MSP Hike: ರೈತರಿಗೆ ಕೇಂದ್ರ ಗುಡ್‌ನ್ಯೂಸ್, ಮುಂಗಾರು ಹಂಗಾಮಿನ 14 ಬೆಳೆಗಳ MSP ಹೆಚ್ಚಳ, ಎಷ್ಟು?

ನವದೆಹಲಿ: ಪ್ರಸ್ತಕ 2026-27ರ ಮಾರುಕಟ್ಟೆ ಹಂಗಾರು 14 ಮುಂಗಾರು (ಖಾರಿಫ್) ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ. ಇದರಿಂದ ಜನಪ್ರಿಯ ಖಾರಿಫ್ ಬೆಳೆಯಾದ ಭತ್ತವು ಕ್ವಿಂಟಲ್‌ಗೆ 72 ರೂ (ಶೇ.3) ಹೆಚ್ಚಾಗಿ 2,441 ರೂಪಾಯಿ ತಲುಪಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (ಸಿಸಿಇಎ) ಅನುಮೋದನೆ ನೀಡಿತು. ದೇಶದ ಅನ್ನದಾತರಿಗೆ ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 2026-27ರ ಮಾರುಕಟ್ಟೆ ಋತುವಿಗಾಗಿ ಮುಂಗಾರು ಬೆಳೆಗಳ ಎಂಎಸ್‌ಪಿ ಏರಿಕೆ ಮಾಡಿದ್ದಾಗಿ ತಿಳಿಸಿದೆ.

Centre Hikes MSP

ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಎಂಎಸ್‌ಪಿ ದರವು ಅತ್ಯಧಿಕ ಹೆಚ್ಚಳವು ಸೂರ್ಯಕಾಂತಿ ಬೀಜಕ್ಕೆ ನೀಡಲಾಗಿದೆ. ಒಂದು ಕ್ವಿಂಟಾಲ್ ಸೂರ್ಯಕಾಂತಿ ಬೀಜಕ್ಕೆ 622 ರೂ. ನಂತರದಲ್ಲಿ ಹತ್ತಿ ಕ್ವಿಂಟಲ್‌ ಗೆ 557 ರೂ, ಗುರೆಳ್ಳು/ಹುಚ್ಚೆಳ್ಳು ಕ್ವಿಂಟಲ್‌ ಗೆ 515 ರೂಪಾಯಿ ಮತ್ತು ಕ್ವಿಂಟಾಲ್ ಎಳ್ಳಿಗೆ 500 ರೂಪಾಯಿ ಎಂಎಸ್‌ಪಿ ನೀಡುವಂತೆ ಶಿಫಾರಸು ಮಾಡಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದರು.

 Weather: ಸಾಗರದ ತಾಪಮಾನದಲ್ಲಿ ಭಾರೀ ಏರಿಕೆ: 2026 ಎಲ್‌ನಿನೋ ಅಲರ್ಟ್, ಭಾರತ ಸೇರಿ ಅನೇಕ ದೇಶಗಳಿಗೆ ಹವಾಮಾನ ಸಂಕಷ್ಟ
Weather: ಸಾಗರದ ತಾಪಮಾನದಲ್ಲಿ ಭಾರೀ ಏರಿಕೆ: 2026 ಎಲ್‌ನಿನೋ ಅಲರ್ಟ್, ಭಾರತ ಸೇರಿ ಅನೇಕ ದೇಶಗಳಿಗೆ ಹವಾಮಾನ ಸಂಕಷ್ಟ

ಬೇಳೆ, ಎಣ್ಣೆಕಾಳು ಕೃಷಿಗೆ ಉತ್ತೇಜನ

ಇತ್ತೀಚಿನ ವರ್ಷಗಳಲ್ಲಿ, ಸರ್ಕಾರವು ಧಾನ್ಯಗಳ ಹೊರತಾಗಿ ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳು ಹಾಗೂ ಪೌಷ್ಟಿಕ ಧಾನ್ಯಗಳು, ಬೆಳೆಗಳಿಗೆ ಹೆಚ್ಚಿನ ಬೆಂಬಲ ಬೆಲೆ ನೀಡಿ ಮೂಲಕ ಕೃಷಿಯನ್ನು ಉತ್ತೇಜಿಸುತ್ತಿದೆ. ಬೆಳೆಗಳ ಉತ್ಪಾದನೆಯಲ್ಲಿ ರೈತರಿಗೆ ಹೆಸರುಕಾಳು (ಶೇ 61), ನಂತರ ಬಾಜ್ರಾ (ಶೇ.56), ಮೆಕ್ಕೆಜೋಳ (ಶೇ.56) ಮತ್ತು ತೊಗರಿ (ಶೇ 54) ವೆಚ್ಚಕ್ಕಿಂತ ಅಧಿಕ ಲಾಭ ನೀಡಿದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಬಾರಿಯ ಮೆಕ್ಕೆಜೋಳಕ್ಕೆ ಕಡಿಮೆ ಎಂಎಸ್‌ಪಿ ದೊರೆತಿದ್ದು, ಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ.

ರೈತರಿಗೆ ಲಾಭದಾಯಕ ಬೆಲೆ ಸಿಗುವಂತೆ ಮಾಡಲು ಜೋಳ, ಸೂರ್ಯಕಾಂತಿ ಬೀಜ, ಹತ್ತಿ, ಸೋಯಾಬೀನ್, ರಾಗಿ, ತೊಗರಿ, ಉದ್ದು, ಎಳ್ಳು, ಬಾಜ್ರಾ, ನೆಲಗಡಲೆ, ಭತ್ತ, ಮೆಕ್ಕೆಜೋಳ ಮತ್ತು ಹೆಸರುಕಾಳು ಸೇರಿದಂತೆ 14 ಬೆಳೆಗಳಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ ಶೇ.50 ಹೆಚ್ಚಿನ ಬೆಲೆ/ಆದಾಯ ಸಿಗುವುದನ್ನು ಖಚಿತಪಡಿಸಲು ಈ ಎಂಎಸ್‌ಪಿ ನಿಗದಿ ಮಾಡಿದ್ದೇವೆ ಎಂದರು.

ಮುಂಗಾರು ಬೆಳೆಗಳ ಖರೀದಿ, ಎಂಎಸ್‌ಪಿ ಪಾವತಿ ಲೆಕ್ಕ

* 2014-15 ರಿಂದ 2025-26 ರ ಅವಧಿಯಲ್ಲಿ ಭತ್ತದ ಖರೀದಿಯು 8418 ಲಕ್ಷ ಮೆಟ್ರೀಕ್ ಟನ್‌ (ಎಲ್‌ಎಂಟಿ) ಆಗಿತ್ತು. ಆದರೆ 2004-05 ರಿಂದ 2013-14 ರ ಅವಧಿಯಲ್ಲಿ ಭತ್ತದ ಖರೀದಿಯು 4590 ಎಲ್‌ಎಂಟಿ ಯಷ್ಟಿತ್ತು.

* 2014-15 ರಿಂದ 2025-26 ರ ಅವಧಿಯಲ್ಲಿ 14 ಮುಂಗಾರು ಬೆಳೆಗಳ ಖರೀದಿಯು 8746 ಎಲ್‌ಎಂಟಿ ಆಗಿತ್ತು. 2004-05 ರಿಂದ 2013-14 ರ ಅವಧಿಯಲ್ಲಿ ಖರೀದಿಯು 4679 ಎಲ್‌ಎಂಟಿಯಷ್ಟಿತ್ತು.

* 2014-15 ರಿಂದ 2025-26 ರ ಅವಧಿಯಲ್ಲಿ ಭತ್ತ ಬೆಳೆಯುವ ರೈತರಿಗೆ ಪಾವತಿಸಿದ ಎಂಎಸ್‌ಪಿ ಮೊತ್ತವು 16.08 ಲಕ್ಷ ಕೋಟಿ ರೂ., 2004-05 ರಿಂದ 2013-14ರ ವೇಳೆ ರೈತರಿಗೆ ಪಾವತಿಸಿದ ಮೊತ್ತವು 4.44 ಲಕ್ಷ ಕೋಟಿ ರೂ. ಎಂದು ಸಚಿವರು ವಿವರಿಸಿದರು.

Karnataka Weather: ರಾಜ್ಯದ ಈ ಭಾಗಗಳಲ್ಲಿ ಮುಂದಿನ 5 ದಿನ ಬಿರುಗಾಳಿ ಮಳೆ, ಬೆಂಗಳೂರು ಹವಾಮಾನ ವರದಿ
Karnataka Weather: ರಾಜ್ಯದ ಈ ಭಾಗಗಳಲ್ಲಿ ಮುಂದಿನ 5 ದಿನ ಬಿರುಗಾಳಿ ಮಳೆ, ಬೆಂಗಳೂರು ಹವಾಮಾನ ವರದಿ

* 2014-15 ರಿಂದ 2025-26 ರ ಅವಧಿಯಲ್ಲಿ 14 ಮುಂಗಾರು ಬೆಳೆಗಳನ್ನು ಬೆಳೆಯುವ ರೈತರಿಗೆ ಪಾವತಿಸಿದ ಎಂಎಸ್‌ಪಿ ಮೊತ್ತವು 18.99 ಲಕ್ಷ ಕೋಟಿ ರೂ., ಆದರೆ 2004-05 ರಿಂದ 2013-14 ರ ಅವಧಿಯಲ್ಲಿ ರೈತರಿಗೆ ಪಾವತಿಸಿದ ಎಂ ಎಸ್‌ ಪಿ ಮೊತ್ತವು 4.75 ಲಕ್ಷ ಕೋಟಿ ರೂಪಾಯಿ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+