ಶೃಂಗೇರಿ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಮೊಬೈಲ್‌ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ!

ಶೃಂಗೇರಿ , ಜೂನ್‌ 29: ಆರೋಗ್ಯ ಸೇವೆಯನ್ನು ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗಿಸುವ ಉದ್ದೇಶದಿಂದ ತಾಲೂಕಿನ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಭಾಗವಾದ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಮೊಬೈಲ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ರೋಟರಿ ಕ್ಲಬ್‌ ಶೃಂಗೇರಿ ಹಾಗೂ ತೆಕ್ಕೂರು ಗ್ರಾಮಸ್ಥರ ಸಹಯೋಗದಲ್ಲಿ ದಿನಾಂಕ 29/06/2026 ಸೋಮವಾರದಂದು ತೆಕ್ಕೂರು ವೃತ್ತದ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ನಡೆಯಲಿದೆ.

Free Health Check up

ದಿನಾಂಕ 30/06/2026ರಂದು ವಿಕಾಸ ಸ್ವಸಹಾಯ ಸಂಘ ಸಿದ್ದರಮಠ ಮತ್ತು ಶ್ರೀ ಸಿದ್ದೇಶ್ವರ ಹಳೆಯ ವಿದ್ಯಾರ್ಥಿಗಳ ಸಂಘ ಇವರ ಸಹಯೋಗದಲ್ಲಿ ಶ್ರಿ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶ್ರೀ ಸಿದ್ದರಂಗ ಟ್ರಸ್ಟ್‌ ಸಿದ್ದರಮಠ ಜಂಟಿಯಾಗಿ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶ್ರೀ ಸಿದ್ಧೇಶ್ವರ ಸ್ವಾಮಿ ದೇವಸ್ಥಾನ , ಸಿದ್ಧಾರಮಠ ಆವರಣದಲ್ಲಿ ಆಯೋಜಿಸಿದೆ.

₹46 ಕೋಟಿ ಇದೆ... ಆದರೆ ಹೆಂಡತಿಯ ಜೀವ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ! ಎನ್‌ಆರ್‌ಐ ಮನಕಲಕುವ ಪೋಸ್ಟ್ ವೈರಲ್
₹46 ಕೋಟಿ ಇದೆ... ಆದರೆ ಹೆಂಡತಿಯ ಜೀವ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ! ಎನ್‌ಆರ್‌ಐ ಮನಕಲಕುವ ಪೋಸ್ಟ್ ವೈರಲ್

ಸಾರ್ವಜನಿಕರು ಈ ಆರೋಗ್ಯ ಸೇವೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಕೋರಲಾಗಿದೆ. ಶಿಬಿರದಲ್ಲಿ ಜನರಲ್ ಮೆಡಿಸಿನ್, ಶಿಶು ವೈದ್ಯಕೀಯ, ಸ್ತ್ರೀರೋಗ, ಮೂಳೆ ಚಿಕಿತ್ಸೆ, ನೇತ್ರ ಚಿಕಿತ್ಸೆ ಹಾಗೂ ದಂತ ಚಿಕಿತ್ಸಾ ತಜ್ಞರು ಭಾಗವಹಿಸಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಿದ್ದಾರೆ ಹಾಗೂ ವೈದ್ಯರ ಸಲಹೆಯ ಮೇರೆಗೆ ಉಚಿತ ಔಷಧವನ್ನು ನೀಡಲಾಗುತ್ತದೆ.

ಮೊಬೈಲ್ ಆಸ್ಪತ್ರೆಯ ಮೂಲಕ ಮಲ್ಟಿ-ಸ್ಪೆಷಾಲಿಟಿ ಸಮಾಲೋಚನೆ, ಇಸಿಜಿ, ಪ್ರಯೋಗಾಲಯ ಪರೀಕ್ಷೆಗಳು, ಎಕ್ಸ್-ರೇ ಸೇರಿದಂತೆ ವಿವಿಧ ಆರೋಗ್ಯ ತಪಾಸಣಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ವಿಶೇಷವಾಗಿ ಮಹಿಳೆಯರ ಆರೋಗ್ಯಕ್ಕೆ ಆದ್ಯತೆ ನೀಡುವ ಸೇವೆಗಳನ್ನೂ ಶಿಬಿರದಲ್ಲಿ ಕಲ್ಪಿಸಲಾಗಿದೆ.
ಶಿಬಿರದ ಅಂಗವಾಗಿ ಎಲ್ಲಾ ರೋಗಿಗಳಿಗೆ ಲ್ಯಾಬ್ ಪರೀಕ್ಷೆಗಳು ಮತ್ತು ಎಕ್ಸ್-ರೇ ಸೇವೆಗಳಲ್ಲಿ ಶೇಕಡಾ 50 ರಿಯಾಯಿತಿ ನೀಡಲಾಗುತ್ತಿದ್ದು, ವೈದ್ಯರ ಉಚಿತ ಸಮಾಲೋಚನೆಯೂ ಲಭ್ಯವಿರುತ್ತದೆ.

ಈ 8 ಅಭ್ಯಾಸ ಬಿಡದಿದ್ದರೆ, ತೂಕ ಇಳಿಸಿಕೊಳ್ಳೋದು ಕಷ್ಟ! 72 ಕೆಜಿಯಿಂದ 49 ಕೆಜಿಗೆ ತೂಕ ಇಳಿಸಿಕೊಂಡ ಫಿಟ್‌ನೆಸ್‌ ಕೋಚ್‌ ಗೈಡ್‌ಲೈನ್
ಈ 8 ಅಭ್ಯಾಸ ಬಿಡದಿದ್ದರೆ, ತೂಕ ಇಳಿಸಿಕೊಳ್ಳೋದು ಕಷ್ಟ! 72 ಕೆಜಿಯಿಂದ 49 ಕೆಜಿಗೆ ತೂಕ ಇಳಿಸಿಕೊಂಡ ಫಿಟ್‌ನೆಸ್‌ ಕೋಚ್‌ ಗೈಡ್‌ಲೈನ್

ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ನೋಂದಣಿ ನಡೆಯಲಿದ್ದು , ಹಳೆಯ ವೈದ್ಯಕೀಯ ದಾಖಲೆಗಳು , ವೈದ್ಯಕೀಯ ಇತಿಹಾಸ ವರದಿಗಳನ್ನು ಕಡ್ಡಾಯವಾಗಿ ತರುವಂತೆ ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ:
ಕಿರಣ್ - 6362967810

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+