ಶುಕ್ರ ಸಂಕ್ರಮಣ: ಇಂದಿನಿಂದ ಈ 5 ರಾಶಿಯವರಿಗೆ ಹೆಚ್ಚಾಗುವುದು ಸುಖ ಸಮೃದ್ಧಿ, ಉದ್ಯೋಗದಲ್ಲಿ ಸಿಗುವುದು ಬಡ್ತಿ

ಮೇ 14, ಅಂದರೆ ಇಂದು ಶುಕ್ರನು ಮಿಥುನ ರಾಶಿಯನ್ನು ಪ್ರವೇಶಿಸಿದ್ದಾನೆ. ಬುಧನ ಅಧಿಪತ್ಯದ ಮಿಥುನ ರಾಶಿಗೆ ಶುಕ್ರನ ಸಂಚಾರವು ಐದು ರಾಶಿಯವರಿಗೆ ಪ್ರೀತಿ, ಹಣ ಮತ್ತು ವೃತ್ತಿಜೀವನದಲ್ಲಿ ಯಶಸ್ಸಿಗೆ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಶುಕ್ರನು 23 ದಿನಗಳ ಕಾಲ ಮಿಥುನ ರಾಶಿಯಲ್ಲಿಯೇ ಇರುತ್ತಾನೆ. ನಂತರ ಜೂನ್ 8, 2026 ರ ಸಂಜೆ ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಅವಧಿಯಲ್ಲಿ, ಮೇಷ, ವೃಷಭ ಮತ್ತು ಮಿಥುನ ಸೇರಿದಂತೆ ಐದು ರಾಶಿಯವರ ಜೀವನದಲ್ಲಿ ಸುಖ ಸಮೃದ್ಧಿ ಹೆಚ್ಚಾಗುವುದು. ಪ್ರತಿ ಹಂತಲ್ಲಿಯೂ ಯಶಸ್ಸು ಹೆಚ್ಚಾಗಿ ಐಷಾರಾಮಿ ಜೀವನ ಒದಗಿ ಬರುವುದು.

ಶುಕ್ರ ಸಂಕ್ರಮಣದಿಂದ ಯಾವ ರಾಶಿಯವರಿಗೆ ಅದೃಷ್ಟ:

1.ಮೇಷ ರಾಶಿ:

ಶುಕ್ರ ಸಂಚಾರದ ಸಮಯದಲ್ಲಿ, ಮೇಷ ರಾಶಿಯವರ ಸೃಜನಶೀಲತೆ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ವ್ಯಕ್ತಿತ್ವ ಜನರನ್ನು ಆಕರ್ಷಿಸುತ್ತದೆ. ಮನೆಯಾಗಿರಲಿ, ಕಚೇರಿಯಾಗಿರಲಿ ನಿಮ್ಮ ಮಾತಿಗೆ ಬೆಲೆ ಇರುವುದು. ಇದು ನಿಮ್ಮ ಜೀವನದ ಉತ್ತಮ ಸಮಯ. ನೀವು ಮಾಡುವ ಪ್ರತಿ ಕೆಲಸದಲ್ಲಿಯೂ ಯಶಸ್ಸು ಸಿಗುವುದು.

Venus Transit 2026

2.ವೃಷಭ ರಾಶಿ:

ವೃಷಭ ರಾಶಿಯ ಅಧಿಪತಿ ಶುಕ್ರ.ಶುಕ್ರ ಸಂಚಾರದಿಂದ ಇವರ ಸಂಪತ್ತು ಮತ್ತು ಅಂತಸ್ತು ಹೆಚ್ಚಾಗುವುದು. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಉದ್ಯೋಗದಲ್ಲಿರುವವರಿಗೆ ಬೋನಸ್, ಬಡ್ತಿ ಸಿಗುವುದು. ಸೌಕರ್ಯ ಮತ್ತು ಅನುಕೂಲತೆ ಹೆಚ್ಚಾಗುವುದು.

3.ಸಿಂಹ ರಾಶಿ:

ಹಣ ಮತ್ತು ಖ್ಯಾತಿ ಸಿಗುತ್ತದೆ. ಶುಕ್ರ ಸಂಚಾರದಿಂದ ಸಿಂಹ ರಾಶಿಯವರಿಗೆ ಮನ್ನಣೆ ತರುತ್ತದೆ. ನಿಮ್ಮ ಗೌರವ ಹೆಚ್ಚಾಗುತ್ತದೆ. ನಿಮ್ಮ ಪ್ರೇಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಸಂಭವಿಸುತ್ತವೆ. ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ. ಆದರೆ ಕೆಲಸದ ಹೊರೆ ಹೆಚ್ಚಾಗುವುದು. ಇದರಿಂದ ಮನೆಯಲ್ಲಿ ಕಳೆಯಲು ಸಮಯದ ಕೊರತೆ ಕಾಡಬಹುದು.

ಒಟ್ಟೊಟ್ಟಿಗೆ 4 ರಾಜಯೋಗದಿಂದ ತೆರೆಯುವುದು ಐದು ರಾಶಿಯವರ ಭಾಗ್ಯದ ಬಾಗಿಲು, ಹಣಕಾಸಿನ ಸಮಸ್ಯೆಗೆ ಸಿಗುವುದು ಪರಿಹಾರ
ಒಟ್ಟೊಟ್ಟಿಗೆ 4 ರಾಜಯೋಗದಿಂದ ತೆರೆಯುವುದು ಐದು ರಾಶಿಯವರ ಭಾಗ್ಯದ ಬಾಗಿಲು, ಹಣಕಾಸಿನ ಸಮಸ್ಯೆಗೆ ಸಿಗುವುದು ಪರಿಹಾರ

4.ಧನು ರಾಶಿ:

ಪಾಲುದಾರಿಕೆಯ ಉದ್ಯಮದಲ್ಲಿ ಪ್ರಯೋಜನವಾಗುವುದು. ಶುಕ್ರನ ಸಂಚಾರವು ಧನು ರಾಶಿಯವರಿಗೆ ಪ್ರೀತಿ, ಹಣ ಮತ್ತು ಐಷಾರಾಮಿ ಜೀವನವನ್ನು ತರುತ್ತದೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಲಾಭವಾಗುತ್ತದೆ. ಹಣದ ಒಳಹರಿವು ಹೆಚ್ಚಾಗುತ್ತದೆ. ಸಾಮಾಜಿಕ ಮನ್ನಣೆ ಹೆಚ್ಚಾಗುತ್ತದೆ.

5.ಮೀನ ರಾಶಿ:

ಶುಕ್ರನ ಸಂಚಾರವು ಮೀನ ರಾಶಿಯವರ ಜೀವನದಲ್ಲಿ ಐಷಾರಾಮಿ ವಸ್ತುಗಳು ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸುವುದು. ಹಣಕಾಸಿನ ಸಮಸ್ಯೆ ನಿವಾರಣೆಯಾಗುವುದು. ಸಂಬಂಧಗಳಲ್ಲಿ ಪ್ರೀತಿ ಅರಳುತ್ತದೆ.

ಶುಕ್ರ ಸಂಕ್ರಮಣ ಐದು ರಾಶಿಯವರಿಗೆ ಸಿರಿ ಸಂಪತ್ತು ಒದಗಿಸುತ್ತದೆಯಾದರೂ, ಎರಡು ರಾಶಿಯವರ ಖರ್ಚುಗಳು ಮಿತಿ ಮೀರಿ ಹೆಚ್ಚಾಗುವುದು. ಈ ಎರಡು ರಾಶಿಯವರಿಗೆ ಸಮಸ್ಯೆಗಳು ಎದುರಾಗುವುದು. ಮೇಲಿಂದ ಮೇಲಿಂದ ತೊಂದರೆಗಳಾಗುವುದು. ಆದ್ದರಿಂದ, ಈ ರಾಶಿಗಳಲ್ಲಿ ಜನಿಸಿದವರು ಜೂನ್ 8, 2026 ರವರೆಗೆ ಜಾಗರೂಕರಾಗಿರಬೇಕು.

ಬುಧ ಸಂಕ್ರಮಣದಿಂದ ಈ ರಾಶಿಯವರು ಪಡೆಯಲಿದ್ದಾರೆ ಅಪಾರ ಹಣ, ಹೆಜ್ಜೆ ಹೆಜ್ಜೆಗೂ ಸಿಗುವುದು ಯಶಸ್ಸು
ಬುಧ ಸಂಕ್ರಮಣದಿಂದ ಈ ರಾಶಿಯವರು ಪಡೆಯಲಿದ್ದಾರೆ ಅಪಾರ ಹಣ, ಹೆಜ್ಜೆ ಹೆಜ್ಜೆಗೂ ಸಿಗುವುದು ಯಶಸ್ಸು

1.ಕರ್ಕಾಟಕ ರಾಶಿ:

ಅನಗತ್ಯ ಖರ್ಚುಗಳು ಹೆಚ್ಚಾಗುತ್ತವೆ. ಕೆಲವು ವೆಚ್ಚಗಳು ಪ್ರವಾಸಗಳಿಗೆ ಸಂಬಂಧಿಸಿರುತ್ತವೆ. ಇದು ನಿಮಗೆ ಸಂತೋಷವನ್ನು ತರುತ್ತದೆ. ಆದರೆ, ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡುತ್ತದೆ. ದುಬಾರಿ ವಸ್ತುಗಳ ಮೇಲೆ ಅನಗತ್ಯವಾಗಿ ಖರ್ಚು ಮಾಡುವ ಸಾಧ್ಯತೆ ಇದೆ. ಖರ್ಚನ್ನು ನಿಯಂತ್ರಿಸದೆ ಇದ್ದರೆ ಸಮಸ್ಯೆ ತಪ್ಪಿದ್ದಲ್ಲ.

2.ಮಕರ ರಾಶಿ:

ಮಕರ ರಾಶಿಯವರಿಗೆ ಶುಕ್ರನ ಸಂಚಾರವು ಸಮಸ್ಯೆಗಳನ್ನು ಹೆಚ್ಚಿಸಬಹುದು. ಅನಾರೋಗ್ಯ ಸಮಸ್ಯೆ ಕಾಡಬಹುದು, ವೈದ್ಯಕೀಯ ವೆಚ್ಚಗಳು ಎದುರಾಗಬಹುದು. ಶತ್ರುಗಳಿಂದ ತೊಂದರೆ ಉಂಟಾಗಬಹುದು. ವಿಶ್ರಾಂತಿ ಮತ್ತು ಕೆಲಸದ ಮೇಲೆ ಗಮನಹರಿಸಿ ಮತ್ತು ಕಚೇರಿ ರಾಜಕೀಯದಿಂದ ದೂರವಿರಿ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+