಅಥವಾ "ಅತ್ಯಂತ ಪ್ರಬಲ" ಎಲ್ ನಿನೋ. ಇಂತಹ ಘಟನೆಗಳು ಜಗತ್ತಿನಾದ್ಯಂತ ಮುಂಗಾರು ಕುಸಿತ, ಬೆಳೆ ನಷ್ಟ ಮತ್ತು ಕರಾವಳಿ ಪ್ರವಾಹಗಳಿಗೆ ಒಟ್ಟಾಗಿ ಕಾರಣವಾಗಬಹುದು. ಎಲ್‌ನಿನೋದಿಂದ ಬರಗಾಲ, ಮಳೆ ಕೊರತೆ ಎದುರಾಗುತ್ತದೆ. ಭಾರತ ಸೇರಿ ವಿವಿಧ ರಾಷ್ಟ್ರಗಳಲ್ಲಿ 2026ರಲ್ಲಿ ಮಳೆ ಕೊರತೆ ಸಂಭವವಿದೆ ಎಂದು ಮುನ್ಸೂಚನೆ ಈಗಾಗಲೇ ನೀಡಲಾಗಿದೆ.

ಜಾಗತಿಕ ತಾಪಮಾನ ಹೆಚ್ಚಳ, ಮುಂದೆ ಕಾದಿದೆ ಸಂಕಷ್ಟ

1877ಕ್ಕೆ ಹೋಲಿಸಿದರೆ ಪ್ರಸ್ತುದಲ್ಲಿ ಸಾಗರಗಳು ಈಗಾಗಲೇ 1.2 ಡಿಗ್ರಿ ಸೆಲ್ಸಿಯಸ್ ಬಿಸಿಯಾಗಿವೆ.2026ರ ಎಲ್ ನಿನೋ ಭೌತಿಕವಾಗಿ ಹೆಚ್ಚು ಪ್ರಬಲವಾಗಿದೆ. ವಿಶ್ವ ಹವಾಮಾನ ಸಂಸ್ಥೆ (WMO) ಈ ಬದಲಾವಣೆ ಖಚಿತಪಡಿಸಿದೆ. ಅಮೆರಿಕಾದ ಎನ್‌ಒಎಎ, ಯುರೋಪಿಯನ್ ECMWF, ಮತ್ತು ಜಪಾನ್‌ನ JMA ಸೇರಿದಂತೆ ಪ್ರಮುಖ ಮುನ್ಸೂಚನಾ ಸಂಸ್ಥೆಗಳು 2026ರ ಮಧ್ಯದ ವೇಳೆಗೆ ಎಲ್ ನಿನೋ ಪ್ರಭಾವ ಉಂಟಾಗುವುದನ್ನು ದೃಢಪಡಿಸಿವೆ. ಕೆಲವು ಮಾದರಿಗಳು 1877ರ ದಾಖಲೆ ಮಟ್ಟಕ್ಕೆ ಇರಲಿವೆ ಅಷ್ಟರ ಮಟ್ಟಿಗಿನ ತಾಪಮಾನ ಹೆಚ್ಚಳ ಕಂಡು ಬರಲಿದೆ ಎಂದು ತಿಳಿಸಿವೆ.

Monsoon Rain 2026; ಮುಂಗಾರು ಮಳೆ ಆರಂಭಕ್ಕೆ ಅನುಕೂಲಕರ ವಾತಾವರಣ: ಕರ್ನಾಟಕಕ್ಕೆ 5 ದಿನ ಮಳೆ ಎಚ್ಚರಿಕೆ
Monsoon Rain 2026; ಮುಂಗಾರು ಮಳೆ ಆರಂಭಕ್ಕೆ ಅನುಕೂಲಕರ ವಾತಾವರಣ: ಕರ್ನಾಟಕಕ್ಕೆ 5 ದಿನ ಮಳೆ ಎಚ್ಚರಿಕೆ

ವಿಶ್ವ ಹವಾಮಾನ ಸಂಸ್ಥೆ ಪ್ರಕಾರ, 2026ರ ಮೇ-ಜುಲೈನಲ್ಲಿ ಎಲ್ ನಿನೋ ಪ್ರಾರಂಭ ಸಂಭಾವನೀಯತೆ ಶೇಕಡಾ 61ರಷ್ಟು ಅಂದರೆ ಕೆಲವು ಮಾದರಿಗಳು ಗರಿಷ್ಠ 3ಡಿಸೆ ಗೂ ಏರಿಕೆ ಆಗಲಿದೆ. 1877ರಲ್ಲಿ 1.4 ಬಿಲಿಯನ್ ಇದ್ದ ಜಾಗತಿಕ ಜನಸಂಖ್ಯೆ ಈಗ 8.2 ಬಿಲಿಯನ್‌ಗೆ ಹೆಚ್ಚಿದೆ. ಎಲ್ ನಿನೋ ಸಂಭವಿಸಿದರೆ, ಪ್ರಭಾವಕ್ಕೆ ಒಳಗಾಗುವವರ ಸಂಖ್ಯೆ ಹಲವು ಪಟ್ಟು ಹೆಚ್ಚಾಗಬಹುದೆಂದು ತಿಳಿಸಲಾಗಿದೆ.

ಈ ರಾಷ್ಟ್ರಗಳ ಮೇಲೆ ಎಲ್‌ನಿನೋ ಪ್ರಭಾವ

ಭಾರತ ಮತ್ತು ದಕ್ಷಿಣ ಏಷ್ಯಾ, ಇಂಡೋನೇಷ್ಯಾ ಮತ್ತು ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ, ಪೂರ್ವ ಆಫ್ರಿಕಾ, ಬ್ರೆಜಿಲ್ ಮತ್ತು ಅಮೆಜಾನ್, ಪೆರು ಮತ್ತು ಈಕ್ವೆಡಾರ್, ದಕ್ಷಿಣ ಯುಎಸ್, ಚೀನಾ ಮತ್ತು ಪೂರ್ವ ಏಷ್ಯಾದ ರಾಷ್ಟ್ರಗಳಲ್ಲಿ ಪರಿಣಾಮಕಾರಿ ಹವಾಮಾನ ಬದಲಾವಣೆ, ಏರಿಳಿತ, ಸಾವು ನೋವಿಗೆ ಎಲ್‌ನಿನೋ ಕಾರಣವಾಗಿದೆ. ಹೀಗಾಗಿ ಈಬಗ್ಗೆ ಹವಾಮಾನ ಸಂಸ್ಥೆಗಳು ಅಲರ್ಟ್ ಆಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+