ಬೇಸಿಗೆಯಲ್ಲಿ ಆರೋಗ್ಯವಾಗಿರಬೇಕಾ ? ಈ 7 ಸರಳ ಅಭ್ಯಾಸಗಳನ್ನು ಇಂದೇ ಆರಂಭಿಸಿ
ಬೇಸಿಗೆಯ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ. ಸಣ್ಣ ಪುಟ್ಟ ಉತ್ತಮ ಅಭ್ಯಾಸಗಳನ್ನು ದಿನಚರಿಯಲ್ಲಿ ಅಳವಡಿಸಿಕೊಂಡರೆ ಬೇಸಿಗೆಯಲ್ಲೂ ದೇಹವನ್ನು ಸುಧೃಡ ಮತ್ತು ಆರೋಗ್ಯಕರವಾಗಿಟ್ಟುಕೊಳ್ಳಬಹುದು. ಆರೋಗ್ಯ ತಜ್ಞರು ಸೂಚಿಸುವ 7 ಸರಳ ಬೇಸಿಗೆ ಆರೋಗ್ಯ ಅಭ್ಯಾಸಗಳು ಇಲ್ಲಿವೆ.
ಧ್ಯಾನ ಮತ್ತು ಮನಶಾಂತಿಗೆ ಸಮಯ ನೀಡಿ
ಬಿಸಿಲಿನ ತಾಪಮಾನ ಹೆಚ್ಚಾದಾಗ ಒತ್ತಡ ಮತ್ತು ಕಿರಿಕಿರಿ ಹೆಚ್ಚಾಗಬಹುದು. ಪ್ರತಿದಿನ ಕೆಲವು ನಿಮಿಷ ಧ್ಯಾನ, ಪ್ರಾಣಾಯಾಮ ಅಥವಾ ಆಳವಾದ ಉಸಿರಾಟ ವ್ಯಾಯಾಮ ಮಾಡಿದರೆ ಮನಸ್ಸು ಶಾಂತವಾಗಿರಲು ಸಹಾಯವಾಗುತ್ತದೆ.

ಸಮರ್ಪಕವಾದ ನಿದ್ರೆ ಮಾಡಬೇಕು
ಬೇಸಿಗೆಯಲ್ಲಿ ದೇಹ ಬೇಗ ದಣಿಯುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ಗುಣಮಟ್ಟದ ನಿದ್ರೆ ಮಾಡುವುದು ಆರೋಗ್ಯಕ್ಕೆ ಅಗತ್ಯವಾಗಿದೆ. ಸರಿಯಾದ ನಿದ್ರೆಯು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯಿರಿ
ರಾತ್ರಿ ಪೂರ್ತಿ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಬೆಳಿಗ್ಗೆ ಎದ್ದ ಕೂಡಲೇ ಒಂದು ಗ್ಲಾಸ್ ನೀರು ಕುಡಿಯುವುದು ಉತ್ತಮ. ಇದು ದೇಹವನ್ನು ಹೈಡ್ರೇಟ್ ಮಾಡುವುದು ಮಾತ್ರವಲ್ಲದೆ ಮೆಟಾಬಾಲಿಸಂ ಚುರುಕುಗೊಳಿಸಲು ಸಹ ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ನೀರಿನ ಕೊರತೆ ಆಗದಂತೆ ದಿನಪೂರ್ತಿ ಸಾಕಷ್ಟು ನೀರು ಕುಡಿಯಬೇಕು.
ಪೌಷ್ಟಿಕವಾದ ಉಪಹಾರ ತಪ್ಪಿಸಬೇಡಿ
ಬೇಸಿಗೆಯಲ್ಲಿ ಬೆಳಗಿನ ಉಪಹಾರವನ್ನು ಬಿಡುವುದು ಆರೋಗ್ಯಕ್ಕೆ ಹಾನಿಕಾರಕ. ಹಣ್ಣುಗಳು, ಮೊಸರು, ಇಡ್ಲಿ, ಉಪ್ಮಾ, ಓಟ್ಸ್ ಮೊದಲಾದ ಹಗುರವಾದ ಮತ್ತು ಪೌಷ್ಟಿಕ ಆಹಾರಗಳನ್ನು ಸೇವಿಸುವುದರಿಂದ ದಿನಪೂರ್ತಿ ಶಕ್ತಿ ದೊರೆಯುತ್ತದೆ.
ಪ್ರತಿದಿನ ದೈಹಿಕ ಚಟುವಟಿಕೆ ಮಾಡಿ
ದಿನನಿತ್ಯ ಕನಿಷ್ಠ 30 ನಿಮಿಷ ನಡೆಯುವುದು, ಯೋಗ ಮಾಡುವುದು ಅಥವಾ ಲಘು ವ್ಯಾಯಾಮ ಮಾಡುವುದರಿಂದ ದೇಹ ಚುರುಕಾಗಿರುತ್ತದೆ. ಆದರೆ ಬೇಸಿಗೆಯಲ್ಲಿ ಮಧ್ಯಾಹ್ನದ ಬಿಸಿಲಿನ ವೇಳೆಯಲ್ಲಿ ವ್ಯಾಯಾಮ ಮಾಡುವುದನ್ನು ತಪ್ಪಿಸಿ, ಬೆಳಿಗ್ಗೆ ಅಥವಾ ಸಂಜೆ ಸಮಯ ಆಯ್ಕೆ ಮಾಡುವುದು ಉತ್ತಮ.
ಹೆಚ್ಚು ಹಣ್ಣು ಮತ್ತು ತರಕಾರಿ ಸೇವಿಸಿ
ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆ, ಮಾವು ಮೊದಲಾದ ನೀರಿನ ಅಂಶ ಹೆಚ್ಚಿರುವ ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಇವು ದೇಹವನ್ನು ತಂಪಾಗಿಡಲು ಮತ್ತು ಪೋಷಕಾಂಶ ಒದಗಿಸಲು ಸಹಾಯ ಮಾಡುತ್ತವೆ.
ಮೊಬೈಲ್, ಲ್ಯಾಪ್‌ಟಾಪ್ ಬಳಕೆಗೆ ಮಿತಿ ಇಡಿ
ದೀರ್ಘ ಸಮಯ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಬಳಸುವುದರಿಂದ ಕಣ್ಣುಗಳಿಗೆ ಒತ್ತಡ ಉಂಟಾಗಬಹುದು. ಮಧ್ಯ ಮಧ್ಯೆ ವಿರಾಮ ತೆಗೆದುಕೊಳ್ಳುವುದು, ಕಣ್ಣುಗಳಿಗೆ ವಿಶ್ರಾಂತಿ ನೀಡುವುದು ಮತ್ತು ಹೊರಗಿನ ಚಟುವಟಿಕೆಯಲ್ಲಿ ಭಾಗವಹಿಸುವುದು ಆರೋಗ್ಯಕ್ಕೆ ಒಳ್ಳೆಯದು.
ಬೇಸಿಗೆಯಲ್ಲಿ ಈ ಸರಳ ಅಭ್ಯಾಸಗಳನ್ನು ಅನುಸರಿಸಿದರೆ ಆರೋಗ್ಯ ಸಮಸ್ಯೆಗಳಿಂದ ದೂರವಿದ್ದು ದೇಹವನ್ನು ಚುರುಕಾಗಿ ಮತ್ತು ತಾಜಾಗಿರಿಸಿಕೊಳ್ಳಬಹುದು.














Click it and Unblock the Notifications